Wednesday, December 25, 2024

Creating Happiness

Create your own happiness wherever you travel and live.


           ----Chinmayi

Wednesday, December 18, 2024

ಕಿಲಾಡಿ ದೇವರು... ಮೂರ್ಖ ಮಾನವರು...

ನಾವು ಮನುಷ್ಯರು ಈಗಲೂ ಸಹ ನಮ್ಮ ಮೆದುಳನ್ನು ಅದರ ಪೂರ್ಣ ಪ್ರಮಾಣವಾದ ಶೇಖಡ ೧೦೦ ರಷ್ಟು ಉಪಯೋಗಿಸುತ್ತಿಲ್ಲ ಹಾಗೂ ಅದರಂತೆಯೇ ಪರಿಪೂರ್ಣ ಬುದ್ಧಿವಂತರಾಗಿಲ್ಲ, ಇಷ್ಟಿದ್ದರೂ "ನಾನೇ, ನನ್ನಿಂದಲೇ" ಎನ್ನುವ ಅಹಂ ಅದೆಷ್ಟೋ ಅಡಗಿದೆ ನಮ್ಮೊಳಗೆ...


ಇನ್ನೂ ನಾವು ನಮ್ಮ ಮೆದುಳನ್ನು ಶೇಖಡ ೧೦೦ ರಷ್ಟು ಉಪಯೋಗಿಸಿ ಪರಿಪೂರ್ಣ ಬುದ್ಧಿವಂತರಾಗಿಬಿಟ್ಟಿದ್ರೇ "ನಾನೇ ದೇವರೆಂಬ" ಅತಿರೇಖದ ಅಹಂನ ಭ್ರಾಂತಿಯಲ್ಲಿಯೇ ನಾವು ಬದುಕಿ ನಮ್ಮನ್ನು ಹಿಡಿಯೋರ್ಯಾರಿರ್ತ್ತಿರ್ಲಿಲ್ಲ...


ಅದಕ್ಕೇ, ಆ ಕಿಲಾಡಿ ದೇವರು ಮೂರ್ಖ ಮಾನವರಾದ ನಮಗೆ ಆ ಶಕ್ತಿ-ಯುಕ್ತಿ ಕೊಟ್ಟಿಲ್ಲ...


              ----ಚಿನ್ಮಯಿ

Thursday, December 12, 2024

ಕಲಿಯುಗದ ಸಹ-ನರರಿಗ್ಯಕ್ಷ ಪ್ರಶ್ನೆ(ಗಳು)...!?

ಮನುಜಮತ-ಜಾತ್ಯಾತೀತಗಳೊರಟಿಹುದು ಸ್ಮಶಾನ ಯಾತ್ರೆ.

ಆಡಂಬರ-ಒಣಜಂಭದಿಂ ನಡೆದಿಹುದೂರ ಜಾತ್ರೆ.

ನರನಾಡಿಗಳಲ್ಲೆಲ್ಲಾವರಿಸಿಹುದು ಮೌಢ್ಯತೆ.

ಆತ್ಮಶುದ್ಧಿಯಿಲ್ಲದ ಪೂಜೆಗಿಹುದೇ ಪೂಜ್ಯತೆ...!?

ಪಾವಿತ್ರ್ಯತೆ ಈಗಿಹುದೇ ದೇವಸ್ಥಾನಗಳಲ್ಲೆಂಬುದ ನಾ ಕಾಣೆ...!

ಇದ್ದರೂ ದೇವರಲ್ಲಿಹನೇ ಎಂಬುದೊಂದ್ಯಕ್ಷ ಪ್ರಶ್ನೆ...?


                  ----ಚಿನ್ಮಯಿ

Saturday, December 7, 2024

ಕೇಸರಿನಂದನನೇ... ಅಂಜನಿಸುತನೇ...

ಚಿತ್ರಕ್ಕೆ ಪದ್ಯ / ಉಲ್ಲೇಖ- ೯೫


ನಿನ್ನಾತ್ಮ ಜ್ಯೋತಿಯಾಗಿ ಅನಂತಕಾಲಕೂ ನೆಲಸಿ ಸಕಲ ಬ್ರಹ್ಮಾಂಡಗಳ ಬೆಳಗಿಹ ಭಗವಂತ ಪ್ರಭು ಶ್ರೀರಾಮನ ಪಾವಿತ್ರತೆಯೆಂತೆಯೇ||

ನನ್ನೊಳ ನೆಲಸಿಹ ಅಧರ್ಮ ತ್ರಿವಳಿ ಮಿತ್ರರ್— ಅಜ್ಞಾನ, ಅಂಧಕಾರ, ಅಹಂಕಾರಗಳ ನಶಿಸಿ ನನ್ನಾತ್ಮ ಜ್ಯೋತಿಯೊಳು ನೀ ನೆಲಸಿ ಬದುಕ ಬೆಳಗು ಪ್ರಭುವೇ||

🙏🏽🙇🏾‍♂️🕉️🤍


            ----ಚಿನ್ಮಯಿ

Friday, December 6, 2024

ಗೋಧೂಳಿ ವೇಳೆಯಲಿ...

ಚಿತ್ರಕ್ಕೆ ಪದ್ಯ / ಉಲ್ಲೇಖ- ೯೪


ನೇಸರನಿಣು-ಇಣುಕಿ ನಾಚುತ ಮೋಡಗಳ್ಹಿಂದೆಯೇ ಕೆಂಪಾಗಲು,

ಬಾಂದಳ-ಅವನಿಯು ತಂಬೆಳಕಲೇ ತಂಪಾದವು.

ಖಗ-ಮೃಗಗಳ ಇಂಚರ ಎಲ್ಲೆಡೆಯೂ ಇಂಪಾಗಲು,

ಮರ-ಗಿಡ-ತರು-ಲತೆ-ಬಳ್ಳಿಗಳು ಕಂಪಿಸಿದವು.

ನೀಲಿ-ಕೆಂಪು-ಕಪ್ಪು ಮಿಶ್ರಣದ ಅಮೋಘ ವೀಕ್ಷಕ ‌ನಾನಾಗಲು,

ನಯನಗಳ ವಿಹಂಗಮ ಸೆರೆಯೊಳಾರಂಭ ಧನ್ಯತಭಾವದ ಸೃಷ್ಟಿ ಪೂಜೆಯು.


               ----ಚಿನ್ಮಯಿ

ನೀ ಸಾಯುವ ಸಮಯದಲ್ಲಿ... At the time of your death...

ನೀ ಸಾಯುವ ಸಮಯದಲ್ಲಿ ನಿನ್ನ ಗುರುತಾಗಿ ಅಳಿಸಲಾಗದಂತಹ ಶಾಹಿಯಂತೆ ಉಳಿಯುವುದೊಂದೇ—

ನಿರ್ಲಿಪ್ತ, ಸಂತೋಷ, ಆತ್ಮತೃಪ್ತ ಭಾವದಿ ಜೀವಿಸಿದೆನೆಂದು...!?


      ----ಚಿನ್ಮಯಿ


At the time of your death, the only thing that remains as an indelible mark of yours is—

that you lived a life of detachment, happiness and self-satisfaction...!?


       ----Chinmayi