ಚಿತ್ರಕ್ಕೆ ಪದ್ಯ- ೭೪ |
ದೇವರ ರೂಪಿ ದೈವ ಸ್ವರೂಪಿ
ಅನ್ನಪೂರ್ಣೆಯ ಮಗನು.
ನಿಸ್ವಾರ್ಥ ಹೃದಯೀ ಕರುಣಾಮಯೀ
ವೈಕುಂಠವಾಸಿಯವತಾರನು.
ಅವನೇ ನಮ್ಮವ ರೈತನು.
ಅಖಿಲ ಬ್ರಹ್ಮಾಂಡಗಳ ಅನ್ನದಾತನು.
ಧರೆಯ ತಾಕಿ ಭಕ್ತಿಯ ತೋರಿ
ಎತ್ತುಗಳೊಡನೆ ಉಳುವನು.
ಭತ್ತವ ನಾಟಿ ಪ್ರೇಮದಿ ಸಾಕಿ
ನೀರುಣಿಸುತಲೇ ಬೆಳೆಸುವನು.
ಅವನೇ ನಮ್ಮವ ರೈತನು.
ಅಖಿಲ ಬ್ರಹ್ಮಾಂಡಗಳ ಅನ್ನದಾತನು.
ಬಿಸಿಲಲೂ ಗೆಯ್ಮೆ ಚಳಿಯಲೂ ಗೆಯ್ಮೆ
ಹಗಲಿರುಳ ಲೆಕ್ಕಿಸದವನು.
ಮಳೆಯೇ ವರ ಮಳೆಯೇ ಶಾಪ—
ಆದರೂ ಬಿಡದ ಚಲಗಾರನು.
ಅವನೇ ನಮ್ಮವ ರೈತನು.
ಅಖಿಲ ಬ್ರಹ್ಮಾಂಡಗಳ ಅನ್ನದಾತನು.
ಒಮ್ಮೊಮ್ಮೆ ಲಾಭ ಒಮ್ಮೊಮ್ಮೆ ನಷ್ಟ
ಇಷ್ಟ-ಕಷ್ಟಗಳೊಡನೆ ಜೀವಿಸುವನು.
ಬರೀ ನಷ್ಟ ಭಾರೀ ನಷ್ಟ—
ಏನೇ ಆದರೂ ನಿಸ್ವಾರ್ಥನು.
ಅವನೇ ನಮ್ಮವ ರೈತನು.
ಅಖಿಲ ಬ್ರಹ್ಮಾಂಡಗಳ ಅನ್ನದಾತನು.
ದೈವಕ್ಕೆ ಅನ್ನವ ಪ್ರೀತಿಯ ಜೊತೆಗೆ
ಉಣಿಸುವ ಮಹಾನುಭಾವನು.
ಭೆದವೇ ತೋರದೆ ಎಲ್ಲರ ತೃಪ್ತಿಗೆ
ಏಕೈಕ ಕಾರಣವು ಇವನು.
ಅವನೇ ನಮ್ಮವ ರೈತನು.
ಅಖಿಲ ಬ್ರಹ್ಮಾಂಡಗಳ ಅನ್ನದಾತನು.
----ಚಿನ್ಮಯಿ