Saturday, June 13, 2020

ತ್ರಿಮೂರ್ತಿಗಳಿಂದ ಬದುಕಿನ ಪಾಠ


ಚಿತ್ರಕ್ಕೆ ಪದ್ಯ-೨೩

ಬ್ರಹ್ಮ, ವಿಷ್ಣು, ಮಹೇಶ್ವರರು ಬ್ರಹ್ಮಾಂಡದ
ಸೃಷ್ಟಿ, ಸ್ಥಿತಿ, ಲಯದ ಸೂತ್ರದಾರರು.
"ಅಹಂ" ಇಲ್ಲದೆ, "ನಾನೇ" ಎನ್ನದೆ, ಒಬ್ಬರಿಗೊಬ್ಬರು
ತಮ್ಮ ತಮ್ಮ ಕರ್ತವ್ಯವ ಮಾಡುವರು.

ಒಮ್ಮೆ ಸರಸಿಜಭವನು, ಹರಿಹರರಿಗೆ ನಮಿಸಿದರೆ
ಇನ್ನೊಮ್ಮೆ ನಾರಾಯಣನು, ಬ್ರಹ್ಮ ಈಶರಿಗೆ ನಮಿಸುವನು.
ಇವರಿಬ್ಬರ ಸರದಿ ಮುಗಿದ ಮೇಲೆ ಕೊನೆಯದಾಗಿ
ದೇವರಿಗೆಲ್ಲಾ ದೇವನಾದ ಮಹದೇವನು, ವಿರಿಂಚಿ ಅಚ್ಯುತರಿಗೆ ನಮಿಸುವನು.

ತ್ರಿಮೂರ್ತಿಗಳೇ ಪರಸ್ಪರ ಸೌಹಾರ್ದ ಮೆರೆದಿರುವಾಗ
ಇನ್ನೂ ನರರಾದ ನಮಗೇತಕೆ ಬೇಕು ಅಸೂಯೆ ದ್ವೇಷವೆಲ್ಲಾ!
ಪ್ರೀತಿಯ ಹಂಚಿ ಬಾಗುವುದೇ ಶ್ರೇಷ್ಠ, ಇನ್ನಾದರೂ
ತಗ್ಗಿ ಬಗ್ಗಿ ಬಾಳುವುದನ್ನು ಕಲಿಯಬೇಕು ಇಲ್ಲದಿದ್ದರೆ ಉಳಿಗಾಲವಿಲ್ಲ.
        ----ಚಿನ್ಮಯಿ

No comments:

Post a Comment