Thursday, July 3, 2025

ಹೃದಯ-ಮನಗಳೊಡನೆ ಆತ್ಮ ಸಂಭಾಷಣೆ...

ನಿನ್ನೂರು ತೊರೆದರೇನಂತೆ.

ಊರೂರು ಕರೆದರೇನಂತೆ.

ಹೋದೂರು ನಿನ್ನದಿದ್ದಂತೆ.

ಹೊಂದಿಕೊಂಡು ಬಾಳು ಮನವೆ..

ಬಾಳ ನಿತ್ಯ ರಾಗ ಮೊಳಗಲು.

ಬಾಳ ದಿವ್ಯ ಜ್ಯೋತಿ ಬೆಳಗಲು.

ಇದು ಅನಿವಾರ್ಯವಂತೆ.


ಒಳಗೊಳಗೆ ದುಃಖವಂತೆ.

ದಿನವಿಡೀ ಬರೀ ಚಿಂತೆ.

ಬಾಳೆಂದರೆ ಇದೇ ಸಂತೆ.

ಓಡಿಹೋದರೆ ತರವೇ ಮನವೆ...!?

ಜಗವು ಸಾಗೋ ರೀತಿ ಇದುವೆ.

ಜಗವ ಗೆಲ್ಲೋ ನೀತಿ ಇದುವೆ.

ಮತ್ತೆ ದಿನಕರನುಟ್ಟುವಂತೆ.


ದಿನಗಳುಚ್ಚು ಕುದುರೆಯಂತೆ.

ಗುರಿಯಾಗಬೇಕು ಕರ್ಮವಷ್ಟೇ.

ಆಗು ನೀ ಕಡಲಲೆಗಳಂತೆ.

ಮತ್ತೆ ಮರಳುವೆ ತೀರಕೆ ಮನವೆ..

ಪ್ರತಿ ಕ್ಷಣಗಳ ಹೋರಾಟ.

ಕೆಲವು ದಿನಗಳ ಒದ್ದಾಟ.

ಎಲ್ಲವೂ ಮೃಷ್ಟ ಭೋಜನಕ್ಕಂತೆ.


ಬಾಳ ಚಕ್ರ ತಿರುಗಿದಂತೆ.

ಎಲ್ಲಾ ಸವೆದೋಗುವುದಂತೆ.

ಬದುಕಿಬಿಡು ಈ ಕ್ಷಣದ ಜೊತೆ.

ಜಂಜಾಟಕಷ್ಟೇ ಸಿಲುಕಬೇಡ ಮನವೆ..

ಖಗ-ಮೃಗ, ಸಸ್ಯಕಾಶಿ, ವೃಕ್ಷಗಳು ನಲಿಯುವಂತೆ.

ಪ್ರಕೃತಿಯೊಡನೆ ಸಾಂಗತ್ಯವು ನೃತ್ಯ ನಾಕವಂತೆ.

ಅದುವೇ ನಿಜ ಜೀವನವಂತೆ..


      ----ಚಿನ್ಮಯಿ