Friday, September 4, 2026

ಎಂತಹ ಅದ್ಭುತ...!

ಆ ಪರಮಾತ್ಮನು ತನ್ನೊಳಗೆ ಈ ಆತ್ಮವನ್ನು ಲೀನಗೊಳಿಸಲು, ಈ ಆತ್ಮಕ್ಕೆ ಅನಂತ ಅನಂತ ಜನ್ಮಗಳನ್ನು ನೀಡುವನು.

ಈ ಆತ್ಮದೊಳಗೇ ಅನಂತ ಅನಂತ ಕಾಲಕ್ಕೂ ನೆಲೆಸಿ, ತನ್ನೊಳಗೆ ಈ ಆತ್ಮವನ್ನು ತಲ್ಲೀನಗೊಳಿಸುವ ದಾರಿದೀಪವಾಗುವನು.


ಇಲ್ಲಿ, ಈ ಆತ್ಮವು ಮಾಡಬೇಕಾದುದಿಷ್ಟೇ—

ಈ ಸತ್ಯವನ್ನು ಗ್ರಹಿಸಿಕೊಂಡು, ಅರ್ಥೈಸಿಕೊಂಡು, ಸಂಪೂರ್ಣತೆಯಿಂದ ಬದುಕಿ, ತಲ್ಲೀನತೆಯಿಂದ ಅನಂತತೆಯೆಡೆಗೆ ಸಾಗಿ, ಅಂತಿಮವಾಗಿ ಆ ಪರಮಾತ್ಮನೊಳಗೆ ಲೀನವಾಗಬೇಕಷ್ಟೇ...


              ----ಚಿನ್ಮಯಿ

Thursday, September 3, 2026

ಬಂದಂತೆ ತಾ ಬದುಕಿದರೆ, ಇಂದೇ ನವ ಜೀವನವು ಉದಯ...

ಯಾರ ಮುಡಿಗೆ ಯಾವ ಹೂವೋ...!?

ಯಾವ ಹೂವು ಯಾವ ಮರದ್ದೋ...!?

ಯಾವ ಮರವು ಯಾವ ಸಸಿಯದ್ದೋ...!?

ಯಾವ ಸಸಿಯು ಯಾವ ಬೇರಿಂದ್ದೋ...!?

ಯಾವ ಬೇರು ಯಾರು ನೆಟ್ಟರೋ...!?


ಹಳೆ ನೆನಪುಗಳ ಸರಪಳಿಯಲ್ಲಿ, ಸಿಲುಕಿರಲು ಸಮಯ...

ನೋವಿನ ಶಾಖದಿ ಬೆಂದು ಬೆಂದು, ನರಳಿರಲು ಹೃದಯ...

ಉತ್ತರ ಹುಡುಕಲು ಹೋದರೆ, ಇದು ಮುಗಿಯದ ಅಧ್ಯಾಯ...

ಬಂದಂತೆ ತಾ ಬದುಕಿದರೆ, ಇಂದೇ ನವ ಜೀವನವು ಉದಯ...


                  ----ಚಿನ್ಮಯಿ