ಚಿತ್ರಕ್ಕೆ ಪದ್ಯ- ೬೨ |
ನದಿಯು,
ಹುಟ್ಟುವುದು ಎಲ್ಲೋ.
ಹರಿಯುವುದು ಇನ್ನೆಲ್ಲೋ.
ಸಾಯುವುದು ಮತ್ತೆಲ್ಲೋ.
ಹುಟ್ಟಿನಿಂದ ಸಾವಿನವರೆಗು ಸಾವಿರಾರು ಅಡೆತಡೆಗಳ ಲೆಕ್ಕಿಸದೆ ಮುನ್ನುಗ್ಗಿ ಸಾಗುವುದು, ಕೊನೆಗೆ ಸಾಗರ ಸೇರುವುದು.
ಜೀವನವು ಸಾರ್ಥಕವು.
ಸತ್ತ ನಂತರ ಮರಳಿ ಜನಿಸುವುದು ಸಾಗರ-ಮೋಡಗಳ ಮಿಲನದಿ ಸಹಾಯದಿಂದ, ಹನಿಗಳ ತೋರಣದ ಭೂ ಸ್ವರ್ಶದಿಂದ.
ನವ ಜನನದ ಖುಷಿಯು.
ನದಿಯು,
ಮರಳಿ ಹುಟ್ಟುವುದು ಅಲ್ಲಿಯೇ.
ಹರಿಯುವುದು ಅದೇ ಹಳೆ ದಾರಿಯಲ್ಲಿಯೇ (ಆದರೇ, ಈಗ ಹೊಸ ಅಡೆತಡೆಗಳ ಹೆದರಿಸಲು ಕೂಡ ಸಿದ್ದವು).
ಸಾಯುವುದು ಅದೇ ಸಾಗರದಲ್ಲಿಯೇ.
ಇದೊಂದು ಮುಗಿಯದ ಅಧ್ಯಾಯ.
ನಿರಂತರ ಮರುಕಳಿಸುವ ದೈವದ ನಿರ್ಧಾರ.
ನದಿಯ ಜೀವನದಿಂದ ಮನುಷ್ಯರು ಬಹಳಷ್ಟು ಕಲಿಯೋದಿದೆ, ನನಗೆ ಆ ದಿನ ಅರಿವಾಗಿ ಈ ಸಾಲುಗಳ ಬರೆದೆ.
----ಚಿನ್ಮಯಿ
No comments:
Post a Comment