ತಾಯಿ ಹೆತ್ತರು, ತಂದೆಯ ಕಂಗಳಲಿ ಆನಂದಭಾಷ್ಪ.
ಪುಟ್ಟ ಕೈ ಕಾಲುಗಳ ಮೆಲ್ಲನೆ ತಾಕುತ ಅನುಭವಿಸುವವ- ಅಪ್ಪ.
ಎತ್ತಾಡಿಸಿ, ಕೈ ಹಿಡಿದು ನಡೆಸಿ, ಹೆಗಲೇರಿಸಿ ತೋರಿದರು ಪ್ರಪಂಚ-
ಅದೇನೇ ಕಂಡರು ಅವರ ಆ ನಗುವೊಂದೇ ಸುಂದರ ಪ್ರಪಂಚ.
ತುಂಬು ಹೃದಯದಿ ಪ್ರೇಮ ಧಾರೆಯೆರೆದು ಕೋಪದಿಂದಲೇ ಪ್ರೀತಿಸೋ ಏಕೈಕ ವ್ಯಕ್ತಿ.
ಬೇಕು ಬೇಡವ ತಿಳಿದು ತನಗೆ ಕಷ್ಟವಾದರೂ ಇಷ್ಟದಿ ಕೊಡಿಸೋ ಮಹಾನ್ ಶಕ್ತಿ.
ಮನೆಯನ್ನು ಒಬ್ಬರೇ ಮುನ್ನಡೆಸಿ ತನಗೆಷ್ಟೇ ದುಃಖವಿದ್ದರೂ ತೋರದ ಜೀವ.
ಮನೆಯವರ ಸುಖ ಸಂತೋಷವಷ್ಟೇ ಅವರ ಬಾಳಿನ ಮುಖ್ಯ ಧ್ಯೇಯ.
ಬಾಳಿನುದ್ದಕ್ಕೂ ಬೆವರಿಳಿಸಿ ದುಡಿದ ಅಪ್ಪನಿಗೇ ಸರಿಸಾಟಿ ಯಾರಿರಲು ಸಾಧ್ಯ!
ಆ ಪವಿತ್ರ ಬೆವರಿಂದಲೇ ಈ ದೇಹ ಬೆಳೆದು ಜೀವದ ಉಸಿರಾಗಿರುವುದು ಪರಮ ಸತ್ಯ.
ತಾಯಿ ಮಕ್ಕಳಿಗೆ ಗುರುವಾದರೇ ತಂದೆಯೇ ಕುಟುಂಬಕ್ಕೆ ಗುರುವು.
ತಾಯಿ ಆತ್ಮವಾದರೇ ತಂದೆಯೇ ಆತ್ಮದಲ್ಲಡಗಿಹ ಪರಮಾತ್ಮನು.
----ಚಿನ್ಮಯಿ
No comments:
Post a Comment