Wednesday, May 1, 2024

ದೇಹದಿ ಪ್ರೇಮಾಂಕುರ

ಕೇಶರಾಶಿಯ ಬಾಚುವಂಬಲವಾದಾಗ—

ತಂಗಾಳಿಯ ತಾಳಕ್ಕೆ ಕೇಶವು ಕುಣಿದಿದೆ!

ನಾಜೂಕಾಗಿ ಪ್ರೇಮದಿ ಬಾಚೆಂದಾಗ—

ಹೃದಯದುಲ್ಲಾಸವು ಮುಗಿಲನು ತಾಕಿದೆ.


ಕೆಂದಾವರೆ ಕಣ್ಣ ಕಾಂತಿ ಸ್ಪರ್ಶಿಸಲೆಂದಾಗ—

ರೆಪ್ಪೆಗಳ ಸರಸ-ಸಲ್ಲಾಪ ಕಹಿ ಬೇನೆ.

ಹತ್ತಿರ ಬಂದೊಮ್ಮೆ ಕಣ್ಣ ತೆರೆ ಎಂದಾಗ—

ಕಹಿ ಬೇನೆಯೆಲ್ಲವೂ ಸಿಹಿ ಜೇನೆ.


ಕೆಂದುಟಿಯ ಜೇನ ಸವಿಯಲೆಂದಾಗ—

ತಡೆಯಾಜ್ಞೆ ಸರಿಯೇ ಹೇಳೇ ತಂಗಾಳಿ?

ತಂಗಾಳಿ-ತನ್ನೊಡನೆ ಸನಿಹ ಬಾ ಎಂದಾಗ—

ಎದೆಯೊಳಗೆ ಮಜದ ಸಜೆಯೇ ಕಚಗುಳಿ.


ಕೊರಳ ಕೊಳಲ ನಿನಾದ ಆಲಿಸಲೆಂದಾಗ—

ಸರತಿ ಸಾಲೇ ತುಂಬಿರಲು ಸಪ್ಪೆ ಮೋರೆ.

ದೂರದ ದನಿಯೊಂದು ಸಮೀಪಿಸೆಂದಾಗ—

ನನ್ನೊಡನೆ ಮುಗಿಬಿದ್ದವು ಚುಕ್ಕಿತಾರೆ.


ಕಾದಂಬರಿ ಬರೆಯುವಾಗ ಹೊಕ್ಕಳು ತಡೆವಾಗ—

ಬೆರಳುಗಳ ಆಸೆಗೆ ಮೂಡಿತು ಹತಾಶೆ!

ನಡುವು ಬಳುಕುತ ಹೊಕ್ಕಳ ಜರುಗೆಂದಾಗ—

ಶುರುವಾಯ್ತು ನಡುವ-ಬೆರಳ ವರಸೆ.


        ----ಚಿನ್ಮಯಿ

No comments:

Post a Comment