Saturday, May 16, 2020

ಪಂಚ ಮಹಾ ಭೂತಗಳು


ಚಿತ್ರಕ್ಕೆ ಪದ್ಯ-೯

''ಪೃಥ್ವಿ''ಯೇ ಮಾತೆಯಾಗಿ, ಮನೆಯಾಗಿ
ನಮಗೆ 'ಉಂಗುರದ ಬೆರಳೇ' ಸಂಕೇತ.
'ಮೂಗಿ'ನಿಂದಲೇ ವಾಸನೆಯನ್ನು ಹಿಡಿಯುವಂತೆ
ಪೃಥ್ವಿಯಲ್ಲಿ ಸಮನಾಗಿ ಜೀವಿಸುವುದೇ ನಿಮಿತ್ತ.

"ಜಲ"ವೇ ದೇವನಾಗಿ, ಪ್ರಾಣ ಧಾತುವಾಗಿ
ನಮಗೆ 'ಕಿರು ಬೆರಳೇ' ಸಂಕೇತ.
'ನಾಲಿಗೆ'ಯಿಂದಲೇ ರುಚಿ ಕಂಡು
ಜಲವು ನಮ್ಮೊಳಗೆ ಸೇರುವುದೇ ನಿಮಿತ್ತ.

"ಅಗ್ನಿ"ಯೇ ದೇವನಾಗಿ, ಬಾಳಿಗೆ ಬೆಳಕಾಗಿ
ನಮಗೆ 'ಹೆಬ್ಬೆರಳೇ' ಸಂಕೇತ.
'ನಯನ'ದಿಂದಲೇ ಅಗ್ನಿಯನ್ನು ವೀಕ್ಷಿಸಿ
ನಮ್ಮ ಬಾಳಿನ ದೀಪ ಉರಿಸುವುದೇ ನಿಮಿತ್ತ.

"ವಾಯು"ವೇ ದೇವನಾಗಿ, ಜೀವ ಧಾತುವಾಗಿ
ನಮಗೆ 'ತೋರು ಬೆರಳೇ' ಸಂಕೇತ.
'ಚರ್ಮ'ದಿಂದಲೇ ವಾಯುವನ್ನು ಸ್ಪರ್ಶಿಸಿ
ನಮ್ಮೊಳಗೆ ಸ್ವೀಕರಿಸುವುದೇ ನಿಮಿತ್ತ.

"ಆಕಾಶ"ವೇ ದೇವನಾಗಿ, ರಕ್ಷಣಾ ಕವಚವಾಗಿ
ನಮಗೆ 'ನಡು ಬೆರಳೇ' ಸಂಕೇತ.
'ಕರ್ಣ'ದಿಂದಲೇ ಶಬ್ದವನ್ನು ಗ್ರಹಿಸುವಂತೆ
ಆಕಾಶದಡಿ ಸುರಕ್ಷಿತವಾಗಿರುವುದೇ ನಿಮಿತ್ತ.
             ----ಚಿನ್ಮಯಿ

No comments:

Post a Comment