Friday, February 20, 2026

ಅನುಸರಣೆ

ಜೀವನದಲ್ಲಿ ಒಳ್ಳೆಯ, ಸ್ಪೂರ್ತಿದಾಯಕ ವ್ಯಕ್ತಿತ್ವದ ವ್ಯಕ್ತಿಯ ಅನುಸರಣೆ ಇರಬೇಕೇ ಹೊರತು ಅನುಕರಣೆ ಅಲ್ಲ.


             ----ಚಿನ್ಮಯಿ

Saturday, February 14, 2026

Horoscope + Horror Vibe = Horror Scope

Horoscopes are Horror Scopes for most of them.


         ----Chinmayi

Truth Beyond Perception

One should never judge or jump to conclusions about many things in life. True understanding comes only through research, reflection, and rediscovering the facts.

 

           ----Chinmayi

Sunday, February 8, 2026

ಹನ್ನೊಂದನೆ ಸ್ವಂತ ಸಾಹಿತ್ಯ ಬರವಣಿಗೆ

ಹಾಡು: ನನ್ನೊಳು ನಿನ್ನೊಳು

ಸಾಹಿತ್ಯ: ಚಿನ್ಮಯಿ


=============================


ಮೇಘರಾಜನ ದನಿಯಿಂದ ರಾಗಹನಿಗಳು ಉದುರಿವೆ.

ಧರೆಯೊಳೆಲ್ಲಾ ಜೀವರಾಶಿ ತಾಳಮೇಳದಿ ಹಾಡಿವೆ.

ನನ್ನಂತರಂಗ ದನಿಯು ಮೆಲ್ಲ ಮೆಲ್ಲನೆ ಏರಿದೆ.

ನಿನ್ನಂತರಂಗ ತಾಳಕ್ಕೆ ಬೆಸೆಯಲು ಕಾದಿದೆ.

ಸಂಗೀತ ಸಮಾಗಮ ಜಗದೊಳು ನನ್ನೊಳು.

ಪ್ರೇಮವು ಸಂಗಮ ನನ್ನೊಳು ನಿನ್ನೊಳು. ||ಪ||


ಹೂವು ಹಣ್ಣು ಸಸ್ಯ ಕಾಶಿ ಸಕಲ ಜೀವರಾಶಿ

ಹರುಷದಿ ನಲಿದು ಕುಣಿದು ಮಣ್ಣಾಗಿದೆ ಜೀವಾಮೃತ.

ನಿನ್ನ ಕಣ್ಣು ನನ್ನ ನೋಟ ಎರಡು ಸೇರಲು

ಹೃದಯವು ಮನದಿ ಮನವು ಹೃದಯದಿ ಅಂಕಿತ. ||೧||


ಸಂಗೀತ ಸಮಾಗಮ ಜಗದೊಳು ನನ್ನೊಳು.

ಪ್ರೇಮವು ಸಂಗಮ ನನ್ನೊಳು ನಿನ್ನೊಳು. || ಅನು ಪ||


ಕೊಳ ಕೆರೆ ನದಿ ಸಾಗರ ಒಂದೊಂದಾಗಿ ಸೇರಲು

ನಯವಾದ ಲಯದಿ ಧರೆಯೇ ನಾಟ್ಯಮಂಜರಿಯ ವೇದಿಕೆ.

ನಿನ್ನ ಕರೆ ನನ್ನ ದನಿ ಜೊತೆಜೊತೆಗೂಡಿಸಿ

ಹಾಡುತಲೆ ನನದು ನಿನದು ಶುರುವು ಪ್ರೇಮ ಸಂಚಿಕೆ. ||೨||


ಸಂಗೀತ ಸಮಾಗಮ ಜಗದೊಳು ನನ್ನೊಳು.

ಪ್ರೇಮವು ಸಂಗಮ ನನ್ನೊಳು ನಿನ್ನೊಳು. || ಅನು ಪ||


      ----ಚಿನ್ಮಯಿ

Monday, February 2, 2026

ಅಧಿಕಾಂಕ್ಷೆ

ಮನುಜನು ಮಣ್ಣನ್ನು ಬಯಸುವನು ಆದರೆ ಕೊನೆಗೆ, ಮಣ್ಣೇ ಮನುಜನನ್ನು ಬಯಸುವುದು.


              ----ಚಿನ್ಮಯಿ

Conscious Multiplication — The Mathematics of Inner Peace

Even after nurturing a hundred positive thoughts and doing a hundred good deeds, a few negative thoughts and a few wrong actions can still steal our peace of mind. It mirrors a simple truth:

"100 multiplied by 0 becomes 0."

So, to protect our inner peace, we must consciously choose to dwell only on those hundred positive thoughts and hundred good deeds, gently ignoring what is negative and harmful. Because when the mind chooses positivity:

"100 multiplied by 1 remains 100." 


              ----Chinmayi

Sunday, February 1, 2026

The Dual Nature of Memory

The Places and Photographs are the Gateway for Memories—

some Miserable and some Memorable.


     ----Chinmayi