Monday, September 23, 2024

ಬದುಕಿಗೆ ಮಹಾಗುರುಗಳು— "ಡಾ|| ಪುನೀತ್ ರಾಜ್‍ಕುಮಾರ್"

ಚಿತ್ರಕ್ಕೆ ಪದ್ಯ / ಉಲ್ಲೇಖ- ೯೧


ಹೇಗೆ ಬದುಕಬೇಕೆಂಬುದನ್ನು ಹೇಳಿಕೊಟ್ಟು ಬದುಕಿದರಿವರ ತಂದೆ— 

"ಡಾ|| ರಾಜ್‍ಕುಮಾರ್."

ಅವರ ಹಾದಿಯಲ್ಲಿಯೇ ಸಾಗುತ, ತಂದೆಯನ್ನೇ ಮೀರಿಸುವಂತೆ-ತಂದೆಗೆ ತಕ್ಕ ಮಗನಾಗಿ ಬದುಕುತ, ನಮಗೆಲ್ಲರಿಗೂ 'ಬದುಕ' ಕಲಿಸಿದವರಿವರು ನಗುವಿನ ಒಡೆಯ—

"ಡಾ|| ಪುನೀತ್ ರಾಜ್‍ಕುಮಾರ್."


             ----ಚಿನ್ಮಯಿ

Sunday, September 15, 2024

ನನ್ನಣೆಯ ಪುಸ್ತಕದಲ್ಲಿ...

ನನ್ನಣೆಯ ಪುಸ್ತಕದಲ್ಲಿ—


ಈಗಿನವರೆಗಿನ ಬದುಕಿನ ಪುಟಗಳಲ್ಲಿ—

ಆ ಬ್ರಹ್ಮದೇವ ಬರೆಯಲಿಲ್ಲ ಪ್ರೇಮದ ಅಧ್ಯಾಯ...

ಬರೆದಿದ್ದರೂ ಅದು ಕೊಂಚ ಕಾಲಕ್ಕೆ ಸೀಮಿತವಾಯಿತಷ್ಟೇ...


ಇನ್ಮುಂದಿನ ಬದುಕಿನ ಪುಟಗಳಲ್ಲಿ— 

ಬಹುಶಃ ಇದ್ದರೂ ಇರಬಹುದೇನೋ ಪ್ರೇಮ ಪ್ರಣಯ...

ಇದ್ದರೆ ಸಂಪೂರ್ಣ ಭಾಗ್ಯಶಾಲಿ, ಇಲ್ಲದಿದ್ದರೆ ಕನಸಿನ ಪ್ರೇಮಲೋಕಕ್ಕೆ ಭಾಗಶಃ ಚಕ್ರವರ್ತಿಯಾಗುವೆನಷ್ಟೇ...


               ----ಚಿನ್ಮಯಿ

Saturday, September 14, 2024

ಓ ದೇವರೇ ನೀನೆಲ್ಲಿರುವೇ...!?

"ಓ ದೇವರೇ ನೀನೆಲ್ಲಿರುವೇ...!?"—


"ನಾನಿರುವಾಗ ನಿನ್ನೊಳಗೆ ಬೇರೆಲ್ಲಿ ಹುಡುಕುವೆ...!?

ನಿನ್ನೊಳಗೆ ನೀನಾಗಿಯೇ ನಾನು ಬದುಕಿರುವೆ...

ಒಳ ಕಣ್ತೆರೆದು ನೋಡೊಂದು ಸಲ.

ಕಾಣುತ್ತಲೇ ಬಳಿ ಇರುವೆನು ಅನಂತ ಕಾಲ."


                ----ಚಿನ್ಮಯಿ

Sunday, September 8, 2024

ತ್ರಿಪದಿ- ೪

ಅಧರ್ಮೋ ಪರಮಪೂಜ್ಯಂ ಬಂಧು-ಮಿತ್ರರ್—
"ಅಂಧಕಾರಂ-ಅಜ್ಞಾನಂ-ಅಹಂ" ತ್ರಿವಳಿ ಹಿತ ಶತ್ರುಗಳ್—
ಮಾದೇವ ಅಗ್ನಿ ಸ್ಪರ್ಶದಿಂ ನಶಿಸೋ ಚಿನ್ಮಯಿ


"ಭಾವಾರ್ಥ:"
ಅಧರ್ಮವನ್ನು ಆತ್ಮೀಯತೆಯಿಂದ ಪೂಜಿಸೋ ಬಂಧುಗಳು-ಮಿತ್ರರೆಂದರೇ— "ಅಂಧಕಾರ-ಅಜ್ಞಾನ-ಅಹಂಕಾರ"ಗಳು. ಅಧರ್ಮದ ಜೊತೆಗಿ‌ನ ಆತ್ಮೀಯ ಒಡನಾಟದಿಂದಲೇ ನಮಗೆಲ್ಲರಿಗೂ ಈ ಮೂರು ಹಿತಶತ್ರುಗಳು. ನಾವುಗಳು ನಮ್ಮ ದೇಹಕ್ಕೆ ಮಹಾದೇವನ ಅಂಶವಾದ ಅಗ್ನಿಯ ಪವಿತ್ರ ತೇಜಸ್ಸನ್ನು ಸ್ಪರ್ಶಿಸಿ, ಅದರ ಪಾವಿತ್ರತೆಯಿಂದಲೇ ಇವುಗಳನ್ನು ನಶಿಸಿ, ಆತ್ಮವನ್ನು ಶುದ್ಧೀಕರಿಸಿ, ಪರಮಾತ್ಮನ ಸಾಕ್ಷಾತ್ಕಾರಗೊಳ್ಳಿಸಿ ಧರ್ಮವನ್ನು ಕಾಪಾಡಬೇಕು...


         ----ಚಿನ್ಮಯಿ