Sunday, July 6, 2025

ಸೌಖ್ಯ ಜೀವನ...

ಚಿತ್ರಕ್ಕೆ ಪದ್ಯ / ಉಲ್ಲೇಖ- ೧೧೨


ಬಾಂದಳದಡಿ ಪುಟ್ಟ ಗೂಡೊಂದಿತ್ತು.

ನಾಲ್ಕು ಜನರ ನಲಿವು ಮನೆಮಾಡಿತ್ತು.

ಪಕ್ಕನೇ ಗಿಡ ಮರ ಸಸ್ಯಕಾಶಿ ಕುಣಿದಾಡಿತ್ತು.

ಗುನು ಗುನುಗುತ ಹಕ್ಕಿಯು ಹಾಡುತಲ್ಲಿತ್ತು.

ಜಳಜಳನೆ ಜರಿಯೊಂದು ಹರಿಯುತಲ್ಲಿತ್ತು.

ಮೆಲ್ಲಮೆಲ್ಲನೆ ಮೀನೊಂದು ಪುಟಿಯುತಲ್ಲಿತ್ತು.

ಜಿನುಜಿನುಗೋ ಹನಿಗಳು ಸರಸವಾಡಿತ್ತು.

ಇದ ತಾ ಕಂಡು ಬೆಳದಿಂಗ್ಳು ನಾಚಿಕೊಂಡಿತ್ತು.


ಈಗ ಎಲ್ಲವೂ ಎಲ್ಲಿ ಮಾಯವಾಯ್ತು...?

ಬದುಕು ಬಹಳ ಬದಲಾಗಿ ಬಿಡ್ತು...


‌ ‌‌‌‌    ----ಚಿನ್ಮಯಿ

No comments:

Post a Comment