ಬಾ ನಲ್ಲೆ ನೀನು ಬಾ
ಹೃದಯದ ಬಾಗಿಲೆಡೆಗೆ.
ಬಾ ನಲ್ಲೆ ಬೇಗ ಬಾ
ನಿಂತಿರುವ ನನ್ನ ಕಡೆಗೆ.
ಕೇಳು ಪ್ರಿಯೆ ಒಮ್ಮೆ ನೀನು
ಮನಸ್ಸಿನ ಭಾವನೆಯನ್ನು!
ನೀನೇ ಮೊದಲ ಸಖಿ ನನಗೆ
ಸಂಶಯವ ಬಿಡು ಇನ್ನು.
ಪ್ರಾಣಕಾಂತೆ, ಪ್ರಾಣಸಖಿಯೇ
ಮಾಡದಿರು ಎಂದಿಗೂ ಚಿಂತೆ.
ಪ್ರಾಣಕಾಂತ, ಪ್ರಾಣಸಖನಾಗಿ
ನಾನಿರುವೆ ಸದಾ ನಿನ್ನ ಜೊತೆ.
ಜೊತೆ ಸೇರಿ ಜೊತೆ ಕೂತು
ಪ್ರೇಮದೌತಣ ಸವಿಯೋಣ.
ಸದಾ ಕಾಲ ಹೀಗೆ ನಾವಿಬ್ಬರೂ
ಖುಷಿಯಿಂದ ಬಾಳೋಣ.
ಬಾ ನಲ್ಲೆ ನೀನು ಬಾ
ಹೃದಯದ ಬಾಗಿಲೊಳಗೆ.
ಬಾ ನಲ್ಲೆ ಬೇಗ ಬಾ
ಪ್ರೀತಿಯ ಸೇರು ಒದ್ದು ಒಳಗೆ.
----ಚಿನ್ಮಯಿ