Sunday, December 14, 2025

ಮೌನಂ ಸಮ್ಮತಿ ಲಕ್ಷಣಂ

ಮಾತಿಗೂ ಸಿಗಲಾರದ ಭಾವನೆಯೇ ನಿಂತಿದೆ ನನ್ನೆದುರಿಗೆ.

ಮಾತಿಗೂ ಮಿಗಿಲಾದ ಮೌನವೂ ಶರಣು ನಿನ್ನೆದುರಿಗೆ.

ಕಣ್ಣಂಚಲ್ಲೇ ಕೋಲ್ಮಿಂಚಿರಲು ನರನಾಡಿಗೆ ವಿದ್ಯುತ್ ಸಂಚಲನ.

ಕುಡಿನೋಟದಲ್ಲೇ ಕಣ್ಸನ್ನೆಯಿಂ ಸಂಗೀತ-ಸಾಹಿತ್ಯ ಸಂಕಲನ.

ನಾದ ನಿನಾದದ ಜೊತೆಜೊತೆಗೆ ಶುರುವೂ ಗಟ್ಟಿಮೇಳ.

ಮನದಾಳದಿ-ಹೃದಯದಾಳದಿ ಪ್ರೇಮದುಂದುಭಿಯೇ ಜೀವಾಳ.


            ----ಚಿನ್ಮಯಿ

No comments:

Post a Comment