ರವಿ ಮುಳುಗೋ ವೇಳೆಯದು,
ಕಂಡೆನಾಗ ಬೆಳದಿಂಗಳ ಚಂದಿರ.
ಯಾವ ಊರ ಅಂದಗಾತಿಯೋ,
ಕಂಡ ಒಡನೆಯೇ ತಲೆ ಗಿರಗಿರ.
ಜಡೆಯೇನೋ ಬಲು ಉದ್ದವು,
ಮುಡಿದಿಹಳು ಮಾರು ಮಲ್ಲಿಗೆ.
ನಯನವೇನೋ ಮೀನಿನಂತೆ,
ಅಂದವ ಹೆಚ್ಚಿಸಿಹಳು ಹಚ್ಚಿ ಕಾಡಿಗೆ.
ಅಧರವದು ಸಿಹಿ ಜೇನೇ ಸರಿ,
ನುಡಿದರೆ ಸಿಗುವುದೆಷ್ಟೋ ಮುತ್ತು.
ಕೊರಳ ದನಿ ಕೊಳಲಿನ ಹಾಗೆ,
ನುಡಿಸಿದಷ್ಟೂ ಏರುವುದು ಮತ್ತು.
ಲತೆಯಂತೆಯೇ ಇವಳ ನಡುವು,
ಬಳುಕಿದಾಗ ರೆಪ್ಪೆಗೇನೋ ನಾಚಿಕೆ.
ನನ್ನಾಕೆ ಇವಳೇ ಇಳೆಯ ಅಪ್ಸರೆ,
ಅದರಂತೆಯೇ ಹೆಸರಿವಳದು ಮೇನಕೆ.
ಪ್ರೇಮದೋಲೆಯ ನೀಡಿದೆನಿಂದು,
ಸ್ವೀಕರಿಸಿ ಸುಮ್ಮನಾದಳೊಮ್ಮೆಲೆ.
ಹಿಂತಿರುಗಿ ಹಾಗೆ ಸುಮ್ಮನೆ ನಕ್ಕಳು, ಅರಿತೆನಾಗ-
ನಗುವೇ ಒಪ್ಪಿಗೆಯ ಕರೆಯೋಲೆ.
----ಚಿನ್ಮಯಿ