Wednesday, November 3, 2021

ಪ್ರೇಮದರಸಿ

ನನ್ನೊಲುಮೆಯ ಹೂವೆ
ಎದೆಬಾಂದಳ ತಾರೆ.
ಕಣ್ಣೊಳ ನೆಲಸಿಹುದು
ಮಂದಾರದ ಮೋರೆ.

ಅನುದಿನ ಹೊಳೆಯುವ
ಅಪರೂಪದ ಚಂದ್ರಿಕೆ.
ಅನುಕ್ಷಣ ಪ್ರೀತಿಸಲು
ಹೃದಯವೇ ವೇದಿಕೆ.

ಮನಭಾವನೆಯ
ರಾಗ ತರಂಗಿಣಿ ಸುಧೆ.
ಎದೆಯಾಗರದಿ
ಪ್ರೇಮದೋಕುಳಿ ನಿಂದೆ.

ಭಾವಾಂತರಂಗದೊಳು
ಪ್ರೇಮದ ಮಂಥನ.
ಸಂಜೀವಿನಿ ನೀನಾಗಲು
ಚಿರಂಜೀವಿ ಈ ಚೇತನ.

ಅಚಲ ನಿಶ್ಚಲವೀ
ಪ್ರೇಮ ಕಾಶ್ಮೀರ.
ಗಿರಿಕನ್ಯೆ ಪ್ರಿಯೇ
ನೀ ಎನ್ನೆದೆ ಶಿಖರ.

     ----ಚಿನ್ಮಯಿ