Thursday, January 26, 2023

ಪಫ್ಸ್ ಗಳ ಕಥೆ

ಯಾರ್ಯಾರೋ—

ಮೈದಾ ಒಳಕ್ಕೆ ಈರುಳ್ಳಿ ಹಾಕ್ಬಿಟ್ರೇ ಅದು "ವೆಜ್ ಪಫ್ಸ್" ಆಗಕ್ಕಿಲ್ಲ,

ಮೈದಾ ಒಳಕ್ಕೆ ಸುಮ್ಕೆ ಮೊಟ್ಟೆ ಹಾಕ್ಬಿಟ್ರೇ ಅದು "ಎಗ್ ಪಫ್ಸ್" ಆಗಕ್ಕಿಲ್ಲ,

ಹಾಗೆಯೇ "ಪನೀರ್ ಪಫ್ಸ್", "ಕ್ಯಾಫ್ಸಿಕಮ್ ಪಫ್ಸ್", "ಚಿಕನ್ ಪಫ್ಸ್" ಇತ್ಯಾದಿಗಳು.


ಕೆಲವೇ ಕೆಲವರು ಮಾತ್ರ—

ಮೈದಾ ಒಳಕ್ಕೆ ಕರೆಕ್ಟ್ ತರ್ಕಾರಿ ಮಿಶ್ರಣದಿಂದ ಒಳ್ಳೇ ಟೇಸ್ಟ್ನ "ವೆಜ್ ಪಫ್ಸ್",

ಮೈದಾ ಒಳಕ್ಕೆ ಮೊಟ್ಟೆ ಹಾಕಿ ಕರೆಕ್ಟ್ ಹಾಗೂ ಒಳ್ಳೇ ಟೇಸ್ಟ್ನ "ಎಗ್ ಪಫ್ಸ್",

ಹಾಗೆಯೇ "ಪನೀರ್ ಪಫ್ಸ್", "ಕ್ಯಾಫ್ಸಿಕಮ್ ಪಫ್ಸ್", "ಚಿಕನ್ ಪಫ್ಸ್" ಇತ್ಯಾದಿಗಳನ್ನ ಮಾಡೋರು ಅಂದ್ರೆ.


      ----ಚಿನ್ಮಯಿ

Sunday, January 22, 2023

ದತ್ತಾತ್ರೇಯ

ಚಿತ್ರಕ್ಕೆ ಪದ್ಯ- ೬೪

ಎನ್ನಪ್ಪನೇ ಹರನು.

ಎನ್ನಮ್ಮಳೇ ಮೋಹಿನಿ.

ಜೀವೋದ್ಭವ ಶಕ್ತಿಯೇ ಬ್ರಹ್ಮನು.


ಇವರಿಬ್ಬರಲ್ಲಿಯೇ ದತ್ತಾತ್ರೇಯ ಕಾಣೋ ಮಹಾನ್ ಭಕ್ತ ನಾನೇ ಧನ್ಯ.


         ----ಚಿನ್ಮಯಿ

Tuesday, January 17, 2023

ಬಾಲ್ಯ

ಚಿತ್ರಕ್ಕೆ ಪದ್ಯ- ೬೩

ಮುಗ್ಧತೆ, ಕೊಂಚ ಜ್ಞಾನ, ಹೆಚ್ಚೆಚ್ಚು ಪ್ರೀತಿ.

ಸ್ನಿಗ್ಧತೆ, ಮುಗುಳುನಗು, ಪರಿಶುದ್ಧ ಕಾಂತಿ.

ತಿಳಿ ನೀರ ಹಾಗೆ ಎದೆಯಾಳದ ನಿಲುವು.

ಎಲ್ಲಾ ಒಂದೇ ಎಂಬ ಕಂಗಳೊಳ ಒಲವು.


ಮರಳಿ ಬೇಕೆನಿಸೋ ಆ  ದಿನಗಳು ಬಲು ಸುಂದರ.

ಅಲ್ಲಿಯೇ ಸದಾಕಾಲ ಜೀವಿಸೋ ಭ್ರಾಂತಿಯೂ ಹಿತಕರ.


      ----ಚಿನ್ಮಯಿ

Saturday, January 7, 2023

ನದಿಯಿಂದ ಜೀವನದ ಪಾಠ

ಚಿತ್ರಕ್ಕೆ ಪದ್ಯ- ೬೨


ನದಿಯು,

ಹುಟ್ಟುವುದು ಎಲ್ಲೋ.

ಹರಿಯುವುದು ಇನ್ನೆಲ್ಲೋ.

ಸಾಯುವುದು ಮತ್ತೆಲ್ಲೋ.


ಹುಟ್ಟಿನಿಂದ ಸಾವಿನವರೆಗು ಸಾವಿರಾರು ಅಡೆತಡೆಗಳ ಲೆಕ್ಕಿಸದೆ ಮುನ್ನುಗ್ಗಿ ಸಾಗುವುದು, ಕೊನೆಗೆ ಸಾಗರ ಸೇರುವುದು.

ಜೀವನವು ಸಾರ್ಥಕವು.


ಸತ್ತ ನಂತರ ಮರಳಿ ಜನಿಸುವುದು ಸಾಗರ-ಮೋಡಗಳ ಮಿಲನದಿ ಸಹಾಯದಿಂದ, ಹನಿಗಳ ತೋರಣದ ಭೂ ಸ್ವರ್ಶದಿಂದ.

ನವ ಜನನದ ಖುಷಿಯು.


ನದಿಯು,

ಮರಳಿ ಹುಟ್ಟುವುದು ಅಲ್ಲಿಯೇ.

ಹರಿಯುವುದು ಅದೇ ಹಳೆ ದಾರಿಯಲ್ಲಿಯೇ (ಆದರೇ, ಈಗ ಹೊಸ ಅಡೆತಡೆಗಳ ಹೆದರಿಸಲು ಕೂಡ ಸಿದ್ದವು).

ಸಾಯುವುದು ಅದೇ ಸಾಗರದಲ್ಲಿಯೇ.


ಇದೊಂದು ಮುಗಿಯದ ಅಧ್ಯಾಯ.

ನಿರಂತರ ಮರುಕಳಿಸುವ ದೈವದ ನಿರ್ಧಾರ.

ನದಿಯ ಜೀವನದಿಂದ ಮನುಷ್ಯರು ಬಹಳಷ್ಟು ಕಲಿಯೋದಿದೆ, ನನಗೆ ಆ ದಿನ ಅರಿವಾಗಿ ಈ ಸಾಲುಗಳ ಬರೆದೆ.


         ----ಚಿನ್ಮಯಿ