ಒಲವ ದಾರಿಯಲಿ ನಡೆವಾಗ ಎದುರು ಬಂದಳೋರ್ವ ಮನಮೋಹಿನಿ,
ನಯನಗಳ್ಕುಣಿಯಲು ಮೊಗವರಳಲು ಕಾರಣ-
ಎದೆದೋಟದ ಸುಹಾಸಿನಿ.
ಕೇಶವ ಕೆದರುತ ಹಿಂದಿರುಗಿ ನೋಡುತ ಮರೆತೆ ಮನೆದಾರಿಯ,
ಆಕೆಯು ಹಿಂದಿರುಗಲು ತಲೆಯ ಕೆಳಗಿಳಿಸಲು ಮೇಲ್ನೋಡಿ-
ಜಿಗಿಯಲು ಪ್ರೇಮೋದಯ.
ಉದಯರಾಗ ಮೂಡಲು ಪ್ರಣಯಗೀತೆ ಹಾಡಲು ಶುರುವಾಯ್ತು ಪಯಣವು,
ಎದುರು ಬಂದು ನಿಂತರು ಪಕ್ಕಕ್ಕೆ ಸರಿದು ಹೋದಳು-
ಪ್ರಣಯವಾಯ್ತು ವಿರಹವು.
ಒಮ್ಮೆ ಹಿಂದೆ ನೋಡಲು ಹಕ್ಕಿ ಇನೋರ್ವ ಹೆಗಲೇರಿದೆ ಪ್ರಣಯಗೂಡು ಮುರಿದಿದೆ,
ನಾನೇ ತಪ್ಪು ತಿಳಿದೆನೋ ಅವಳೇ ಬಿಟ್ಟು ಹೋದಳೋ ಅರಿಯದೆ-
ಮನೆಯೆಡೆಗೆ ಸಾಗುತ ವಿರಹಗೀತೆ ಹಾಡಿದೆ.
----ಚಿನ್ಮಯಿ
No comments:
Post a Comment