ಚಿತ್ರಕ್ಕೆ ಪದ್ಯ / ಉಲ್ಲೇಖ- ೯೪ |
ನೇಸರನಿಣು-ಇಣುಕಿ ನಾಚುತ ಮೋಡಗಳ್ಹಿಂದೆಯೇ ಕೆಂಪಾಗಲು,
ಬಾಂದಳ-ಅವನಿಯು ತಂಬೆಳಕಲೇ ತಂಪಾದವು.
ಖಗ-ಮೃಗಗಳ ಇಂಚರ ಎಲ್ಲೆಡೆಯೂ ಇಂಪಾಗಲು,
ಮರ-ಗಿಡ-ತರು-ಲತೆ-ಬಳ್ಳಿಗಳು ಕಂಪಿಸಿದವು.
ನೀಲಿ-ಕೆಂಪು-ಕಪ್ಪು ಮಿಶ್ರಣದ ಅಮೋಘ ವೀಕ್ಷಕ ನಾನಾಗಲು,
ನಯನಗಳ ವಿಹಂಗಮ ಸೆರೆಯೊಳಾರಂಭ ಧನ್ಯತಭಾವದ ಸೃಷ್ಟಿ ಪೂಜೆಯು.
----ಚಿನ್ಮಯಿ
No comments:
Post a Comment