ಚಿತ್ರಕ್ಕೆ ಪದ್ಯ/ಸಣ್ಣ ಕಥೆ-೧೮ |
ಸಣ್ಣ ಪ್ರಾಯದಿಂದಲು ಆಕಾಶವನ್ನೇ
ದಿಟ್ಟಿಸಿ ನೋಡುತ್ತ ಬೆಳೆದೆ.
ಆಕಾಶದಾಚೆಗೆ ಏನಿರಬಹುದೆಂದು
ಗಾಢವಾಗಿ ಯೋಚಿಸುತ್ತಿದೆ!
ಬೆಳೆಯುತ್ತ ಶಾಲೆಯಲ್ಲಿ ಕೆಲವು ಬಾಹ್ಯಾಕಾಶ
ವಿಚಾರಗಳನ್ನು ತಿಳಿದುಕೊಂಡೆ.
ಸೂರ್ಯ, ಚಂದ್ರ, ಗ್ರಹಗಳು, ತಾರೆಗಳನ್ನು
ತಲುಪಬೇಕೆಂದು ಹಂಬಲಿಸುತ್ತಿದೆ.
ಕನಸನ್ನು ಪೂರ್ಣಗೊಳಿಸಲು ಕಾಲೇಜಿನಲ್ಲಿ
ಖಗೋಳ ವಿಜ್ಞಾನವನ್ನು ಓದಿದೆ.
ಉತ್ತೀರ್ಣನಾಗಿ ಕೆಲಸವನ್ನೂ ಗಿಟ್ಟಿಸಿ ಬಾಹ್ಯಾಕಾಶದ
ಗ್ರಹದ ಮೇಲೆ ಸಂತಸದಿ ಓಡಿದೆ.
----ಚಿನ್ಮಯಿ
No comments:
Post a Comment