Saturday, June 4, 2022

ಒಲವ ರಾಗ

ಹೂವಿನೆಡೆಗೆ ದುಂಬಿಯ ಪಯಣ,

ಅವನೆಡೆಗೆ ನನ್ನಯ ಗಮನ,

ದುಂಬಿಗೆ ಸಿಹಿಯ ಸುಖಭೋಗ,

ನನ್ನಲ್ಲಿ ಶುರುವು ಪ್ರಣಯ ಯಾಗ,

ಹಾ! ಹಾ! ಇದುವೆಯಾ ಒಲವ ರಾಗ!?


ಧರೆಗೂ ಬಾನಿಗೂ ನಡುವೆ ಅಂತರ,

ಅವನನ್ನು ಸೇರಲು ಮನಸ್ಸಿಗೆ ಆತುರ,

ಮಳೆಯ ಸೇತುವೆ ಪ್ರಣಯ ಮಾರ್ಗ,

ಎದೆಯೊಳಗಿನ ಅನುಭವ ಅಮೋಘ,

ಹಾ! ಹಾ! ಇದೆಂಥಹ ಒಲವ ರಾಗ!


ಚಿಗುರೆಲೆಗಳ ನರ್ತನಕ್ಕೆ ಗಾಳಿಯೇ ಮಾಲಿಕ,

ಅವನ ಸ್ಪರ್ಶದಿಂದಲೇ ಪ್ರೇಮವು ದ್ಯೋತಕ,

ಮರಗಳಿಗಂತು ಮಿಲನವ ಸವಿಯುವ ಸುಯೋಗ,

ಇದುವೇ ಇರಬಹುದೇನೋ ವಾಸಿಯಾಗದ ಪ್ರೇಮರೋಗ!

ಹಾ! ಹಾ! ಸುಮಧುರವು ಒಲವ ರಾಗ.

               ----ಚಿನ್ಮಯಿ

No comments:

Post a Comment