Thursday, December 30, 2021

ಹದಿಮೂರನೆ ಮರು ಸಾಹಿತ್ಯ ಬರವಣಿಗೆ

ಹಾಡು: "ನಗುತ ತಾಯಿ"

ಚಿತ್ರ: "ಮದಗಜ"

ಮೂಲ ಸಾಹಿತ್ಯ: "ಕಿನ್ನಾಲ್ ರಾಜ್"

ಮೂಲ ಗಾಯನ: "ಸಂತೋಷ್ ವೆಂಕಿ"

ಸಂಗೀತ: "ರವಿ ಬಸ್ರೂರ್"

ಮರುಸಾಹಿತ್ಯ ಹಾಡು: "ಸೋದರ-ಸೋದರಿ ಗೀತೆ"


ಅವಳೇ ಜೀವ ಎನಗೆ ದೈವ ಆಕಾಶದ ಮಿನುಗು ತಾರೆ,

ಬೇರೇ ಯಾವ ಜಾಗವು ಬೇಕಿಲ್ಲ ಅವಳ ಮಡಿಲಲ್ಲೆನ್ನ ಡೇರೆ.

ಉದರದ ಗೆಳತಿ ಸೋದರಿ ಎಂದು ಪದೇಪದೇ ಅಭ್ಯಾಸ ಅವಳಿಂದ ನಂಗೆ,

ಹಾಜರಿ ನಾನೇ ನೆನೆದರೆ ಒಮ್ಮೆ ಭಯದ ಕಡುರಾತ್ರಿಯಲ್ಲೂ ಆ ಕರೆಗೆ. ||ಪ||


ಹಿತ ಸ್ವರದಿಂದ ಕಣ ಕಣದಲ್ಲೂ ಶೃತಿಗೂ ಲಯಕ್ಕೂ ಸುಮಧುರ ನಂಟು,

ಎದೆಯ ಗೂಡೇ ದೇವರಸ್ಥಾನ ಅವಳೇ ದೇವತೆಯ ಪ್ರತಿ ಧ್ವನಿಯಂತೆ.

ಅರೆ ಘಳಿಗೆ ಬಿಡೆನು ಸ್ವಂತವೆಂದೂ ಆಕೆ,

ರವಿ ಇರುವ-ತನಕ ಅವಳಂತು ಕ್ಷೇಮ.

ಪ್ರಭೆ-ಯಂತೆ ಬೆಳಗೋ ಮೋರೆ ಕಂಡಾಗ,

ಮನದೊಳಗೆ ಉಗಮ ಹೊಸತು ಮಧುರ ಪ್ರೇಮ. ||೧||


ಲಕುಮಿ ನಾಥ ಹರನ ಭಾರ್ಯೆ ಜಗದ ಮೊದಲ ರಕುತ ಬಂಧ,

ಅವರೇ ನಾಚಿ ಬೆರಗೋ ಹಾಗೆ ಮೋಹಕ ಪ್ರೀತಿ ನಮ್ಮದೆ ಸ್ವಂತ.

ಅವಳೆಜ್ಜೆ-ಧರೆಗೆ ಸೋಕಿದರೆ ಸಾಕು,

ಕಹಿಬೇನೆ-ಸೋತು ಮಂಡಿ ಊರಿ ಶರಣು.

ಕಾದಾಟದಲ್ಲೂ ಸ್ವರ್ಗ ಸುಖವ ನೀಡೋ,

ಆಂತರ್ಯ ಜ್ಯೋತಿ ಆಕೆ ಬಾಳ ಭಾನು. ||೨|

       ----ಚಿನ್ಮಯಿ

No comments:

Post a Comment