ಅಂದೊಂದು ದಿನ ಕಂಡೆನವಳ ನಗುತಿದ್ದಲಿ-
ಕೇಳಲಾಸೆ, ಹೇಳಲಾಸೆ ಎಂದೆನಿಸಿ-
ಪಚ್ಚೆ ಹಸುರ ತೊಟ್ಟವಳ ಬಳಿ ನಿಂತೆನು.
ಅವಳ ನಗುವ ಕಂಡೊಡನೆ ಆಗೊಮ್ಮೆ-
ಮಾತು ಬಾರದೆ, ಮೌನ ಕಾಡಿದೆ-
ಎಂದು ಯೋಚಿಸಿ ಕುಂತೆನು!
ನಡುವ ಬಳುಕುತಲಿ ಅವಳಾಕಡೆಗೆ ಹೊಂಟಳು-
'ಏನು ವಿಷಯವೆಂದು?' ಎನ್ನ ಕೇಳಿ-
ಉತ್ತರ ಸಿಗದೆ, ತಿರುಗಿ ನೋಡದೆ ಸೀದಾ ಹೊಂಟಳು.
ಈ ದಿನಕ್ಕೆ ವ್ಯರ್ಥ ಮರುದಿನಕ್ಕೆ ಸಮರ್ಥ-
ವೆಂಬಂತೆ ಧೈರ್ಯ ಮಾಡಿದೊಮ್ಮೆಲೆ-
ಗುಲಾಬಿಯ ಹಿಡಿದೆ, ಅವಳೆಡೆಗೆ ನಡೆದೆ ಪ್ರೇಮವೇಳಲು.
ನಡುವೇನೋ ಸಣ್ಣ, ನುಣುಪಾದ ಕಣ್ಣ-
ನೋಡುತಲೇ ತಲೆ ಗಿರಗಿರನೆ ತಿರುಗಿ-
ದಂತಾದರೂ ಪ್ರೇಮವ ಹೇಳಿಯೇಬಿಟ್ಟೆ.
ಅವಳೇನೋ ನಾಚಿದಳೋ, ಕುಪಿತಗೊಂಡಳೋ-
ಅರಿವಿಲ್ಲ ಎನಗೆ ಕಾಣಿಸಿತಷ್ಟೇ ತಲೆಯಲ್ಲಿದ್ದ ಮಲ್ಲಿಗೆ-
ಅದ ನೋಡಿದೆ, ಸುಮ್ಮನಾದೆ ಗುಲಾಬಿಯ ಎಸೆದುಬಿಟ್ಟೆ.
ಬೇಜಾರಾದ ಎನಗೆ, ಬೇಕೆನಿಸಿತು ಸಲಿಗೆ-
ಆಗಿದ್ದಾಗಲೆಂದು ಮತೊಮ್ಮೆ ಕಾದೆ-
ನಾನು ಅವಳು ಬಹಳೆಂದು.
ಒಂದಾಶ್ಚರ್ಯ ಕಾದಿತ್ತೆನಗೆ ಮೇಗಡೆ-
ನೋಡಲು ರೇಸಿಮೆಯುಟ್ಟು ಬಂದೊಡನೆ-
ಮುತ್ತಿಟ್ಟಳೆನ್ನ ಕೆನ್ನೆಗೆ, ಆ ಘಳಿಗೆ-
ಬಂದಿತ್ತು ಪ್ರೇಮದೌತಣ ಸವಿಯಲೆಂದು.
----ಚಿನ್ಮಯಿ