Wednesday, November 26, 2025

ಹದಿನೈದನೆ ಮರುಸಾಹಿತ್ಯ ಬರವಣಿಗೆ

ಹಾಡು: ವಸೀಗರ (ಜ಼ರಾ ಜ಼ರಾ)

ಚಿತ್ರ: ಮಿನ್ನಲೆ (ರೆಹನಾ ಹೈ ತೆರೆ ದಿಲ್ ಮೇಂ)

ಮೂಲ ಸಾಹಿತ್ಯ: ತಮರೈ (ಸಮೀರ್)

ಮೂಲ ಗಾಯನ: ಬಾಂಬೆ ಜಯಶ್ರೀ

ಸಂಗೀತ: ಹ್ಯಾರಿಸ್‌ ಜಯರಾಜ್

ಮರುಸಾಹಿತ್ಯ ಹಾಡು: ದಿನ ದಿನ

------------------------------------------------------

------------------------------------------------------

(Female Version)

ದಿನ ದಿನ ನಿದಿರೆಯೊಳು ಮದಿರೆಯಂಥ ನಶೆಯು ನೀನೆ.

ಅಗೋಚರ ಸಲುಗೆಯ ಪಯಣವೇ ಪ್ರೇಮವು ತಾನೆ?

ದಿನ ದಿನ ನಿದಿರೆಯೊಳು ಮದಿರೆಯಂಥ ನಶೆಯು ನೀನೆ.

ಅಗೋಚರ ಸಲುಗೆಯ ಪಯಣವೇ ಪ್ರೇಮವು ತಾನೆ?

ಈ ಅಂತರದ ಬೇಗುದಿಗೆ ಚಂದಿರನೇ ಕಾಂತಿ.

ನೇಸರನ ಸಹವಾಸ ಶಾಖವದೇ ಸಂಪ್ರೀತಿ. ||ಪ||

ಚಂದ ಕವಿತೆ ಬರೆವ ರೂಡಿ ನಂಗೆ ಶುರುವು

ಉಸಿರಾಗೊ ಸಾಂಗತ್ಯಕ್ಕೆ ಅಣಿಯಾಗುವ ಕಾತುರತೆ.

ಅಂದ ಕಾಣೊ ಖುಷಿ ನಿನ್ನ ಕಂಗಳಲ್ಲಿ

ಬೆಳದಿಂಗ್ಳ ತಾರೆಗಳಂತೆ ಹೊಳಪೊಂದಿಗೆ ಮೈಮರೆತೆ.

ಸೋಜಿಗಕು ಸೋಜಿಗವು ಕಣ್ಣ್ ಸನ್ನೆಯಲ್ಲೆ ಪ್ರೀತಿ ಕಾಗುಣಿತ.

ನಾನ್ ನೀನು ಒಂದಾಗೋ ಆ ಮಿಲನವೊಂದು ಸಂಪ್ರೀತ. ||೧||

ದಿನ ದಿನ ನಿದಿರೆಯೊಳು ಮದಿರೆಯಂಥ ನಶೆಯು ನೀನೆ.

ಅಗೋಚರ ಸಲುಗೆಯ ಪಯಣವೇ ಪ್ರೇಮವು ತಾನೆ? ||ಅನು ಪ||

ಸಂಪ್ರೀತಿ ಪ್ರೀತಿ..

ಸಂಜೆ ವೇಳೆ ಹೀಗೆ ಒಂದು ಪಿಸುಗುಟ್ಟು

ಕೇಳುವಾಸೆಯು ನನ್ನಲ್ಲಿ ಈಡೇರಿಸು ಪ್ರಿಯಕರನೇ!

ಆ ಸಂತೆಯಲ್ಲೂ ಸಿಹಿ ದನಿಯೊಂದ 

ಆಲಾಪನೆ ಮಜಲಿಗೆ ಪ್ರೇರೇಪಿತ ಓ ನಿನ್ನ್ ಲಯವೇ.

ಸಂಗೀತ ಸಂಜಾತ ಎದೆಯಾಳದಲ್ಲೇ ಸಾಕಾರ.

ರಾಗದಲೇ ಅನುರಾಗ ಇದೇ ಪ್ರೀತಿ ಪ್ರೇಮ ಝೇಂಕಾರ. ||೨||

ದಿನ ದಿನ ನಿದಿರೆಯೊಳು ಮದಿರೆಯಂಥ ನಶೆಯು ನೀನೆ.

ಅಗೋಚರ ಸಲುಗೆಯ ಪಯಣವೇ ಪ್ರೇಮವು ತಾನೆ?

ಈ ಅಂತರದ ಬೇಗುದಿಗೆ ಚಂದಿರನೇ ಕಾಂತಿ.

ನೇಸರನ ಸಹವಾಸ ಶಾಖವದೇ ಸಂಪ್ರೀತಿ.

ಸಂಪ್ರೀತಿ. ಸಂಪ್ರೀತಿ. ಸಂಪ್ರೀತಿ... ||ಅನು ಪ||

   ‌‌‌‌            ----ಚಿನ್ಮಯಿ

------------------------------------------------------

------------------------------------------------------

 (Male Version)

ದಿನ ದಿನ ನಿದಿರೆಯೊಳು ಮದಿರೆಯಂಥ ನಶೆಯು ನೀನೆ.

ಅಗೋಚರ ಸಲುಗೆಯ ಪಯಣವೇ ಪ್ರೇಮವು ತಾನೆ?

ದಿನ ದಿನ ನಿದಿರೆಯೊಳು ಮದಿರೆಯಂಥ ನಶೆಯು ನೀನೆ.

ಅಗೋಚರ ಸಲುಗೆಯ ಪಯಣವೇ ಪ್ರೇಮವು ತಾನೆ?

ಈ ಅಂತರದ ಬೇಗುದಿಗೆ ಚಂದಿರನೇ ಕಾಂತಿ.

ನೇಸರನ ಸಹವಾಸ ಶಾಖವದೇ ಸಂಪ್ರೀತಿ. ||ಪ||

ಚಂದ ಕವಿತೆ ಬರೆವ ರೂಡಿ ನಂಗೆ ಶುರುವು

ಉಸಿರಾಗೊ ಸಾಂಗತ್ಯಕ್ಕೆ ಅಣಿಯಾಗುವ ಕಾತುರತೆ.

ಅಂದ ಕಾಣೊ ಖುಷಿ ನನ್ನ ಕಂಗಳಲ್ಲಿ

ಬೆಳದಿಂಗ್ಳ ತಾರೆಗಳಂತೆ ಹೊಳಪೊಂದಿಗೆ ಮೈಮರೆತೆ.

ಸೋಜಿಗಕು ಸೋಜಿಗವು ಕಣ್ಣ್ ಸನ್ನೆಯಲ್ಲೆ ಪ್ರೀತಿ ಕಾಗುಣಿತ.

ನಾನ್ ನೀನು ಒಂದಾಗೋ ಆ ಮಿಲನವೊಂದು ಸಂಪ್ರೀತ. ||೧||

ದಿನ ದಿನ ನಿದಿರೆಯೊಳು ಮದಿರೆಯಂಥ ನಶೆಯು ನೀನೆ.

ಅಗೋಚರ ಸಲುಗೆಯ ಪಯಣವೇ ಪ್ರೇಮವು ತಾನೆ? ||ಅನು ಪ||

ಸಂಪ್ರೀತಿ ಪ್ರೀತಿ..

ಸಂಜೆ ವೇಳೆ ಹೀಗೆ ಒಂದು ಪಿಸುಗುಟ್ಟು

ಕೇಳುವಾಸೆಯು ನನ್ನಲ್ಲಿ ಈಡೇರಿಸು ಓ ಪ್ರೇಯಸಿಯೇ!

ಆ ಸಂತೆಯಲ್ಲೂ ಸಿಹಿ ದನಿಯೊಂದ 

ಆಲಾಪನೆ ಮಜಲಿಗೆ ಪ್ರೇರೇಪಿತ ಓ ನಿನ್ನ್ ಲಯವೇ.

ಸಂಗೀತ ಸಂಜಾತ ಎದೆಯಾಳದಲ್ಲೇ ಸಾಕಾರ.

ರಾಗದಲೇ ಅನುರಾಗ ಇದೇ ಪ್ರೀತಿ ಪ್ರೇಮ ಝೇಂಕಾರ. ||೨||

ದಿನ ದಿನ ನಿದಿರೆಯೊಳು ಮದಿರೆಯಂಥ ನಶೆಯು ನೀನೆ.

ಅಗೋಚರ ಸಲುಗೆಯ ಪಯಣವೇ ಪ್ರೇಮವು ತಾನೆ?

ಈ ಅಂತರದ ಬೇಗುದಿಗೆ ಚಂದಿರನೇ ಕಾಂತಿ.

ನೇಸರನ ಸಹವಾಸ ಶಾಖವದೇ ಸಂಪ್ರೀತಿ.

ಸಂಪ್ರೀತಿ. ಸಂಪ್ರೀತಿ. ಸಂಪ್ರೀತಿ... ||ಅನು ಪ||

 ‌‌‌            

        ‌      ----ಚಿನ್ಮಯಿ

No comments:

Post a Comment