ಚಿತ್ರಕ್ಕೆ ಪದ್ಯ-೩೩ |
ಮುಂಜಾನೆಯಲ್ಲಿ ಖಗಗಳ ಇಂಪಾದ
ಸಂಗೀತದಿಂದಲೇ ಹೊಸ ದಿನದ ಸ್ವಾಗತ.
ಮುಸ್ಸಂಜೆಯ ಹೊತ್ತಿನಲ್ಲೂ ಅವುಗಳೇ
ಖುಷಿ ಪಡಿಸುವವು ಹಾಡುತ ಸಂಗೀತ.
ಮಧ್ಯಾಹ್ನದ ಸುಡುವ ಬಿಸಿಲಿನಲ್ಲಿಯೂ
ಸಂಗೀತದಿಂದಲೇ ಮನಸ್ಸು ಪ್ರಶಾಂತ.
ರಾತ್ರಿಯ ವೇಳೆಯಲ್ಲಿ ನೆಮ್ಮದಿಗೆ ಆಸರೆ
ಆಗುವುದು ಕೂಡ ನೆಚ್ಚಿನ ಸಂಗೀತ.
ದಿನದ ಪೂರ ಪರಮ ಸ್ನೇಹಿತನಾಗಿರುವ
ಸಂಗೀತವು ದೇಹದ ಕಣ ಕಣದಲ್ಲೂ ಅಂಕಿತ.
ಪ್ರಾಣ ಉಳಿಸುವ ಸಂಜೀವಿನಿ ಸ್ವರೂಪವೂ
ಕೂಡ ಆಗಿದೆ ಮಧುರ ಸುಮಧುರ ಸಂಗೀತ.
ಸಂಗೀತವಿಲ್ಲದ ಬಾಳು ಬಹಳ ಕಠಿಣ.
ಸಂಗೀತದಿಂದಲೇ ಬೆಳಗುವುದು ಚೇತನ.
----ಚಿನ್ಮಯಿ
No comments:
Post a Comment