ಎಲ್ಲರ ಮನೆಯ ಕಥೆಯೇ
ನಮ್ಮನೆದೂನು
ಕಾರು ಖರೀದಿಸಿ ಕಾರಿನ
ಸವಾರಿಯ ತೃಪ್ತಿ
ಯೊಳು ಅತೀತ ಖುಷಿ
ಪಡುವುದು
ಯಾರಿಗಿರಲ್ಲ ಸ್ವಾಮಿ ಆಸೆ ಹೇಳಿ!
ಎನಗೂ ಎನ್ನಣ್ಣನಿಗೂ ಅಷ್ಟಾಗಿ
ಓಡಿಸಲು ಬರದ ಕಾರಣ
ಒಂದ್ 'ಸೆಕೆಂಡ್ ಹ್ಯಾಂಡ್ ಕಾರ್'
ಸಾಕು ಎಂದೇ ನಿರ್ಧರಿಸಿದ್ದೆವು
ಅದರ ಹುಡುಕಾಟದಲ್ಲಿಯೇ
ಅದೆಷ್ಟು ಕಡೆ ಅದೆಷ್ಟು ಶೋರೂಂ
ಹುಡುಕಿದೆವೋ ಲೆಕ್ಕವಿಲ್ಲಾ
ಈ ಪುಣ್ಯಾತ್ಮನಿಗೋ
'ಟಾಪ್ ಎಂಡ್' ಕಾರೇ ಬೇಕಿತ್ತು
ಅದು ಸೆಕೆಂಡ್ಸ್ನಲ್ಲೇ
ಇದಕ್ಕಾಗಿಯೇ ಕೊಂಚ ಲೇಟ್ ಆಯ್ತು.
ಎಲ್ಲಾ ಕಡೆ ಹುಡುಕಿ ಹುಡುಕಿ ಸಾಕಾಗಿ
ಈಗೆ ಒಂದಿನ
ನನ್ 'ಕುಚಿಕು'ವಿನ ಸಂಬಂಧಿಕರೊಬ್ಬರ
'ಪ್ರೀ-ಓನ್ಡ್ ಕಾರ್ ಶೋರೂಂ'ಗೆ ಹೋದೆವು—
ಅಲ್ಲಿ ಸಿಕ್ಕರು ಸಿಗಬಹುದೇನೋ ಎಂಬ
ಮಹದಾಶಯದಲ್ಲಿ
'ಓಲ್ಡ್ ಆದ್ರೂ ಲೇಟೆಷ್ಟ್' ('ಲೇಟ್ ಆದ್ರೂ ಲೇಟೆಷ್ಟ್')
ಎಂಬಂತೆ
ದೇವರು ಅವನ ಕರೆಯ ಆಲಿಸಿ ಅಸ್ತು ಎಂ
ದಂತೆ ಸಿಕ್ತು ಕೊನೆಗೂ ಅವನಿಚ್ಛೆಯ ಕಾರು
ಕಾರೇನೋ ಬೊಂಬಾಟಾಗಿತ್ತು
ನಮ್ಮಿಬ್ರಿಗೂ, ಅಪ್ಪ-ಅಮ್ಮನಿಗೂ ಇಷ್ಟವಾಯಿತು
ಎಲ್ರಿಗೂ ಅದೇನೋ ನಿರ್ಲಿಪ್ತ ಭಾವ ಕೊನೆಗೂ.
ಹಾ ಹಾ ಅದೆಷ್ಟು ಚೆಂದ ಸ್ವಾಮಿ
'ಏರ್ಬ್ಯಾಗ್ ಗಳು, ಎಬಿಎಸ್, ಇನ್ಫೋಟೇನ್ಮೆಂಟ್, ರಿವರ್ಸ್ ಕ್ಯಾಮೆರ, ಮ್ಯಾಗ್ ವೀಲ್ ಗಳು, ಸ್ಪೋರ್ಟಿ ಲುಕ್, ಅದು ಇದು ಇತ್ಯಾದಿ'
—ಎಲ್ಲಾ ಸೌಕರ್ಯಗಳುಳ್ಳಂತಹ ಅದ್ಭುತ ಇಷ್ಟವಾದ ಕಾರು
'ಒಂದು ಲಕ್ಷ ಚಿಲ್ರೆ ಕಿ.ಮೀ.' ಓಡಿದ್ದರೂ
ಬಲು ಸ್ಮೂತಾಗಿತ್ತು ಕಾರು
ಅಷ್ಟಾಗಿ ಎಕ್ಸ್ಟ್ರಾ ಖರ್ಚು ಬೀಳಲಿಲ್ಲ
—ಅದರಿಂದ ಇನ್ನೂ ಕೊಂಚ ಖುಷಿಯೋ ಖುಷಿ.
ಏತನ್ಮಧ್ಯೆ ನಾವಿಬ್ರೂ ಪರಿಪೂರ್ಣವಾಗಿ ಕಲಿಯ
ಲೆಂದು ದಿನನಿತ್ಯ 'ರೌಂಡ್' ಹೊಡೆಯುವ ಮಜ ಒಂದ್ಕಡೆ ಆದ್ರೆ
ಇನ್ನೊಂದ್ಕಡೆ
'ಕ್ಲಚ್ಚು, ಬ್ರೇಕು ಹಾಗು ಆಕ್ಸಿಲರೇಟರ್'
ಗಳು ಕಾಲುಗಳ ಸ್ಪರ್ಶಕ್ಕೆ ಸಿಲುಕಿ
'ಗೇರು ಹಾಗು ಸ್ಟೇರಿಂಗ್'
ಗಳು ಕೈಗಳನ್ನು ಸೋಕಿ
ಸುಖಮಯ ನೋವನ್ನು ಒಂದೇ ಸಮನೆ
ಅನುಭವಿಸಿದವು.
ಅವನೇನೋ ಪುಸ್ಸುಕನೆ
ಬಹು ಬೇಗ ಕಲಿತು ಬಿಟ್ಟ
ಎನಗೋ ಬರೋಬ್ಬರಿ
ಎರಡ್ಮೂರು ವಾರಗಳೇ ಬೇಕಾಯ್ತು
ಕಲಿಯುವ ಆತುರದಲ್ಲಿ ಎರಡ್ ಸಲ
ಡಿಕ್ಕಿ ಹೊಡೆದದ್ದು ಉಂಟು
ಕಾರ್ 'ಡೆಂಟ್' ಆದದ್ದು ಉಂಟು
ಅದೆಷ್ಟು ನೋವಾಯ್ತೋ ಏನೋ
ಪಾಪ ಕಾರಿಗೆ
ಎಷ್ಟೇ ಆದರೂ ಕಲಿಯುವಾಗ
ಇದೆಲ್ಲಾ ಮಾಮೂಲಿ ಬಿಡಿ
ಆದರೇ ಕಲಿತ ಮೇಲಂತೂ ಅವನು
ಪರ್ಫೆಕ್ಟ್ ಡ್ರೈವರ್ ಆದ
ನಾನು ಕೂಡ ಅವನಷ್ಟಿಲ್ಲ ಅಂದ್ರೂ ಓಡಿಸುವೆ—
ಕೂತವರಿಗೆ ಭಯ ಇರ್ಬಾರ್ದಷ್ಟೆ.
ಇದುವೆ ನೋಡಿ 'ನಮ್ಮನೆಯ ಮೊದಲ ಕಾರಿನ ಕಥೆ'.
(ಅಂದ್ಹಾಗೆ ಕಾರ್ ಯಾವ್ದು ಅಂತ ಹೇಳೇ ಇಲ್ಲ ಅಲ್ವಾ
—ಥೂ ಹೋಗಪ್ಪ ಈ ಅರ್ಧಂಬರ್ಧ ನೆನಪಿಂದ ಮರ್ತೆಬಿಟ್ಟಿದೆ
'ಮಾರುತಿ ಸುಜ಼ುಕಿ ಸ್ವಿಫ್ಟ್ ೨೦೧೩ ನೇ ಲಿಮಿಟೆಡ್ ಎಡಿಷನ್ ಪೆಟ್ರೋಲ್ ಮಾಡೆಲ್' ಯೇ ನಮ್ಮ ಕಾರು)
----ಚಿನ್ಮಯಿ