Sunday, January 21, 2024

"ರಾಮ-ಕೃಷ್ಣ"= ಪರಿಪೂರ್ಣ ಮಹಾವಿಷ್ಣು ಅವತಾರಿಗಳು

ಚಿತ್ರಕ್ಕೆ ಪದ್ಯ- ೭೫

ನನ್ನ ಇದುವರೆಗಿನ ಜೀವನವನ್ನು ಇಬ್ಬರ ಜೀವನ ಚರಿತ್ರೆಯನುಸಾರವಾಗಿ ಜೀವಿಸಲು ಪ್ರಯತ್ನಿಸಿದ್ದೇನೆ ಹಾಗೂ ಇನ್ನು ಮುಂದೆಯೂ ಹಾಗೆಯೇ ಜೀವಿಸಲು ಪ್ರಯತ್ನಿಸುವೆನು— 

ಅವರಿಬ್ಬರೇ "ರಾಮ-ಕೃಷ್ಣರು."


ಅವರಿಬ್ಬರ ಯಶೋಗಾಥೆ ಹಾಗೂ ಧರ್ಮ ಹೋರಾಟದ ಕುರಿತು ಓದಿ, ಕೇಳಿ, ನೋಡಿ ಜ್ಞಾನೋದಯವಾಗಿದ್ದೇನೆಂದರೆ— 

ಓರ್ವರು ಸಂಬಂಧಗಳಿಗೆ ಗೌರವ ನೀಡಿದರು-

ತಂದೆಗೆ ತಕ್ಕ ಮಗನಾಗಿ ಬಾಳಿದರು.

ಒಡವುಟ್ಟಿದವರು, ಸ್ನೇಹಿತರು, ಮಕ್ಕಳಿಗಾಗಿ ಜೀವಿಸಿದರು.

ಏಕ ಪತ್ನಿಯ ಪ್ರಿಯಕನಾಗಿದ್ದರು.

ಬಹು ಮುಖ್ಯವಾಗಿ ತನ್ನ ಪ್ರಿಯ ಮಡದಿಗೆ ಕೆಡುಕಾದಾಗ ಇಡೀ ಸ್ರ್ತೀ ಕುಲವನ್ನು ಕಾಪಾಡುವ ಸಲುವಾಗಿ ಧರ್ಮ ಯುದ್ಧವನ್ನೇ ಮಾಡಿ ಅಧರ್ಮವನ್ನು ನಶಿಸಿದರು.

ತನ್ನ ಬದುಕನ್ನು ಕಷ್ಟದಲ್ಲಿ ಸಾಗಿಸಿ ನಂತರ ಸುಖ ಕಂಡರು.


ಇನ್ನೊರ್ವರು-

ಎರಡೂ ತಂದೆ ತಾಯಿಯ ಮುದ್ದು ಮಗನಾಗಿದ್ದರು.

ಒಡಹುಟ್ಟಿದವರು, ಸ್ನೇಹ ಬಳಗ, ಮಕ್ಕಳೊಡನೆ ಲವಲವಿಕೆಯಿಂದ ಜೀವಿಸಿದರು.

ಪ್ರೇಯಸಿ ಸಿಗದಿದ್ದರೂ ಆಕೆಯ ಅನಂತ ಪ್ರಿಯತಮನಾಗಿದ್ದರು.

ಎಂಟು ಪತ್ನಿಗಳ ಪ್ರಿಯಕರನಾಗಿದ್ದರು ಹಾಗೂ ಜೊತೆಗೆ ಹದಿನಾರು ಸಾವಿರ ಜೊತೆಗಾರ್ತಿಯರ ರಕ್ಷಕನಾಗಿದ್ದರು.

ಬಹು ಮುಖ್ಯವಾಗಿ ತನ್ನ ತಂಗಿಯಾದ ದ್ರೌಪದಿಯ ರಕ್ಷಣೆಯನ್ನು ಸ್ರ್ತೀ ಕುಲದ ರಕ್ಷಣೆಯೆಂದೇ ಭಾವಿಸಿ ಧರ್ಮಯುದ್ಧ ಕುರುಕ್ಷೇತ್ರವನ್ನೇ ನಡೆಸಿದರು.

ಸಂಬಂಧಗಳಿಗೆ ಗೌರವ ನೀಡಿದ್ದಾದರೂ ಸಂಬಂಧಿಕರನ್ನೇ ಧರ್ಮಕ್ಕಾಗಿ ಕೊಂದು ಧರ್ಮವನ್ನೇ ಜಯಭೇರಿಯನ್ನಾಗಿಸಿದರು.

ತನ್ನ ಬದುಕನ್ನು ಪರಿಪೂರ್ಣತೆಯಿಂದ ಜೀವಿಸಿದರು.


"ರಾಮನು ಮರ್ಯಾದ ಪುರುಷೋತ್ತಮನು."

"ಕೃಷ್ಣನು ಯುಗ ಯುಗಗಳ ಮಹಾಪುರುಷನು."


                   ----ಚಿನ್ಮಯಿ

No comments:

Post a Comment