Tuesday, February 20, 2024

ತ್ರಿಪದಿ- ೩

ಸಕಲ ಜಗವನು ಜಗದ ನರನನು ನರನ—

ಅಖಿಲ ತನುವನು ನಡುಗಿಸುತ್ತ ವೈರಾಣು

ಸಕಲ ಮನದಲಿ "ನಾನು" ನಶಿಸಿದೆ ಚಿನ್ಮಯಿ


"ಭಾವಾರ್ಥ:"

ಸಮಸ್ತ ಬ್ರಹ್ಮಾಂಡಗಳಲ್ಲಿರೋ ಎಲ್ಲಾ ಮನುಷ್ಯರ ದೇಹಕ್ಕೆ ಖಾಯಿಲೆ ಬರುವುದು ಸಾಮಾನ್ಯ ಹಾಗೂ ಆ ಖಾಯಿಲೆಯ ಮೂಲ ಸೂತ್ರಧಾರನೇ "ವೈರಾಣು." ಮನುಷ್ಯರ ಕಣ್ಣಿಗೂ ಕಾಣದ ಈ ಸಣ್ಣಗಾತ್ರದ ಜೀವಿಯಾದ ವೈರಾಣುವು ದೊಡ್ಡ ಗಾತ್ರದ ಮನುಷ್ಯರ ದೇಹವ ಸೇರಿ ಅದೆಷ್ಟೋ ನೋವು ನರಳಾಟ ಸಂಕಟಗಳಿಗೆ ಕಾರಣವಾಗುತ್ತದೆ ಹಾಗೂ ದೇಹವನ್ನೇ ನಡುಗಿಸುತ್ತದೆ. ಬಹುಶಃ ಇದೆಲ್ಲದರ ಹಿಂದಿರೋ ಮುಖ್ಯ ಕಾರಣವು ಮನುಷ್ಯರ "ನಾನು- ನಾನೇ" ಎಂಬ ಅಹಂ ಅನ್ನು ನಶಿಸುವುದೇ ಅನಿಸುತ್ತದೆ...


         ----ಚಿನ್ಮಯಿ

No comments:

Post a Comment