Wednesday, March 22, 2023

ಯುಗಾದಿ

ಅಭ್ಯಂಜನ ಸ್ನಾನದಿಂಡಿದು ತಲ್ಲೀನ ದೇವರ ಪೂಜೆಯವರೆಗೂ ನವ ಚೈತನ್ಯದುಲ್ಲಾಸದ‌ ಹಬ್ಬದಾಚರಣೆಯಂತೆಯೇ ಯುಗ-ಯುಗಗಳಿಗೂ ಒಳ ಮನಸ್ಸಿನ ದೈವಿಕ ಭಾವ ಸದಾ ತೆರೆದಿರಲಿ—

ಅದುವೇ "ಒಳರಾಕ್ಷಸನ ಮರಣ, ಅಸುಳೆಯೆಂ ದೈವದ ಜನನಸೂಚಕ ಸಂವತ್ಸರಾರಂಭ ಕಾಲ."


ಜೀವನದ ಎಷ್ಟೋ ದ್ವಂದ್ವತೆಯ ಸಮರವ ಅಂತ್ಯಗೊಳಿಸಿ ಸಮಚಿತ್ತ ಭಾವದೊಳು ಜೀವಿಸಲೊಂದವಕಾಶ—

ಅದುವೇ "ನವ ಯುಗದ ಆದಿ- ಚೈತ್ರಮಾಸದ ಪ್ರಾರಂಭ ಕಾಲ."


'ಸರ್ವೇ ಜನಾಃ ಸುಖಿನೋ ಭವಂತು.'

'ಸರ್ವ ಜೀವರಾಶಿ ಸುಖಿನೋ ಭವಂತು.'


ಸರ್ವರಿಗೂ ಯುಗಾದಿಯ ಶುಭಾಶಯಗಳು. ಹೊಸ ವರ್ಷದ ಶುಭಾಶಯಗಳು.


       ----ಚಿನ್ಮಯಿ

'ರಾಜ ರತ್ನ-ಯುವರತ್ನ-ಕರ್ನಾಟಕ ರತ್ನ' "ಡಾ|| ಪುನೀತ್ ರಾಜ್‍ಕುಮಾರ್"

ಚಿತ್ರಕ್ಕೆ ಪದ್ಯ- ೬೫


ನಾ ಬರೆಯಲು ಹೋದರೆ ನಿಮ್ಮ ಕುರಿತು,

ಕೈ ನಡುಕ ಶುರುವಾಗಿ ಲೇಖನಿ ಜಾರಿತು.


ಒಂಥರ ಸುಮಧುರ ಭಯದಿ ಎದೆಬಡಿತ ಏರಿದೆ,

ಆ ನಗು ಮುಖವು ಸದಾ ಒಳ-ಒಳಗೆ ಕಾಡಿದೆ.

ನೀವ್ ಇಲ್ಲದಿದ್ದರೂ ಇದ್ದೀರಿ ಅನ್ನೋ ಭಾವನೆ ಒಲವು,

ಅತೀವ ದುಃಖದಲ್ಲೂ ನಗುವುದ ಹೇಳಿಕೊಟ್ಟ ನೀವೇ ಗುರುವು.


ಬದುಕ ಅನುಭವಿಸಲು, ಜೀವಿಸಲು, ಸತ್ತ ಮೇಲೂ ಬದುಕಲು ತೋರಿದ ಮಹಾನ್ ವ್ಯಕ್ತಿತ್ವದ ವ್ಯಕ್ತಿ—

ಎಷ್ಟೋ ಆತ್ಮದೊಳು ಪರಮಾತ್ಮನಾಗಿ ಸದಾ ಜೀವಿಸುತ್ತಿರುವ ಚಿರಂಜೀವಿಯಂತ ಚೇತನ ಶಕ್ತಿ—

ನೀವೇ ಅದು ನೀವೇ ಎಂದೆಂದಿಗೂ ನೀವೇ.


ನಾ ಬರೆಯಲು ಹೋದರೆ ನಿಮ್ಮ ಕುರಿತು,

ಕೈ— ತಾ ಕುಣಿದು ಶಾಯಿಯ ಕುಣಿಸಿತು.


      ----ಚಿನ್ಮಯಿ

ಪ್ರೇಮ ಚಾರಣ

ಕೊರಗಿದ ಬಾನಿನಲ್ಲಿ ಮೂಡಿ ಬರಲು ಚಂದಿರ,

ಕದಡಿದ ನೀರಿನಲ್ಲಿ ನಿನ್ನ ಮೊಗವು ಸುಂದರ.

ತಳಮಳ ಏಕೆ ಇನ್ನೂ ನಾನೇ ಇರಲು ಹತ್ತಿರ!!

ಜೊತೆಯಲೇ ಈಜುವ ಬಾರೇ‌ ಒಲವ ಸಾಗರ..


ಮೇಘಗಳ ಅಳುವಿಗೆ ನಕ್ಕು ಕುಣಿದಂಗೆ ಕಾಂತಾರ,

ಬೇಗುದಿಯ ನೀಗಿಸುವೆ ಇಂದೆ ಇನ್ನೇಕೆ ಬೇಸರ!!

ಸಿಹಿಯಾದ ಅಪ್ಪುಗೆಯ ನೀಡೋ ಒಪ್ಪಿಗೆಯ ನಿರ್ಧಾರ—

ಎದೆಭಾವದಿ ಠಸ್ಸೆಯೊತ್ತು- ಎದೆಯೊಳು ಪ್ರೇಮ ಸಂಚಾರ..


ಅಘನಾಶಿನಿ ಒಳಗಿರೆ ಆತ್ಮ ಪರಿಶುದ್ಧತೆ ಸಾಕಾರ,

ಪ್ರೇಮಗಂಗೆ ಜಳಕವೇ ಶುಧ್ಧ ಪ್ರೇಮೋದಯಕ್ಕ್ ಆಧಾರ.

ಕೋಗಿಲೆಯೇ ನಾಚಿಕೊಂಡ ಪ್ರೇಮದುಂಧುಬಿಯ ಝೇಂಕಾರ—

ದಯಮಾಡಿ ನೀ ಕೇಳೊಮ್ಮೆ- ನೀಡೆನ್ನ ಪ್ರೇಮಕ್ಕೆ ಆಕಾರ.!


       ----ಚಿನ್ಮಯಿ