Friday, October 29, 2021

ನಾನು-ನಾವು

ನೂರಾರು ಹೃದಯದೊಳು ಗೂಡು ಕಟ್ಟು,

ಝಣ ಝಣ ಕಾಂಚಾಣವ ದೂರವಿಟ್ಟು.

ತನ್ನ ಗರ್ಭದೊಳು ಚಿರನಿದ್ರಾ ಲಾಲಿಯಾಡುವಾಗ ಭೂಮಿ,

ಹೊತ್ಕೊಂಡ್ ಹೋಗೋದ್ ಏನಿದೆ ಸ್ವಾಮಿ?

ಒಳ್ಳೆತನದಿ ಬಾಳಿದರಷ್ಟೇ ನೀ ಸಿರಿವಂತ,

ಸ್ನೇಹ ಪ್ರೀತಿ ವಿಶ್ವಾಸದಿಂದಲೇ ನೀ ಜೀವಂತ.


ಮೂರ್ನಾಲ್ಕ್ ದಿನದ ಬಾಳಿದು.

ಇರುವಷ್ಟ್ ದಿನ ಒಳ್ಳೆದ್ ಮಾಡು.

'ನಾನು'ವೇ ಅಂಧಕಾರ.

'ನಾವು'ವೇ ಸಾಕ್ಷಾತ್ಕಾರ.

       ----ಚಿನ್ಮಯಿ

ಸಂಚಾರಿ ವಿಜಯಣ್ಣ🙏🏽💔

ಜೀವನದ ಸಂಚಾರದಲ್ಲಿ ಕಣ್ಮರೆಯಾದರೂ,

ನಮ್ಮೆಲ್ಲರ ನೆನಪಲ್ಲಿ ಸದಾಕಾಲವೂ "ಸಂಚಾರಿಯಾಗಿಯೇ" ನಿಶ್ಯಬ್ಧದಿಂದ ಸಂಚರಿಸುವಿರಿ.

"ಸಂಚಾರಿ ವಿಜಯಣ್ಣ"🙏🏽💔

        ----ಚಿನ್ಮಯಿ

ಯುವರತ್ನ "ಪುನೀತ್ ರಾಜ್‍ಕುಮಾರ್"🙏🏽💔

 ಓ ಪುನೀತ, ನೀ ವಿನೀತ.

ನೀ ವಿನೀತ, ನೀ ಪುನೀತ.


ಆ ಮಗುವಿನ ನಗು ಎಂದಿಗು ಜೀವಂತ.

ಈ ಮುಗುಳ್ನಗು ಎನ್ನೆದೆಯಲಿ ಶಾಶ್ವತ.

'ಪುನೀತ'ನಂತೆ ಬಾಳಿದ 'ರಾಜಕುಮಾರ'ನ ಸುತ.


ಯುವರತ್ನ "ಪುನೀತ್ ರಾಜ್‍ಕುಮಾರ್"🙏🏽💔

           ----ಚಿನ್ಮಯಿ

Saturday, October 16, 2021

True Cricket Fans

There are 'few people' called "IPL Cricket Pans" who will be 'only alive for two months of IPL period' and 'they vanish when India plays cricket.'

There are 'so many people' called "True Cricket Fans" who will be 'alive forever' and 'they enjoy both IPL and Indian Cricket Campaign.'

Only the second category people will "watch, love and respect cricket."

                                   🏏🇮🇳💛❤️

                                   ----chinmayi

Wednesday, October 13, 2021

Debate- An Healthy Argument

In any debate, one must listen first and then speak. Also one must strictly just stick to the point and speak about it only and must avoid nonsense, unnecessary, irrelevant and past personal talks. This is the rule/law of any debate and it's called as an "Healthy Argument."

         ----chinmayi

Tuesday, October 5, 2021

Yuva Bharathiya🇮🇳

Our youths, specifically North Indian youths are leaning towards Western Culture probably for these below couple of reasons-

1) Thinking that "Present India" is unfit for youths in many aspects due to various political reasons.

2) Thinking that Western Culture is the most elegant culture. 

But, my dear youths let me correct you that it's "Bharath" and not "India". Bharath has got an immense and great history which everyone should learn from scratch since it's been rewritten and manipulated by westerns so many times and many of our historical evidences have been burnt and destroyed which should be researched (Some has been searched). Then must remember it and document it in a proper way and finally not to be forgotten. Let's all strive hard to bring back the glory of World's Ancient and Best Existing Cultural Civilization called as "Sanathana Dharma-The Way Of Living."

             Always be a proud "Bharathiya🇮🇳"

                             ----chinmayi

Friday, September 24, 2021

ಹನ್ನೆರಡನೆ ಮರು ಸಾಹಿತ್ಯ ಬರವಣಿಗೆ

ಹಾಡು: "ನೂರು ಜನ್ಮಕೂ"

ಚಿತ್ರ: "ಅಮೇರಿಕ ಅಮೇರಿಕ"

ಮೂಲ ಸಾಹಿತ್ಯ: "ನಾಗತಿಹಳ್ಳಿ ಚಂದ್ರಶೇಖರ್"

ಮೂಲ ಗಾಯನ: "ರಾಜೇಶ್ ಕೃಷ್ಣನ್"

ಮರುಸಾಹಿತ್ಯ ಹಾಡು: "ಸ್ನೇಹ ಗೀತೆ"


ನೂರು ಜನ್ಮಕೂ ನೂರಾರು ಜನ್ಮಕೂ

ನೂರು ಜನ್ಮಕೂ ನೂರಾರು ಜನ್ಮಕೂ

ಮನದ ಭಾವನೆ ಎದೆಯುಸಿರ ಪ್ರಾರ್ಥನೆ-

ನನ್ನ ಆತ್ಮ, ನನ್ನ ಪ್ರಾಣ ನೀವೆಂದು.

ನೂರು ಜನ್ಮಕೂ ನೂರಾರು ಜನ್ಮಕೂ

ಮನದ ಭಾವನೆ ಎದೆಯುಸಿರ ಪ್ರಾರ್ಥನೆ-

ನಾನು ನೀವು, ನೀವು ನಾನು ಒಂದೆಂದು

ನೂರು ಜನ್ಮಕೂ... ||ಪ||


ಇರುಳಲ್ಲಿಯೂ ಬೆಳಕಾಗೊ 'ಸ್ನೇಹ' ಹಣತೆ, ಇನ್ನೆಲ್ಲಿ ಅಜ್ಞಾನ!?

ಹಗಲಾದರೆ ಬೆಳದಿಂಗ್ಳ ಜ್ಞಾನ

ನನ್ನುಸಿರ ಜೀವಗಳೇ

ಓ.. ಓ.. ಓ.ಓ.

ನನ್ನುಸಿರ ಜೀವಗಳೇ ನೀವೆಂದು ನನ್ನವರು

ಕಣ್ಣೊಳ ಕಂಬನಿಯ ಸಂತೈಸೊ ನಮ್ಮವರು

ನನ್ನೊಳಗೆ ಹಾಯಾಗಿ ಕುಳಿತವರು. ||೧||


ನೂರು ಜನ್ಮಕೂ ನೂರಾರು ಜನ್ಮಕೂ

ನೂರು ಜನ್ಮಕೂ ನೂರಾರು ಜನ್ಮಕೂ

ಮನದ ಭಾವನೆ ಎದೆಯುಸಿರ ಪ್ರಾರ್ಥನೆ-

ನನ್ನ ಆತ್ಮ, ನನ್ನ ಪ್ರಾಣ ನೀವೆಂದು

ನೂರು ಜನ್ಮಕೂ.. ||ಅನು ಪ||


ಈ ಸ್ನೇಹದ ಅತಿರೇಕ ಸವಿಯೋ ಘಳಿಗೆ ಝೇಂಕಾರ ಎಲ್ಲೆಡೆಯೂ,

ಈ ಆತ್ಮಕೆ ಸವಿರಾಗ ನೀವೂ

ಕಷ್ಟಕೆ ಹೆಗಲಾಗಿ,

ಓ.. ಓ.. ಓ.ಓ.

ಕಷ್ಟಕೆ ಹೆಗಲಾಗಿ ಜೊತೆಯಲ್ಲೇ ನಿಂತವರು

ಸಿರಿವಂತ ಆತ್ಮಗಳು ಇವರಿವರೇ ನನ್ನವರು

ಜೀವನದ ಎದೆಬಡಿತ ಸ್ನೇಹಿತರು. ||೨||


ನೂರು ಜನ್ಮಕೂ ನೂರಾರು ಜನ್ಮಕೂ.

ನೂರು ಜನ್ಮಕೂ ನೂರಾರು ಜನ್ಮಕೂ.

ಮನದ ಭಾವನೆ ಎದೆಯುಸಿರ ಪ್ರಾರ್ಥನೆ-

ನನ್ನ ಆತ್ಮ, ನನ್ನ ಪ್ರಾಣ ನೀವೆಂದು.

ನೂರು ಜನ್ಮಕೂ.. ||ಅನು ಪ||

        ----ಚಿನ್ಮಯಿ

Sunday, August 29, 2021

"ಆಧ್ಯಾತ್ಮಿಕತೆ"- ಮುಂದುವರಿದ ಪ್ರಾಚೀನ ವಿಜ್ಞಾನ <-> "Spirituality"- An advanced ancient science.

ಯಾರು 'ಆಧ್ಯಾತ್ಮಿಕತೆ'ಯನ್ನು 'ವಿಜ್ಞಾನ'ದ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವರೋ ಅಥವಾ ಅನುಭವಿಸುವರೋ, ಅಂತಹವರು ಮಾತ್ರ "ದೇವರ"ನ್ನು ಅನುಭವಿಸಲು ಅಥವಾ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಏಕೆಂದರೆ, 'ಆಧ್ಯಾತ್ಮಿಕತೆಯೇ ವಿಜ್ಞಾನವಾಗಿದೆ'- ಇದನ್ನು ಅನುಭವಿಸಲು ಅರ್ಥಮಾಡಿಕೊಳ್ಳಬೇಕು ಹಾಗೂ ಅರ್ಥಮಾಡಿಕೊಳ್ಳಲು ಅನುಭವಿಸಬೇಕು. ಇನ್ನಷ್ಟೂ ನಿರ್ದಿಷ್ಟವಾಗಿ ಹೇಳುವುದಾದರೆ, ಇದು 'ಆಧುನಿಕ ವಿಜ್ಞಾನ'ಕ್ಕಿಂತಲೂ ತುಂಬಾನೇ ಮುಂದುವರಿದಿದ್ದ 'ಪ್ರಾಚೀನ ವಿಜ್ಞಾನ'.

ಆದ್ದರಿಂದಲೇ, 'ರಾಮಾಯಣ' ಹಾಗೂ 'ಮಹಾಭಾರತ' ಎರಡೂ ಸಹ ನಮ್ಮ ಹೆಮ್ಮೆಯ 'ಇತಿಹಾಸ'ವಾಗಿದೆ. ಇವುಗಳನ್ನು 'ಕಲ್ಪಿತ ಕಥೆ'ಗಳೆಂದು ಹೇಳುವುದರಲ್ಲಿ ಯಾವುದೇ ಅರ್ಥವಿರುವುದಿಲ್ಲ.

            ----ಚಿನ್ಮಯಿ

When anyone learns to understand or experience 'Spirituality' in perspective of 'Science', then that person will experience or understand "GOD" ultimately. This is because, 'Spirituality is Science' itself which is to be understood to experience and experienced to understand. To be more specific, it is an 'Ancient Science' which was much more advanced than 'Modern Science'.

Hence, both 'Ramayana' and 'Mahabharata' are our great 'History' or 'Itihasa'. Labeling them as 'Mythology' makes no sense.

           ----chinmayi

Saturday, July 31, 2021

ಪ್ರೇಮ ವಾಚನ

ನಿನ್ನ ನೋಡಿದೆ ಒಂದು ಸಂಜೆ,

ಜಾಗವೇನೋ ಊರ ಸಂತೆ.

ನನ್ನ ಚಿತ್ತವ ಸೆಳೆದೆ ನೀನು,

ಇಳೆಯು ರವಿಯ ಸುತ್ತುವಂತೆ.


ನಿನ್ನ ಹೆಜ್ಜೆಯ ಸೋಕಿದ ಕ್ಷಣ-

ಸುತ್ತಲೂ ಆವರಿಸಿತು ನಿಶೆ.

ನಿನ್ನ ಗೆಜ್ಜೆಯ ಸದ್ದಿನಿಂದಲೇ-

ಮೆಲ್ಲ-ಮೆಲ್ಲನೆ ಏರಿತು ನಶೆ.


ಹಿಂದೆ-ಹಿಂದೆಯೇ ಬಂದೆ ನಾ-

ತಿಳಿಯಲು ಮನೆ ವಿಳಾಸ.

ತಿಳಿದ ಮರುಕ್ಷಣದಿಂದಲೇ-

ಎದೆಯ ತುಂಬಾ ವಿಲಾಸ.


ಅಂದಿನಿಂದಲೇ ಶುರುವು-

ಮಾಡಿದೆ ಪ್ರೇಮ ವ್ಯವಸಾಯ.

ದಿನವೂ ನಿನದೆ ಗುಂಗಿನಲ್ಲಿ-

ಮುಳುಗಿ ಕಳೆದೆ ಸಮಯ.


ನಿನ್ನ ಕಂಡ ಹಳೆಯ ದಿನಗಳ-

ನಿನಗೇ ಹೇಳಿದೆ ಇಂದು.

ನಿನ್ನ ಎದುರೇ ನಿಂತು ಈಗ-

ಪ್ರೇಮವೇಳುವೆ ಕೇಳು. 


ಪ್ರೇಮವೇನೋ ರೇಸಿಮೆಯಂತೆ,

ನಾನೇ ಆಗುವೆ ರೇಸಿಮೆಯ ಧಾರ‌.

ಮಾಡಬಾರದೇ ನೀ ಕಸೂತಿಯ,

ಎನ್ನೆದೆಯಲಿ ಹೂಡಿ ಬಿಡಾರ!?

             ----ಚಿನ್ಮಯಿ

Friday, July 30, 2021

ಆತ್ಮ ಸಂಯಮ

ನಾಲಿಗೆ ತಿಳಿದರೂ ಬೇವು-ಬೆಲ್ಲದ ರುಚಿಯ,

ಸದಾ ಬಯಸುವುದು ಮಾತ್ರ ಬೆಲ್ಲದ ಸ್ನೇಹವ.

ಮನವೇ ಆದರೂ ನೋವು-ಸಂತಸದ ಒಡೆಯ,

ಸದಾ ಬಯಸುವುದು ಮಾತ್ರ ನೋವಿನ ಕ್ಷಣವ.


ನಾಲಿಗೆಗೆ ಕಹಿ ಬೇಡ, ಮನಕ್ಕೆ ಸಿಹಿ ಬೇಡ,

ಒಂದೇ ದೇಹದಲ್ಲಿದ್ದರೂ, ಇಬ್ಬರ ಬಯಕೆಯು ವಿರುದ್ಧ.

ಏತಕ್ಕೆ ಈ ರೀತಿ ಎಂಬುದಕ್ಕೆ ಉತ್ತರ ನಿಗೂಢ!

ನಿಗೂಢತೆಯ ಭೇದಿಸಲು ಆತ್ಮವಾಗಬೇಕು ಪರಿಶುದ್ಧ.

                          ----ಚಿನ್ಮಯಿ

Tuesday, July 13, 2021

ಶೂನ್ಯ <-> Nothingness

ನನಗೆ ತಿಳಿದಿರುವುದೊಂದೆ- 

" 'ನಾನು' ಶೂನ್ಯ" ವೆಂಬುದು.

            ----ಚಿನ್ಮಯಿ

All I know is-

" ' 'I' (is) am' Nothingness."

             ----chinmayi

        

Monday, July 12, 2021

ಬೀಸಣಿಗೆ

ಸೆಕೆಗಾಲದಿ ನನಗೂ-

ಪ್ರಕೃತಿಗೂ ಭಾರಿ ಕಾದಾಟ,

ರಾತ್ರಿ ಮಲಗಲಾಗದೆ-

ಬೈಯುತ ಗೊಣಗುತ ಒದ್ದಾಟ.


ತಂಪು ಗಾಳಿಯೊಡನೆ-

ಸರಸವಾಡಲಾಸೆ ಛಾವಣಿಗೆ,

ಮುನಿಸಿದ ಗಾಳಿಗೆ-

ಆತ್ಮೀಯ ಸ್ನೇಹಿತ ಬೀಸಣಿಗೆ.

         ----ಚಿನ್ಮಯಿ

Thursday, June 24, 2021

ಮದುವೆಯ ನಂತರದ ಫಜೀತಿ

"ಏನ್ರೀ, ಸ್ವಲ್ಪ ಅಂಗ್ಡೀಗ್ ಹೋಗಿ ಮನೆ ಸಾಮಾನ್ ತರ್ಬಾರ್ದೇ, ಯಾವಾಗ್ಲೂ ಆ ಹಾಳಾದ್ ನ್ಯೂಸ್ ನೋಡ್ಕೊಂಡೇ ಇರ್ತೀರಲ್ಲ" ಎಂದು ಹೆಂಡ್ತಿ ಹೇಳಲು,

ದಿಢೀರನೆ ಹೆಂಡ್ತಿಯ ಕಾಟ ತಡೆಯದೇ ಗಂಡ ಒಮ್ಮೆಲೆ ಎದ್ದು ಹೋದನು ಅಂಗ್ಡಿಯ ಕಡೆಗೆ, ಆ ಅಂಗ್ಡಿಯವ ಬಾಗಿಲ ಮುಚ್ಚುವ ಒಳಗೆ.

ನಿಟ್ಟುಸಿರ ಬಿಡುತ್ತ ಅಂಗ್ಡಿಯವನಿಗೆ ಗಂಡ ಹೇಳಿದ- "ಹೇ ಸ್ವಲ್ಪ ತಡಿಯೋ ಮಾರಾಯ, ತಿಂಗಳಿನ ಸಾಮಾನು ಕೊಟ್ಟು ಬಾಗಿಲಾಕಯ್ಯ",

ಹಳೆಯ ಗಿರಾಕಿ ಎನ್ನುವ ಸಲಿಗೆಯಿಂದ ಗಂಡ ಕೇಳಲು ರಿಯಾಯಿತಿ, ಒಲ್ಲದ ಮನಸ್ಸಿನಿಂದಲೇ ಅಂಗ್ಡಿಯವ ಕೊಟ್ಟನು ರಿಯಾಯಿತಿ.


ಮನೆಗೆ ವಾಪಸ್ಸಾದ ಗಂಡನಿಗೆ ಇನ್ನೊಂದು ಕೆಲಸ ಕೊಡಲು ಹೆಂಡ್ತಿ, "ಸರಿ ಆಯ್ತು ಕಣೆ ಎನ್ನಲ್ಲಷ್ಟೇ ಅಲ್ಲವೇ ಆದೀತು" ಎಂದು ಗೊಣಗಿದ ಗಂಡ,

ಗೊಣಗಲು ನಿಲ್ಲಿಸದ ಗಂಡ ಮತ್ತೆ ಹೀಗೆ ಗೊಣಗಿದನು-"ಯಾರಿಗೆ ಬೇಕು ಸ್ವಾಮಿ ಇದ್ದೆಲ್ಲಾ, ಏನೂ ಬೇಕಾದರೂ ತಡೆಯಬಹುದು ಈ ಹೆಂಡ್ತೀರ ಕಾಟ ತಡೆಯಲು ಆಗದು".

ಗಂಡನ ಗೊಣಗಾಟ ಕೆಳಿಸಿಕೊಂಡ ಹೆಂಡ್ತಿ- "ಏನ್ರೀ ಅದು ಗೊಣಗ್ತಾಯಿರೋದು" ಎಂದೊಂಡನೆಯೇ, "ಹೇ ಏನಿಲ್ಲ ಕಣೆ" ಎಂದು ಕೆಲಸವನ್ನು ಗೊಣಗುತ್ತಲೇ ಮುಂದುವರೆಸಿದ,

ಗಂಡ ಓದುಗರಿಗೆ ಗೊಣಗುತ್ತಲೇ ಹೀಗೆಂದನು- "ಹೀಗೇ ನೋಡಿ ಸ್ವಾಮಿ ಗಾಳಿ ಹೋದ ಬಲೂನಿನಂತೆಯೇ ಅಲ್ಲವೇ ಗಂಡಂದಿರ ಪರಿಸ್ಥಿತಿ, ಓಹೋ ನಿಮಗೆ ಮದುವೆ ಆಗಿಲ್ಲವೇ!? ಆಗಿ ನೋಡಿ ತಿಳಿಯುತ್ತೆ ಮದುವೆಯ ನಂತರದ ಫಜೀತಿ". 


ಈ ವಿನೋದಮಯ ಸತ್ಯವನ್ನು ಓದುವ ನಿಮಗೆ ನಗಲು ಆಗದೇ ಅಳಲು ಆಗದೇ ಉಂಟಾಗಬಹುದು ಇಕ್ಕಟ್ಟಿನ ಸ್ಥಿತಿ, ನೆನೆಸಿಕೊಂಡು ಮದುವೆಯ ನಂತರದ ಫಜೀತಿ!?

                ----ಚಿನ್ಮಯಿ

Wednesday, June 9, 2021

ಯೋಚಿಸಿ...! / Think...!

ಇದುವರೆಗೂ ಎಷ್ಟೋ ವಿಜ್ಞಾನಿಗಳು ಈಗಾಗಲೇ ಪ್ರಕೃತಿಯಲ್ಲಡಗಿದ್ದ ಎಷ್ಟೋ ವಿಚಾರಗಳ ಕುರಿತು ಆವಿಷ್ಕಾರ ಮಾಡಿದ್ದಾರೆ. ಸಾಮಾನ್ಯ ಮನುಷ್ಯರೇ ಇಷ್ಟೆಲ್ಲಾ ಮಾಡುವರೆಂದರೆ, ಇನ್ನೂ ಭಗವಂತನು ಪ್ರತಿಯೊಂದನ್ನು ಮುಂಚೆಯೇ ಸೃಷ್ಟಿಸಿರಲು ಸಾಧ್ಯವಿರುವುದಿಲ್ಲವೇ? ಹಾಗೂ ಮನುಷ್ಯನಿಗೆ ಎಲ್ಲವನ್ನೂ ಅರಿತುಕೊಳ್ಳಲು ಒಂದವಕಾಶ ಕೊಟ್ಟಿರಬಹುದಲ್ಲವೇ?

ಒಮ್ಮೆ ನೀವೇ ಯೋಚಿಸಿ ನೋಡಿ...!

          ----ಚಿನ್ಮಯಿ

In this long run of life on Earth, so many scientists have invented and discovered so many things which already had been hidden in nature. If a mere human beings can do all this, then will God not be responsible for been created everything already before humans? and will God not be responsible for giving a chance for humans to understand everything?

At least think about it once...!

          ----chinmayi

ನಾಲ್ಕನೆ ಸ್ವಂತ ಸಾಹಿತ್ಯ ಬರವಣಿಗೆ

ಹಾಡು: ಹೇ ಯೋಧನೆ
ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಹೆಚ್).


ಹೇ ಯೋಧನೆ ಹೇ ಯೋಧನೆ

ನೀ ನಮ್ಮಯ ಕಣ್ಗಾವಲು.

ಹೇ ವೀರನೆ ಹೇ ವೀರನೆ

ನಿನ್ನಿಂದಲೇ ಹಗಲ್-ಇರುಳು.


ನಮ್ಮ ಹೆಮ್ಮೆ ನೀವು,

ನಮ್ಮ ಹೆಮ್ಮೆss ನೀವು. ||ಪ||


ಶತ್ರುಗೆ ಯಮನಿವ ಸರದಾರ,

ವಜ್ರದ ಕವಚವು ಭಾರತಿಗೆ.

ತಲೆಯೇ ಬಾಗದೀ ಯುವಶೂರ,

ಸ್ಪೂರ್ತಿಯ ಧಾತ ತಾಯ್ನಾಡಿಗೆ.

ಹೇ ಬಿಸಿಲು ಚಳಿಗೆ ನಡುಗದೀ,

ರೋಷ-ಆವೇಷದ ಗುಂಡಿಗೆ.

ಕೊಂಚವು ಅಂಜದ ಯೋಧನ,

ಭಿಕ್ಷೆಯೇ ಈ ಉಸಿರು ನಮಗೆ‌.||೧||


ನಮ್ಮ ಹೆಮ್ಮೆ ನೀವು,

ನಮ್ಮ ಹೆಮ್ಮೆss ನೀವು.


ನಿನ್ನ ನಂಬಿದ್ದ ಬಾಳಿಗೆಲ್ಲಾ,

ನೀನೇ ಧೈರ್ಯದ ಹೊಂಗಿರಣ.

ನಮ್ಮ ದೇಶದ ಬಾವುಟವು,

ಹಾರಲು ನೀನೊರ್ವ ಕಾರಣ.

ಕೋಟಿ ಕಾಲಕೂ ಮರೆವೆವು,

ಇಂತಹ ಪವಿತ್ರ ಬಲಿದಾನ.

ದೇಶದ ಜನರ ಕೂಗಿದು,

ನಿನಗೆ ಇದುವೇ ಗುಣಗಾನ. ||೨||


ನಮ್ಮ ಹೆಮ್ಮೆ ನೀವು,

ನಮ್ಮ ಹೆಮ್ಮೆss ನೀವು.


ದೇಶವ ಕಾಯುವ ಸೈನಿಕನಲ್ಲಿ,

ದೇಶಾಭಿಮಾನವು ಅಳಿಯದು.

ಎಷ್ಟೋ ಆಯುದ್ಧ ಇದ್ದರು,

ಧೈರ್ಯವೇ ಆಯುದ್ಧ ಅವನದು.

ವೀರತ್ವ ಮೆರೆದ ಓ ವೀರನೇ,

ನಿನಗಿದು ಅರ್ಪಣೆ ಈ ಹಾಡು‌.

ನಮ್ಮಯ ಸೌಭಾಗ್ಯವು ಇದು,

ನಿನ್ನ ನಿವಾಸ ಎದೆ-ಗೂಡು. ||೩||


ನಮ್ಮ ಹೆಮ್ಮೆ ನೀವು,

ನಮ್ಮ ಹೆಮ್ಮೆss ನೀವು.


ಹೇ ಯೋಧನೆ ಹೇ ಯೋಧನೆ

ನೀ ನಮ್ಮಯ ಕಣ್ಗಾವಲು.

ಹೇ ವೀರನೆ ಹೇ ವೀರನೆ

ನಿನ್ನಿಂದಲೇ ಹಗಲ್-ಇರುಳು.


ನಮ್ಮ ಹೆಮ್ಮೆ ನೀವು,

ನಮ್ಮ ಹೆಮ್ಮೆss ನೀವು. ||ಪ||

          ----ಚಿನ್ಮಯಿ

Saturday, May 22, 2021

ನನ್ನಾಕೆ

ಅಂದೊಂದು ದಿನ ಕಂಡೆನವಳ ನಗುತಿದ್ದಲಿ-

ಕೇಳಲಾಸೆ, ಹೇಳಲಾಸೆ ಎಂದೆನಿಸಿ-

ಪಚ್ಚೆ ಹಸುರ ತೊಟ್ಟವಳ ಬಳಿ ನಿಂತೆನು.

ಅವಳ ನಗುವ ಕಂಡೊಡನೆ ಆಗೊಮ್ಮೆ-

ಮಾತು ಬಾರದೆ, ಮೌನ ಕಾಡಿದೆ-

ಎಂದು ಯೋಚಿಸಿ ಕುಂತೆನು!


ನಡುವ ಬಳುಕುತಲಿ ಅವಳಾಕಡೆಗೆ ಹೊಂಟಳು-

'ಏನು ವಿಷಯವೆಂದು?' ಎನ್ನ ಕೇಳಿ-

ಉತ್ತರ ಸಿಗದೆ, ತಿರುಗಿ ನೋಡದೆ ಸೀದಾ ಹೊಂಟಳು.

ಈ ದಿನಕ್ಕೆ ವ್ಯರ್ಥ ಮರುದಿನಕ್ಕೆ ಸಮರ್ಥ-

ವೆಂಬಂತೆ ಧೈರ್ಯ ಮಾಡಿದೊಮ್ಮೆಲೆ-

ಗುಲಾಬಿಯ ಹಿಡಿದೆ, ಅವಳೆಡೆಗೆ ನಡೆದೆ ಪ್ರೇಮವೇಳಲು.


ನಡುವೇನೋ ಸಣ್ಣ, ನುಣುಪಾದ ಕಣ್ಣ-

ನೋಡುತಲೇ ತಲೆ ಗಿರಗಿರನೆ ತಿರುಗಿ-

ದಂತಾದರೂ ಪ್ರೇಮವ ಹೇಳಿಯೇಬಿಟ್ಟೆ.

ಅವಳೇನೋ ನಾಚಿದಳೋ, ಕುಪಿತಗೊಂಡಳೋ-

ಅರಿವಿಲ್ಲ ಎನಗೆ ಕಾಣಿಸಿತಷ್ಟೇ ತಲೆಯಲ್ಲಿದ್ದ ಮಲ್ಲಿಗೆ-

ಅದ ನೋಡಿದೆ, ಸುಮ್ಮನಾದೆ ಗುಲಾಬಿಯ ಎಸೆದುಬಿಟ್ಟೆ.


ಬೇಜಾರಾದ ಎನಗೆ, ಬೇಕೆನಿಸಿತು ಸಲಿಗೆ-

ಆಗಿದ್ದಾಗಲೆಂದು ಮತೊಮ್ಮೆ ಕಾದೆ-

ನಾನು ಅವಳು ಬಹಳೆಂದು.

ಒಂದಾಶ್ಚರ್ಯ ಕಾದಿತ್ತೆನಗೆ ಮೇಗಡೆ-

ನೋಡಲು ರೇಸಿಮೆಯುಟ್ಟು ಬಂದೊಡನೆ-

ಮುತ್ತಿಟ್ಟಳೆನ್ನ ಕೆನ್ನೆಗೆ, ಆ ಘಳಿಗೆ-

ಬಂದಿತ್ತು ಪ್ರೇಮದೌತಣ ಸವಿಯಲೆಂದು.

               ----ಚಿನ್ಮಯಿ

Tuesday, May 4, 2021

Past-Present-Future / ಭೂತ-ವರ್ತಮಾನ-ಭವಿಷ್ಯತ್

Be it "Time Travel", "Alien Theories", "Black Hole Theories", "Multiverse and Parallel Universe Concepts", "100% Brain Capacity Concepts" and much more things which are being shown and being showed in movies, webseries etc and also the hypothetical theories that were and that are being published by many scientists have become true reality. Henceforth, in the far future many other things will surely become true and we humans ourselves will watch and experience all of it lively like how we are watching and experiencing it now.

"Human mind is so powerful and at the same time it's so cruel."

                  ----chinmayi

"ಕಾಲಯಾನ", "ಅನ್ಯಲೋಕ ಜೀವಿಗಳ ಸಿದ್ಧಾಂತಗಳು", "ಕಪ್ಪು ರಂಧ್ರದ ಸಿದ್ಧಾಂತಗಳು", "ಬಹುತೇಕ ಬ್ರಹ್ಮಾಂಡದ ಹಾಗೂ ಸಮಾನಾಂತರ ಬ್ರಹ್ಮಾಂಡದ ಪರಿಕಲ್ಪನೆಗಳು", "೧೦೦% ರಷ್ಟು ಮೆದುಳಿನ ಸಾಮರ್ಥ್ಯ"- ಇವುಗಳೆಲ್ಲದರ ಕುರಿತು ಹಾಗೂ ಇನ್ನೂ ಬಹುತೇಕ ಅವಿಸ್ಮರಣಿಯ ವಿಚಾರಗಳ ಕುರಿತು ಚಲನಚಿತ್ರಗಳಲ್ಲಿ ಹಾಗೂ ಗಣಕ ಜಾಲ ಸರಣಿಗಳಲ್ಲಿ ಮುಂಚೆಯೇ ತೋರಿಸಿರುವುದು ಹಾಗೂ ಈಗೀಗ ತೋರಿಸುತ್ತಿರುವುದು ಹಾಗೂ ಎಷ್ಟೋ ವಿಜ್ಞಾನಿಗಳು ರಚಿಸಿರುವ ಸಾಕಷ್ಟೂ ಕಲ್ಪನೆಯ ಸಿದ್ಧಾಂತಗಳು ಎಲ್ಲವೂ ನಿಜವಾಗಿದೆ. ಈಗ ಹೆಂಗೆ ನಾವು ಮನುಷ್ಯರೆಲ್ಲರೂ ಎಲ್ಲವನ್ನೂ ಕಾಣುತ್ತಿರುವೆವೋ ಹಾಗು ಅನುಭವಿಸುತ್ತಿರುವೆವೋ ಹಾಗೆಯೇ ಇನ್ನು ಮುಂಬರುವ ಬಹು ದೂರದ ಭವಿಷ್ಯತ್ಕಾಲದಲ್ಲಿ ಇನ್ನೂ ಎಷ್ಟೋ ವಿಚಾರಗಳು ಅವಶ್ಯವಾಗಿ ಸತ್ಯವಾಗುವುದು ಹಾಗೂ ನಾವೆಲ್ಲರೂ ಇದನ್ನೆಲ್ಲವನ್ನೂ ಸ್ವತಃ ಪ್ರತ್ಯಕ್ಷವಾಗಿ ಕಾಣುವೆವು ಹಾಗು ಅನುಭವಿಸುವೆವು.

"ಮನುಷ್ಯನ ಮೆದುಳು ಎಷ್ಟು ಶಕ್ತಿಯುತವಾದದ್ದೋ ಅಷ್ಟೇ ಕ್ರೂರವಾಗಿದೆ."

                     ----ಚಿನ್ಮಯಿ

Tuesday, April 20, 2021

ಉತ್ತರದ ಪ್ರೇಮ<->ಪ್ರೇಮಕ್ಕೆ ಉತ್ತರ

ಹೇ ಹುಡುಗಿ ಕೇಳ್ಲೇ ಸ್ವಲ್ಪ,

ನಾವಿಬ್ರೂ ಚಲೋ ಜೋಡಿ ಅಂತಿವ್ನಿ.

ಈ ಕಡ್ಯಾಗ ಕಣ್ಣ್ ಹಾಯಿಸ್ಲೇ,

ನಿನ್ನೇ ನೋಡ್ಕೊಂತ ಹಾಗೆ ನಿಂತಿವ್ನಿ.


ಕೇಳ್ಲೇ ಹುಡುಗ ಖರೆ ಮಾತ,

ನಿನ್ನ ನೋಡಕ್ಕಂತಲೇ ನಾ ಬಾನ್ನಿ.

ಗುರುತಾತು ನನಗ ನಿನ್ನಿಷ್ಟ,

ಅದಕ್ಕಂತಲೇ ತಾಳಿಯ ನಾ ತಾನ್ನಿ.


ಮದವಿ ಆಗಣ ನಾವೀಗ,

ಜೊತೆಯಾಗ ಜೀವನ ಬಂಡಿ ನಡೆಸಾಕ.

ಹೂ! ನನಗ ಅದೇ ಆಸೆ ಐತೀ,

ಆದರ ಇಷ್ಟ ಲಗೂ ಬೇಡ ಸ್ವಲ್ಪ ನೀ ತಡ್ಕ.

          ----ಚಿನ್ಮಯಿ

Wednesday, April 7, 2021

TIME

ಚಿತ್ರಕ್ಕೆ ಪದ್ಯ/ಉಲ್ಲೇಖ- ೫೬

TIME will fuck anyone either right away or slowly. But, TIME will heal and cure slowly.

TIME is both 'evil' and 'good'.

Just BEWARE of TIME.

            ----chinmayi

Monday, April 5, 2021

ನಿರಮ್ತರ ಪ್ರೇಮ...!?

ನಿಂತು ಹೋದಾಗ ನಿರಮ್ತರ ಹೃದಯಗಳ ಪ್ರೇಮದ ಯಾನ,

ಹೃದಯವೇ ನೀಡಬೇಕು ಖಾಲಿತನಕ್ಕೇನೆಂದು ಕಾರಣ.

ಒಂಟಿತನದ ಪರಮ ಸ್ನೇಹಿತ ಕಣ್ಣೀರು ಕೂಡ ಬಯಸಿದಾಗ ಮರಣ,

ನಗುವು ಮಾಯವಾಗಿ ಇನ್ನೇಗೆ ತಾನೆ ಸಾಗುವುದು ಜೀವನ!?

              ----ಚಿನ್ಮಯಿ

Thursday, February 25, 2021

ನಗುವಾಯಿತು ನಾಚಿಕೆ

ಚಿತ್ರಕ್ಕೆ ಪದ್ಯ- ೫೫


ಎಷ್ಟು ಮಾತಾಡಿದ್ರೂ ಅವಳೊಡನೆಯ ಮಾತು-ಕತೆ ಮುಗಿಯುತ್ತಿಲ್ಲ,
ಯಾಕಿಂಗೆ ಎನ್ನುವ ಮುದ್ದಾದ ಅನುಮಾನವೊಂದು ಕಾಡಿದಾಗ ಉತ್ತರ ಸಿಗುತ್ತಿಲ್ಲ.!
ಅವಳೊಮ್ಮೆ ನಸುನಕ್ಕಿ ಉತ್ತರ ನೀಡಿದರೆ ನಯನಗಳರಡಿ ಹೊಸ ಚೇತನ ಮೊಗಕ್ಕೆ,
ಅವಳೊಡನೆಯೇ ಪ್ರತಿ ಜನ್ಮ ಕಳೆಯಬೇಕೆಂದರಿತಾಗಲೇ ನಗುವಾಯಿತು ನಾಚಿಕೆ.
----ಚಿನ್ಮಯಿ

Wednesday, January 20, 2021

ಇಳೆಯ ಅಪ್ಸರೆ

ರವಿ ಮುಳುಗೋ ವೇಳೆಯದು,

ಕಂಡೆನಾಗ ಬೆಳದಿಂಗಳ ಚಂದಿರ.

ಯಾವ ಊರ ಅಂದಗಾತಿಯೋ,

ಕಂಡ ಒಡನೆಯೇ ತಲೆ ಗಿರಗಿರ.


ಜಡೆಯೇನೋ ಬಲು ಉದ್ದವು,

ಮುಡಿದಿಹಳು ಮಾರು ಮಲ್ಲಿಗೆ.

ನಯನವೇನೋ ಮೀನಿನಂತೆ,

ಅಂದವ ಹೆಚ್ಚಿಸಿಹಳು ಹಚ್ಚಿ ಕಾಡಿಗೆ.


ಅಧರವದು ಸಿಹಿ ಜೇನೇ ಸರಿ,

ನುಡಿದರೆ ಸಿಗುವುದೆಷ್ಟೋ ಮುತ್ತು.

ಕೊರಳ ದನಿ ಕೊಳಲಿನ ಹಾಗೆ,

ನುಡಿಸಿದಷ್ಟೂ ಏರುವುದು ಮತ್ತು.


ಲತೆಯಂತೆಯೇ ಇವಳ ನಡುವು,

ಬಳುಕಿದಾಗ ರೆಪ್ಪೆಗೇನೋ ನಾಚಿಕೆ.

ನನ್ನಾಕೆ ಇವಳೇ ಇಳೆಯ ಅಪ್ಸರೆ,

ಅದರಂತೆಯೇ ಹೆಸರಿವಳದು ಮೇನಕೆ.


ಪ್ರೇಮದೋಲೆಯ ನೀಡಿದೆನಿಂದು,

ಸ್ವೀಕರಿಸಿ ಸುಮ್ಮನಾದಳೊಮ್ಮೆಲೆ.

ಹಿಂತಿರುಗಿ ಹಾಗೆ ಸುಮ್ಮನೆ ನಕ್ಕಳು, ಅರಿತೆನಾಗ-

ನಗುವೇ ಒಪ್ಪಿಗೆಯ ಕರೆಯೋಲೆ.

         ----ಚಿನ್ಮಯಿ

Tuesday, January 19, 2021

Science specifically Vedic Science and Spirituality

If any person understands that both Science specifically Vedic Science and Spirituality are a single coin with two sides (wherein both should coexist rather than quarrel), then that person will definitely understand the true reality of life and world. Else, that person falsely believes the illusion as a true reality.

          ----chinmayi

Thursday, January 14, 2021

ಬ್ಯಾಸರದ್ ಬಾಳು!

ಬ್ಯಾಸರದ್ ಬಾಳು,

ಶ್ಯಾನೆ ಗೋಳು.

ಬ್ಯಾಸರದ್ ಬಾಳು,

ಶ್ಯಾನೆ ಗೋಳು.

ಹಿಂಗ್ ಅನ್ನ್ಕೊಂಡ್ರೇನೆ

ಶ್ಯಾನೆ ಬ್ಯಾಸರ ಕೇಳು.

ಯೋಚ್ನೆ ಮಾಡ್ದೀರಾ

ಓದು ಮುಂದಿನ್ ಸಾಲು.


ಮನ್ಸಾ ಅಂದ್ಮ್ಯಾಗ್ ಕಷ್ಟ್ಗಳ್ ನೂರ್ ಬರ್ತದೆ,

ಕಷ್ಟ್ಗಳ್ ಎದ್ರುಸೋ ತಾಕತ್ತ್ ಎಲ್ರಿಗ್ ಇರ್ತದೆ.


ಹೊಟ್ಟ್ತುಂಬಾ ಹಿಟ್ಟ್ ಇದ್ರೆ ಇನ್ನೇನ್ ಬೇಕು!

ಮಲ್ಕೊಂಡ್ಮೇಲ್ ನಿದ್ದ್ ಬಂದ್ರೆ ಅಷ್ಟೇ ಸಾಕು.


ಬ್ಯಾಸರದ್ ಬಾಳು,

ಶ್ಯಾನೆ ಗೋಳು.

ಬ್ಯಾಸರದ್ ಬಾಳು,

ಶ್ಯಾನೆ ಗೋಳು.

ಬ್ಯಾಸರದಿಂದ್ಲೆ ಪೂರ

ಜೀವನ ಆಗ್ತೈತ್ ಜಾಳು.

ಬ್ಯಾಸರ ಬಿಟ್ಟ್ರೇನೇ

ಇದ್ ಬಂಗಾರದ್ ಬಾಳು.

        ----ಚಿನ್ಮಯಿ

Saturday, January 2, 2021

ಪೂರ್ಣಚಂದಿರ

ಚಿತ್ರಕ್ಕೆ ಪದ್ಯ-೫೪

ಪೂರ್ಣಚಂದಿರನು ರವಿಯನ್ನು 

ಮರೆಮಾಡಿ ಉದಯಿಸಿದನು,

ಹಾಗೆಯೇ ಅವನು ತೆಂಗಿನ ಗರಿಯ 

ಹಿಂದೆಯೇ ನಗುತ ಅಡಗಿಹನು.


ಬೀಸೋ ಗಾಳಿ ಜೊತೆಗಾಯಿತೀಗ

ತೆಂಗಿನ ಗರಿಯ ಮಿಲನ,

ತೂಗೋ ಉಯ್ಯಾಲೆಯಂತೆಯೇ

ಸೊಗಸು ಗರಿಯ ನರ್ತನ.


ಸಾಗರ ಅಲೆಗಳ ಸಿಹಿ ಮುತ್ತು

ಸ್ವೀಕರಿಸಿತೀಗ ಅಂಬರ,

ಅಂಬರದಿಂದಲೇ ಬೆಳದಿಂಗಳ

ಚೆಲ್ಲಿದನು ಪೂರ್ಣಚಂದಿರ.

          ----ಚಿನ್ಮಯಿ

Monday, November 16, 2020

ಈ ಸಂಜೆ...

ಚಿತ್ರಕ್ಕೆ ಪದ್ಯ-೫೩

ಗಿಡ-ಮರ, ಅಂಬರದ ಬಿಂಬವ

ಪ್ರತಿಬಿಂಬಿಸಿತು ತಿಳಿ ನೀರು.

ತಿಳಿ ನೀರನ್ನು ಕದಡಿದಾಗ ನಾನು

ಪ್ರತಿಬಿಂಬವಾಯಿತು ನುಚ್ಚು ನೂರು. 


ಪ್ರತಿಬಿಂಬ ಮರುಕಳಿಸಿದಾಗ

ನಗುವಿನ ಕಾಂತಿಯು ಕಣ್ತುಂಬ.

ನಾ ಕಣ್ತುಂಬಿಕೊಂಡ ಕಾಂತಿಯ

ತೋರಿಸಿತು ಎನ್ನಯ ಪ್ರತಿಬಿಂಬ.


ಮೋಡಗಳ್ಹಿಂದೆ ರವಿ ಮಲಗಿದಾಗ

ಮೆಲ್ಲನೆ ಶಶಿಯು ಉದಯಿಸಿದ.

ಶಶಿಯು ಬಂದು ಸಂಜೆಯ ಅಳಿಸಿ

ಬೆಳಕಿನ ನಕ್ಷತ್ರಗಳೊಡನೆ ಸೇರಿದ.


ಈ ಸುಮಧುರ ಸಂಜೆಯ ಅತ್ಯದ್ಭುತ

ವೀಕ್ಷಣೆಯನ್ನು ಸೆರೆಹಿಡಿದ ನಾ ಧನ್ಯ.

ಮರುಕ್ಷಣವೇ ಸತ್ತರೂ, ಈ ಸಂಜೆಗೋಸ್ಕರ

ಮರಳಿ ಜನಿಸುವುದು ಎನ್ನ ಜೀವ.

           ----ಚಿನ್ಮಯಿ

Saturday, November 14, 2020

ನೆರವಾಗು

ಚಿತ್ರಕ್ಕೆ ಪದ್ಯ- ೫೨


ನೀ ನೆರವಾಗಿ

ನೊಂದ ಜೀವಕ್ಕೆ,

ನಗುತಲೇ ಬೆಳಗಿಸು

ಆರಿದ ಹಣತೆಯ.

ಕಷ್ಟದಲ್ಲಿರುವ ಕೈಗಳ

ಹಿಡಿದು ಮುನ್ನಡೆಸಿ,

ಜೀನನಾಗದೆ ನೀ

ಚೆಲ್ಲು ಮಮತೆಯ.


ನೀ ನೆರವಾಗಿ

ನಿಂತು ಹಿಮ್ಮೆಟ್ಟದೆ,

ಬೆಳಸಿ ಬೆಳಗಿಸು

ಕುಗ್ಗಿರುವ ಜೀವನವ.

ಅಸೂಯೆಯ ನೀ

ಕೊಂಚವು ತೋರದೆ,

ಮತ್ತೊಬ್ಬರ ನಗುವಿಗೆ

ಕಾರಣವಾಗೋ ಮಾನವ.


ನೀ ನೆರವಾದರೆ

ಮಾನವ ಕುಲಕ್ಕೆ,

ಮಾನವೀಯತೆಯಿಂದ

ನಿನ್ನ ಬಾಳು ವಿಫುಲ.

ಹೊಡೆದ ಮನಸ್ಸುಗಳ

ಮತ್ತೊಮ್ಮೆ ಕೂಡಿಸಿ,

ಬದುಕನ್ನು ಮಾಡು

ಇನ್ನೂ ಕೊಂಚ ಸರಳ.

        ----ಚಿನ್ಮಯಿ

Tuesday, November 10, 2020

ಈಗಿನ ಹಾಗು ಮುಂದಿನ ತಲೆಮಾರುಗಳಿಗೊಂದು ತುಸು ಕಿವಿ ಮಾತು.

ತಲೆಮಾರುಗಳು ಉರುಳಿದಂತೆ ಜನರ ಅಭಿರುಚಿ ಬದಲಾಗುತ್ತಿರುವುದು ಹಾಗು ಓದುಗರ, ಕೇಳುಗರ ಸಂಖ್ಯೆಯು ಪತನವಾಗುತ್ತಿರುವುದು ತೀರ ದುಃಖದ ವಿಷಯವಾಗಿದೆ.

ಹೀಗೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಒಬ್ಬರು ಸಹ ಓದುಗರು, ಕೇಳುಗರು ದೊರಕದೆ 'ಡಿಜಿಟಲ್' ಹಾಗು 'ಎಲೆಕ್ಟ್ರಾನಿಕ್ಸ್' ಪ್ರಪಂಚ ಎಂಬ ಜಾಲದಲ್ಲಿ ಸಿಲುಕಿ ಕೊಳೆತು ನಾರುವುದಂತು ಖಚಿತವಾಗಿದೆ. ಇನ್ನಾದರು ಹೆಚ್ಚೆತ್ತು ಆದಷ್ಟು ಸಮಯ ಪುಸ್ತಕಗಳನ್ನು ಓದವುದರಲ್ಲಿ, ಹಳೆಯ ಹಾಡುಗಳನ್ನು ಕೇಳುವುದರಲ್ಲಿ ಕಳೆಯಬೇಕೆಂದು ವಿನಂತಿಸುತ್ತೇನೆ. ಹಾಗೆಯೇ ವಿವಿಧ ಸ್ಥಳಗಳನ್ನು ಸುತ್ತಿ ವಿವಿಧ ಜನಗಳ ಪರಿಚಯ ಮಾಡಿಕೊಂಡು ಬದುಕಿನ ನಿಜವಾದ ಸಾರವನ್ನು ಅನುಭವಿಸಬೇಕೆಂದು ಹೇಳಲು ಇಚ್ಛಿಸುತ್ತೇನೆ.

              ----ಚಿನ್ಮಯಿ

Monday, November 9, 2020

ಸಮಯ

ಚಿತ್ರಕ್ಕೆ ಪದ್ಯ-೫೧


ಮುಂಜಾನೆ ಎದ್ದು ದಿನಚರಿ

ಶುರುಮಾಡುವುದರಲ್ಲಿದೆ ವಿನಯ,

ಏಳದಿದ್ದರೆ ಹಿಂಸಾತ್ಮಕವಾಗಿ

ಖಂಡಿತ ಎಬ್ಬಿಸುವುದು ಸಮಯ.


ಅಮ್ಮ, ಎದ್ದೇಳೋ ಎಂದೊಡನೆ

ಎದ್ದು ತಿಂಡಿಯ ತಿನ್ನಬೇಕು ಗೆಳೆಯ,

ಇಲ್ಲವಾದಲ್ಲಿ ಗ್ರಹಚಾರವು ಕೆಟ್ಟು

ಬೈದರೆ ಪೊಳ್ಳಾಗುವುದು ಸಮಯ.


ಅಸಡ್ಡೆಯಿಂದ ವರ್ತಿಸದೆ ನೀ

ಕೇಳು ನಾ ಹೇಳುವ ಒಂದು ವಿಷಯ,

ಸಮಯದ ಮಹತ್ವ ಇನ್ನಾದರೂ

ಗ್ರಹಿಸು ಮೀರುವ ಮುಂಚೆ ಸಮಯ.

             ----ಚಿನ್ಮಯಿ

Wednesday, November 4, 2020

ಕಡಲ ತೀರದಿ ಮುಸ್ಸಂಜೆ

ಚಿತ್ರಕ್ಕೆ ಪದ್ಯ-೫೦

ಕಡಲ ತೀರದಿ ನೇಸರನು

ಮಬ್ಬಾಗುವಂತಹ ಸಮಯ.

ಅವನ ನೋಡಲು ಕಾತರದಿ

ಒಳ ಸೂರ್ಯನು ಉದಯ.


ಕೆಂಗಣ್ಣ ಭಾಸ್ಕರನು ದಿಟ್ಟಿಸಿ

ನೋಡುತ್ತಿದ್ದಾಗ ನನ್ನನ್ನೇ.

ನಾನೊಮ್ಮೆ ಬಿಂಬಗ್ರಾಹಿಯಿಂದ

ಸೆರೆಹಿಡಿದೆ ಅವನನ್ನು ಮೆಲ್ಲನೆ.


ಸುತ್ತಲಿರುವ ಪರಿಸರದೊಡನೆ

ಪರಿಚಯಿಸಿದಾಗ ಎನ್ನನು ಕಡಲು.

ನಾ ಹಾಗೆ ನಿಂತುಬಿಟ್ಟೆ ವೀಕ್ಷಿಸುತ್ತ

ರವಿ ಸೇರುವ ಕಡೆಮುಗಿಲು.

               ----ಚಿನ್ಮಯಿ

Sunday, November 1, 2020

ಅಮ್ಮ ಹಚ್ಚಿದೊಂದ್ ಹಣತೆ

ಚಿತ್ರಕ್ಕೆ ಪದ್ಯ-೪೯

ಅಮ್ಮ ಹಚ್ಚಿದೊಂದ್ ಹಣತೆ

ಮನೆಯಂಗಳವನ್ನು ಬೆಳಗಿತು.

ಎಲ್ಲರೊಂದೆಂಬ ಸಮತೆ

ಎದೆಯಂಗಳದಿಂದ ಹರಿಸಿತು. 


ಕಗ್ಗತ್ತಲ ಸರಿಸಿ ಬೆಳಕಿನೆಡೆಗೆ

ಕರೆದೊಯ್ಯಿತೀಗ ಹಣತೆ.

ದಾರಿ ಕಾಣದ ಎನಗೆ ಹೆದ್ದಾರಿ

ತೋರಿ ಜ್ಞಾಪಿಸಿತು ಸರಳತೆ.

            ----ಚಿನ್ಮಯಿ

Saturday, October 31, 2020

ಶಿಕ್ಷಣ ಮತ್ತು ಆರೋಗ್ಯ- ಎಲ್ಲರ ಮೂಲಭೂತ ಹಕ್ಕುಗಳು ಹಾಗು ಸೌಕರ್ಯಗಳು.

ಶಿಕ್ಷಣ ಮತ್ತು ಆರೋಗ್ಯ ಎಲ್ಲರ ಮೂಲಭೂತ ಹಕ್ಕುಗಳು ಹಾಗು ಎಲ್ಲರಿಗೂ ಒದಗಿಸುವಂತಹ ಮೂಲಭೂತ ಸೌಕರ್ಯಗಳು, ದುಡ್ಡು ಮಾಡೋ ಮಾರ್ಗವಲ್ಲ.

ಜನಗಳ ಆರ್ಥಿಕ ಸ್ಥಿತಿ, ಭಯ ಹಾಗು ಅಸಹಾಯಕತೆಯನ್ನು ಮೂಲ ಬಂಡವಾಳ ಮಾಡಿಕೊಂಡು ಇಲ್ಲ-ಸಲ್ಲದ ಕಾರಣಕ್ಕೆಲ್ಲಾ ವಿಪರೀತ ದುಡ್ಡನ್ನು ಕೊಳ್ಳೆ ಹೊಡೆಯುತ್ತಿರುವ ನಾಚಿಕೆಗೇಡಿನ ಸರ್ಕಾರಕ್ಕೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಾಗು ಆರೋಗ್ಯ ಕೇಂದ್ರಗಳಿಗೆ ನನ್ನ ಧಿಕ್ಕಾರ ಸದಾ ಇರುತ್ತದೆ.

            ----ಚಿನ್ಮಯಿ

Sunday, October 25, 2020

Humanity is the true religion

When you were born you didn't know which caste and religion you belonged to until your parents, relatives and society added the name tag to you that you belong to this caste, religion etc. 

So learn to live as a human first and follow humanity.

Caste, religion etc were created by humans and hence Just follow the orders of God and live the life peacefully which he has given to us.

                   ----chinmayi

Saturday, October 24, 2020

Electronics- An Ocean of enjoyment in learning

ಚಿತ್ರಕ್ಕೆ ಪದ್ಯ/ಉಲ್ಲೇಖ- ೪೮


According to me, Electronics is like an Ocean. If one learns to dive into it and swim and gets deeper into it, then he/she can enjoy to the fullest and survive easily in the beautiful ocean of electronics.

                     ----chinmayi

Friday, October 2, 2020

ಮಳೆರಾಯನ ಆರ್ಭಟ

ಚಿತ್ರಕ್ಕೆ ಪದ್ಯ-೪೭

ನೀ ನಿಲ್ಲಯ್ಯ ಮಳೆರಾಯ,

ನಿಂತು ಕರುಣೆ ತೋರಿಸಯ್ಯ,

ಹೀಗೇ ನೀ ಅಬ್ಬರಿಸಿದರೆ ಹೇಗಯ್ಯ!?

ಶಾಂತನಾಗೋ ವರುಣದೇವ,

ತಾಳಲಾರೆವು ನಿನ್ನೀ ಆರ್ಭಟವ,

ಪಾಪವ ತೊಳೆದು ಒಮ್ಮೆ ಸುಮ್ಮನಾಗಯ್ಯ.


ದಿನನಿತ್ಯ ಕರ್ಮಗಳು ನಿಂತಿವೆ,

ಜೀವನ ಬಹಳ ಕಷ್ಟಕರವಾಗಿದೆ,

ದಯಮಾಡಿ ನಮ್ಮ ಅಜ್ಞಾನವ ಕ್ಷಮಿಸು.

ಕ್ಷಮೆ ಸ್ವೀಕರಿಸಯ್ಯ ಇಂದ್ರದೇವ,

ವರುಣದೇವನನ್ನು ನಿಯಂತ್ರಿಸು,

ಮರಳಿ ಒಮ್ಮೆ ಧರಿತ್ರಿಯನ್ನು ಸಂತೈಸು.

        ----ಚಿನ್ಮಯಿ

Saturday, September 26, 2020

ಕತ್ತಲಿಂದ ಬೆಳಕಿನೆಡೆಗೆ...!

ಚಿತ್ರಕ್ಕೆ ಪದ್ಯ-೪೬

ಹಗಲಿಂದು ಕಗ್ಗತ್ತಲಾಗಲು,

ಒಳ ಸೂರ್ಯನು ಮಂಕಾದನು,

ಕರಿ ಮೋಡಗಳ ಗೋಡೆಯ ಕಾರಣ!

ಕತ್ತಲೆಯಲ್ಲೂ ಬೆಳದಿಂಗಳಂತೆ,

ನಗೆಯ ಕಾಂತಿಯ ಚಿಮ್ಮಿಸಿದನು,

ಮೋಡಗಳ್ಹಿಂದಿರೋ ಹೊಂಗಿರಣ.


ಕಂಗೆಟ್ಟು ಜೀವನ ಸಾಕಾಗಿ,

ಸೋಲೊಪ್ಪಿ ಸಾಯಬೇಕೇ,

ಎದುರಿಸದೆ ಜೀವನದ ಕಾದಾಟ?

ಯೋಚನೆ ನೂರೆಂಟಿದ್ದರು,

ಸಾಧಿಸೋ ಛಲವಿದ್ದರೆ ಸಾಕು,

ಧರೆಯಾಗುವುದು ನಿಜ ವೈಕುಂಠ.

            ----ಚಿನ್ಮಯಿ

Tuesday, September 22, 2020

ಬೇಲಿಯಾಚೆಯ ಪಿರುತಿ

ಚಿತ್ರಕ್ಕೆ ಪದ್ಯ-೪೫

ಬೇಲಿ ದಾಟಿಹನು,

ಪಾಂಡುವರ್ಣನು.

ನಾಚಿ ನಿಂತಿಹಳು, 

ಕೆಂದು ನಲ್ಲೆಯು.


ನಡುವೆ ಅಂತರಕ್ಕೆ,

ಏನೇ ಇರಲಿ ಕಾರಣ‌.

ಜೇನುನೊಣದಿಂದಲೇ,

ಆಗುವುದಿವರ ಮಿಲನ.

   ‌‌‌‌     ----ಚಿನ್ಮಯಿ

Sunday, September 20, 2020

ಓ ಹೃದಯವೇ...!

ಒಂದೇ ನೋಟದಲ್ಲೇ ಇಷ್ಟಪಡುವೆ,

ಇಷ್ಟಪಟ್ಟ ಮೇಲೆ ಪ್ರೀತಿ ಮಾಡುವೆ.

ಓ ಹೃದಯವೇ ನೀ ಏಕೆ ಹೀಗೆ?


ಇಷ್ಟಪಟ್ಟವರು ಜೊತೆಯಿದ್ದಾಗ ಖುಷಿ ಪಡುವೆ,

ಬಿಟ್ಟೋದಾಗ ನಗೆಯನ್ನು ಮಾಯವಾಗಿಸುವೆ.

ಓ ಹೃದಯವೇ ನೀ ಏಕೆ ಹೀಗೆ?


ತುಂಬಾ ಬೇಗ ಎಲ್ಲರನ್ನೂ ಹಚ್ಚಿಕೊಳ್ಳುವೆ,

ನಂತರ ಸುಮ್ಮನೆ ನೋವು ಪಡುವೆ.

ಓ ಹೃದಯವೇ ನೀ ಏಕೆ ಹೀಗೆ?


ಇರಬಹುದಿತ್ತಲ್ಲವೇ ನೀ ಕಲ್ಲು ಬಂಡೆಯ ಹಾಗೆ!

ಏಕೆ ನೀ ಇರುವೆ ಮೃದು ಹೂವಿನ ಹಾಗೆ!?

ಓ ಹೃದಯವೇ ನೀ ಏಕೆ ಹೀಗೆ?


ಭಾವನೆಗಳನ್ನು ಬದಿಗಿಟ್ಟು ಮಾತಾಡೊಮ್ಮೆ,

ಉತ್ತರಿಸು ನನ್ನ ಪ್ರಶ್ನೆಗಳಿಗೆಲ್ಲಾ ನೀನೊಮ್ಮೆ!

ಓ ಹೃದಯವೇ ನೀ ಏಕೆ ಹೀಗೆ?

         ----ಚಿನ್ಮಯಿ

Saturday, September 19, 2020

ಸಂಗೀತ<->ಸಾಹಿತ್ಯ

ಸಂಗೀತ ಹಾಗು ಸಾಹಿತ್ಯ ಒಂದೇ ಭಾವದ ಎರಡು ಮುಖಗಳು.

ಸಂಗೀತವು ದೇಹವಾದರೆ, ಸಾಹಿತ್ಯವು ಅದರ ಆತ್ಮ.

ಸಾಹಿತ್ಯವು ದೇಹವಾದರೆ, ಸಂಗೀತವು ಅದರ ಆತ್ಮ.

ಒಂದಿಲ್ಲದಿದ್ದರೆ ಇನ್ನೊಂದು ನಿರ್ಜೀವ (ಆತ್ಮವಿಲ್ಲದ) ದೇಹವಿದ್ದಂತೆ.

             ----ಚಿನ್ಮಯಿ

ಮೂರನೆ ಸ್ವಂತ ಸಾಹಿತ್ಯ ಬರವಣಿಗೆ

ಚಿತ್ರಕ್ಕೆ ಪದ್ಯ/ಹಾಡು- ೪೪

ಹಾಡು: RCB Fan Anthem 2020.

ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಹೆಚ್).


ಸೋಲೇ ಇರಲಿ RCB.

ಗೆಲುವೇ ಇರಲಿ RCB.

ನೀವೇ ಇರುವಿರಿ ಮನದಲ್ಲಿ.

ನಮ್ಮ ಉಸಿರು RCB.

ನಮ್ಮ ಹೆಸರು RCB.

ನಾವು ಇರುವೆವು ಜೊತೆಯಲ್ಲಿ. ||ಪ||


ಬಾರೋ ಗೆಳೆಯ ಕೇಳು ವಿಷಯ,

IPL ಅಂದರೆ ಮನರಂಜನೆ.

ಯಾರೇ ಬರಲಿ ಯಾರೇ ಇರಲಿ,

ಈ ಸಲ cupuu ನಮ್ದೆನೇ.||೧||


ಗೆಲುವಿನ ಸಮಯ ಬರುವುದು,

Don't underestimate ತಿಳ್ಕೊಳಿ.

ಗೆದ್ದಾಗ ಸಂಭ್ರಮ ಎಲ್ಲೆಡೆಯೂ,

ಆಹ್ವಾನ ನೀಡುವೆವು ಪಾಲ್ಗೊಳ್ಳಿ.||೨||


ಸೋಲೇ ಇರಲಿ RCB.

ಗೆಲುವೇ ಇರಲಿ RCB.

ನೀವೇ ಇರುವಿರಿ ಮನದಲ್ಲಿ.

ನಮ್ಮ ಉಸಿರು RCB.

ನಮ್ಮ ಹೆಸರು RCB.

ನಾವು ಇರುವೆವು ಜೊತೆಯಲ್ಲಿ. ||ಪ||


Fansu ನಾವು loyal ತುಂಬ,

ಬೆರಕೆ fans ತರ ನಾವಲ್ಲ.

ಒಂದೇ teamu ಸಾಯೋ ತನಕ,

Teamu switching ಗೊತ್ತಿಲ್ಲ.||೩||


ಇದ್ದರೇನು ತುಂಬಾ teamuuu,

ನಮ್ಮ teamಯೆ ನಮ್ಮ ಹೆಮ್ಮೆ.

ನಮ್ಮ ಊರು ಬೆಂಗಳೂರು,

ಕೊನೆಯವರೆಗೂ RCBನೇ.||೪||


ಸೋಲೇ ಇರಲಿ RCB.

ಗೆಲುವೇ ಇರಲಿ RCB.

ನೀವೇ ಇರುವಿರಿ ಮನದಲ್ಲಿ.

ನಮ್ಮ ಉಸಿರು RCB.

ನಮ್ಮ ಹೆಸರು RCB.

ನಾವು ಇರುವೆವು ಜೊತೆಯಲ್ಲಿ. ||ಪ||

             ----ಚಿನ್ಮಯಿ

Wednesday, September 16, 2020

ಪ್ರೇಮ: ಒಂದು ರಾಸಾಯನಿಕ ಕ್ರಿಯೆಯಲ್ಲ. Love: it's not a chemical reaction.

 

ವಿಜ್ಞಾನಿಗಳ ಪ್ರಕಾರ ಪ್ರೇಮವೊಂದು ರಾಸಾಯನಿಕ ಕ್ರಿಯೆ ಎಂಬುವುದೇ ಆದರೆ, ಇದಕ್ಕೆ ನನ್ನ ಧಿಕ್ಕಾರವಿರಲಿ.

ಸತ್ಯಾಂಶವೆಂದರೆ, ಪ್ರೇಮವೆಂಬುದು ದೈವಿಕ ಸ್ವರೂಪವಾಗಿದೆ ಹಾಗೂ ಧರ್ಮದ ಒಂದು ಆಧಾರವಾಗಿದೆ.

           ----ಚಿನ್ಮಯಿ

According to scientists if love is just a chemical reaction, then I will completely disdain their statement.

The truth is, love is a divine form and one of the pillar of dharma.

          ----chinmayi

Tuesday, September 15, 2020

ಸಾಧನೆಯ ಮಾರ್ಗ

ಚಿತ್ರಕ್ಕೆ ಪದ್ಯ-೪೩


ಹಾದು ಹೋಗುವ ದಾರಿಯಲ್ಲಿ

ಎರಡು ಮಾರ್ಗಗಳುಂಟು.

ಅತ್ತ ಹೋಗಲ? ಇತ್ತ ಹೋಗಲ?

ಎಂಬ ಯೋಚನೆ ನೂರೆಂಟು.


ಸರಿ ತಪ್ಪುಗಳ ಆಯ್ಕೆಯನ್ನು

ನಾವೇ ಮಾಡಬೇಕು ಕೊನೆಗೆ.

ಇದರ ಮೇಲೆಯೇ ನಿಂತಿದೆ

ನಮ್ಮ ಜೀವನದ ಬೆಳವಣಿಗೆ‌.


ಸಾಧನೆಯ ಶಿಖರವನೇರಲು

ಅಡೆತಡೆಗಳೇ ನಿಜ ಸ್ನೇಹಿತ.

ಸಾಧಿಸೋ ಚಲವೊಂದಿದ್ದರೆ

ಗೆಲುವು ನಮ್ಮದೆ ಖಂಡಿತ.


ಹಾರೋ ಹಕ್ಕಿಗಳ ಹಾಗೆಯೇ

ಹಾರುವುದನ್ನು ಕಲಿಯಬೇಕು.

ಎಷ್ಟೇ ಎತ್ತರ ಹಾರಿದರು ನಾವು

ಮರಳಿ ಭೂಮಿಗೆ ಬರಬೇಕು.

           ----ಚಿನ್ಮಯಿ

Monday, September 14, 2020

Life: A beautiful journey

Life is a journey where in-between birth and death there are four stops or stations called childhood, adulthood, middle age and old age. People are like passengers or travellers who travel with us in this journey of life.

•Some people get into this journey with us from the first stop or station called childhood and very few would travel till the final destination called old age and some may get down in between stations called adulthood and middle age.

•Many people will get in at adulthood station and hard truth is that so many will get down at the same station and not many will travel till middle age and very few will travel till old age.

•Very few people will get in at the middle age station and likewise adulthood station, hard truth is that they will get down at the same middle age station and very very few will travel till final old age destination.

•Hardly a few people will get in at final old age destination and likewise adulthood and middle age stations, hard truth is that they get down at the same old age destination.

However, the true fact of this journey called life is, no one starts their journey with us from birth and no one ends their journey with us at death. Hence, we have to always spend our beautiful journey of life by being happy and enjoying and living every moment of life to the fullest with all the passengers who accompany us and must learn to spread love and happiness to all the passengers whether all of them would travel with us till final old age destination or not.

           ----chinmayi

Saturday, September 12, 2020

ಸಹೋದರರ ಸಂಬಂಧ

ಚಿತ್ರಕ್ಕೆ ಪದ್ಯ-೪೨


ಶ್ರೀ ರಾಮನು ಹೇಳಿದನು, 'ಲಕ್ಷ್ಮಣನಂತಹ ತಮ್ಮನಿರಬೇಕೆಂದು.'

ಶ್ರೀ ಕೃಷ್ಣನು ಹೇಳಿದನು, 'ಬಲರಾಮನಂತಹ ಅಣ್ಣನಿರಬೇಕೆಂದು.'

ಒಟ್ಟಿನಲ್ಲಿ ಶೇಷನಾಗನಂತಹನೊಬ್ಬನು ಮಹಾವಿಷ್ಣುವಿಗೆ ಇರುವ ಹಾಗೆ ನಮಗೆಲ್ಲರಿಗೂ ಇರಬೇಕು.

        ----ಚಿನ್ಮಯಿ

Friday, September 11, 2020

ಸಿಹಿಗನಸು

ರಾತ್ರಿಯ ವೇಳೆಯಲ್ಲಿ ಚಂದ್ರನು ನೆತ್ತಿಯ ಮೇಲಿರಲು ತಣ್ಣನೆಯ ಗಾಳಿ ಸೇವಿಸಿ ಆಕಾಶವನ್ನೇ ದಿಟ್ಟಿಸಿ ನೋಡುತಲಿ ಕೂತಿರುವಾಗ, ನಕ್ಷತ್ರಗಳ ನಡುವಿಂದ ರಪ್ಪಂತ ಜಾರಿತೊಂದು ಉಲ್ಕೆಯು. ಒಂದು ಕ್ಷಣ ಮೂಕವಿಸ್ಮಿತನಾದೆನು ಅತ್ಯದ್ಭುತ ವೀಕ್ಷಣೆ ಇದೆಂದು!

ಆದರೆ, ನಿದ್ದೆಯಿಂದ ಎಚ್ಚರವಾದಾಗ ಕಾಣಿಸಿದ್ದು ಕೊಠಡಿಯ ಗೋಡೆಗಳಷ್ಟೇ ಎಂದು ತಿಳಿದಾಗ ನಸುನಕ್ಕಿದೆನು. ಇನ್ನೊಮ್ಮೆ ಸಿಹಿಗನಸಿನೊಳಗೆ ಮುಳುಗಲೆಂದು ನಿದ್ರಾದೇವಿಗೆ ಶರಣಾದೆನು.

           ----ಚಿನ್ಮಯಿ

Saturday, September 5, 2020

Universe+Nature=Life: The best teachers

Both Universe and Nature forms the Life and hence they are the best teachers for everyone.

Only thing is that, we must learn to interact, perceive and earn knowledge and wisdom from them. Finally, we must be grateful for everything.

                ----chinmayi

Wednesday, September 2, 2020

Life lessons from Pain

In majority of people,

Pain nullifies Anger, Ego and Pride and it silently amplifies Courage and Never give up attitude.

         ----chinmayi

Thursday, August 27, 2020

ಪಶ್ಚಿಮ ಘಟ್ಟಗಳ ಸೌಂದರ್ಯ


ಚಿತ್ರಕ್ಕೆ ಪದ್ಯ-೪೧

ಸ್ವರ್ಗದ ದ್ವಾರವಾದ ಸಕಲೇಶಪುರ,

ಹಾಸನ ಜಿಲ್ಲೆಗೆ ಹೆಮ್ಮೆಯ ಗೋಪುರ.

ಕಾಫಿ ಬಿತ್ತನೆಯ ಚಿಕ್ಕಮಗಳೂರು,

ಸುಂದರ ಸ್ಥಳಗಳಿಗೂ ತವರೂರು.


ಸ್ವಚ್ಛ ಗಾಳಿ ಸೇವನೆಯ ಮಲೆನಾಡು,

ನಿರ್ಮಲ ನಿಸರ್ಗ ತಾಣಗಳ ನೆಲೆಬೀಡು.

ಪುಣ್ಯಕ್ಷೇತ್ರಗಳ ಪ್ರಕೃತಿಯೇ ದಕ್ಷಿಣ ಕನ್ನಡ,

ಹೋಗಲೇಬೇಕು ತಪ್ಪದೇ ಎಲ್ಲರ ಸಂಗಡ.


ಕಾವೇರಿಯ ಉಗಮಸ್ಥಾನವಾದ ಕೊಡಗು,

ಸ್ವರ್ಗದ ಅರಮನೆಗಿಂತಲೂ ಸೊಬಗು‌.

ಇದುವೇ ಪಶ್ಚಿಮ ಘಟ್ಟಗಳ ಸೌಂದರ್ಯ,

ಕರುನಾಡಿನ ಮೂಲ ಚೇತನದ ಸಾನ್ನಿಧ್ಯ.

         ----ಚಿನ್ಮಯಿ

Friday, August 21, 2020

ಅಜ್ಞಾನವೇ ಅಧರ್ಮವು

ಅಜ್ಞಾನಿಗಳಿಗೆ ಬುದ್ದಿ ಹೇಳಿದರೂ ಅರ್ಥವಾಗದು ಏಕೆಂದರೆ, ಅವರು ವಾಸ್ತವಿಕದ ನಿಜ ಸ್ವರೂಪವನ್ನು ಮರೆತಿರುತ್ತಾರೆ ಹಾಗು ಅವರಲ್ಲಿ ಗ್ರಹಿಸುವ ಶಕ್ತಿಯು ಕ್ಷೀಣಿಸಿರುತ್ತದೆ. ಅಂತವರು ಅಧರ್ಮಿಗಳಾಗಿರುತ್ತಾರೆ.

ಆದ್ದರಿಂದ, ಪುನಃ ಧರ್ಮ ಸ್ಥಾಪನೆಗಾಗಿ ಅಂತವರನ್ನು ಸಂಹರಿಸಲು ಭಗವಂತ ಶ್ರೀ ವಿಷ್ಣು ಭುವಿಯಲ್ಲಿ ಪುನಃ ಹುಟ್ಟ ಬೇಕಾಗುತ್ತದೆ.

          ----ಚಿನ್ಮಯಿ

ಕರ್ಮಯೋಗದ ಮೂಲ ಸಿದ್ಧಾಂತ

ಕೆಲವೊಮ್ಮೆ, ಕೆಲವೊಂದನ್ನು ಧರ್ಮಕ್ಕಾಗಿ ತ್ಯಜಿಸಲು ಸಿದ್ದರಾಗಬೇಕು.

ಆದರೆ ಕೆಲವೊಮ್ಮೆ, ಕೆಲವೊಂದನ್ನು ಧರ್ಮಕ್ಕಾಗಿ ತ್ಯಜಿಸಲು ನಿರಾಕರಿಸಬೇಕು.

ಇವೆರಡರ ಮಧ್ಯೆ ಇರುವ ವ್ಯತ್ಯಾಸ ತಿಳಿದು ಧರ್ಮಕ್ಕಾಗಿ ಜೀವನ ಸಾಗಿಸುವವನೆ ಕರ್ಮಯೋಗಿ. 

ಇದುವೇ ಕರ್ಮಯೋಗದ ಮೂಲ ಸಿದ್ಧಾಂತ.

             ----ಚಿನ್ಮಯಿ