ಹೇಗೆ ಕಾಮನಬಿಲ್ಲು ಬಿಸಿಲು-ಮಳೆಯ ಮಿಲನದ ಫಲವೋ,
ಹೇಗೆ ಹಣತೆಯ ಬೆಳಕು ಎಣ್ಣೆಯ ಅವಲಂಬಿತವೋ,
ಹಾಗೆಯೇ,
ಎಲ್ಲರೂ ಇಲ್ಲಿ ಸಮಯದ ಗೊಂಬೆಯೇ.
ಸಮಯಕ್ಕೆ ಮಾತ್ರ ನೆನೆಯುವ ಸ್ವಾರ್ಥಿಗಳೇ.
ಹೇಗೆ ಊಸರವಳ್ಳಿಯು ಬೇಕಾದಾಗ ಬಣ್ಣವ ಬದಲಿಸುವುದೋ,
ಹೇಗೆ ಕೋಗಿಲೆಯು ತನ್ನ ಮೊಟ್ಟೆಗಳನ್ನ ಕಾಗೆಯ ಮೊಟ್ಟೆಗಳ ಜೊತೆ ಬೆರೆಸುವುದೋ,
ಹಾಗೆಯೇ,
ಎಲ್ಲರೂ ಇಲ್ಲಿ ಕೆಲಸ ಮುಗಿಯುವವರೆಗೂ ಜೊತೆಗಾರರೇ.
ಕೆಲಸ ಮುಗಿದ ನಂತರ ಹಠಾತನೇ ಕಣ್ಮರೇ.
ಹೇಗೆ ರಸ್ತೆಯಲಿ ಓಡುವ ಗಾಡಿಗೂ ಡೆಡ್ ಎಂಡ್ ಇರುವುದೋ,
ಹೇಗೆ ಬಲುದೂರ ಕರೆದೊಯ್ಯೋ ಗಾಡಿಗೂ ಕೆಲವು ಸಲ ಬಯ್ಯುವೆವೋ,
ಹಾಗೆಯೇ,
ಕೆಲಸ ಮುಗಿದ ನಂತರ ನಮ್ಮನ್ನು ಮರೆಯುವರು.
ಧನ್ಯವಾದಗಳು ಕೂಡ ಹೇಳದೆ ಹೊರಟೋಗುವರು ಹಾಗೂ ಮತ್ತೆ ಕೆಲಸದ ನಿಮಿತ್ತ ಬರುವರು.
ಮನುಜನು ಗಾಳಿ-ನೀರು-ಬೆಳಕು-ಆಹಾರಗಳ ಬಂಧಿತನು,
ಇಷ್ಟಿದ್ದರೂ ಜಂಭದಿ "ನಾನು, ನಾನೇ" ಎಂದು ಮೆರೆವನು.
ಒಳಿತು ಮಾಡು ಮನುಸ,
ಕಷ್ಟದಿ ಕೈಯಿಡಿದವರ ನೆನೆಯುತಿರು ದಿವಸ.
----ಚಿನ್ಮಯಿ