ಚಿತ್ರಕ್ಕೆ ಪದ್ಯ-೫೪ |
ಪೂರ್ಣಚಂದಿರನು ರವಿಯನ್ನು
ಮರೆಮಾಡಿ ಉದಯಿಸಿದನು,
ಹಾಗೆಯೇ ಅವನು ತೆಂಗಿನ ಗರಿಯ
ಹಿಂದೆಯೇ ನಗುತ ಅಡಗಿಹನು.
ಬೀಸೋ ಗಾಳಿ ಜೊತೆಗಾಯಿತೀಗ
ತೆಂಗಿನ ಗರಿಯ ಮಿಲನ,
ತೂಗೋ ಉಯ್ಯಾಲೆಯಂತೆಯೇ
ಸೊಗಸು ಗರಿಯ ನರ್ತನ.
ಸಾಗರ ಅಲೆಗಳ ಸಿಹಿ ಮುತ್ತು
ಸ್ವೀಕರಿಸಿತೀಗ ಅಂಬರ,
ಅಂಬರದಿಂದಲೇ ಬೆಳದಿಂಗಳ
ಚೆಲ್ಲಿದನು ಪೂರ್ಣಚಂದಿರ.
----ಚಿನ್ಮಯಿ
No comments:
Post a Comment