Saturday, May 9, 2020

ಮೊದಲನೆ ಸ್ವಂತ ಸಾಹಿತ್ಯ ಬರವಣಿಗೆ

ಹಾಡು: ಮೋಸಗಾರ.
ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಹೆಚ್).

ಗಮನ ಸೆಳೆವ ಅಂದಗಾರ, ಕನಸ ಕದಿಯೋ ಜಾದುಗಾರ ನನ್ನೀ ರಾಜಕುಮಾರ.
ಕುಣಿತ ನೋಡಿ ಸೋತೇ ಈಗ, ಸನಿಹ ಒಮ್ಮೆ ಬಾರೋ ಬೇಗ ನನ್ನೀ ಜೋಕುಮಾರ. ||ಪ||

ಕನಸು ನನಸಾಯಿತು ಬೇಗನೆ, ಎದೆಯಲ್ಲಿ ಶುರುವು ನಿವೇದನೆ.
ನೀನೇ ನನ್ನ ಕುಣಿತದ ಜೊತೆಗಾರ,ಜೊತೆ-ಜೊತೆಗೆ ಮನಸ್ಸಿನ ರಾಯಭಾರ. ||೧||

ಸುಂದರ ಭಾವನೆ ನೀನೇ, ಹಾಡಿನ ಭಾವವು ನೀನೇ.
ಕೊಂಚ ನಾಚಿಕೆಯ ತೋರೆ, ಸಂಗೀತ ನಾದಕ್ಕೆ ಹೆಜ್ಜೆ ಹಾಕುವ ಬಾರೇ. ||೨||

ಗಮನ ಸೆಳೆವ ಅಂದಗಾರ, ಕನಸ ಕದಿಯೋ ಜಾದುಗಾರ ನನ್ನೀ ರಾಜಕುಮಾರ.
ಕುಣಿತ ನೋಡಿ ಸೋತೇ ಈಗ, ಸನಿಹ ಒಮ್ಮೆ ಬಾರೋ ಬೇಗ ನನ್ನೀ ಜೋಕುಮಾರ. ||ಪ||

ಸಲಿಗೆಯ ನೀಡೆಂದು ಕೇಳುವೆ ಏಕೇ?
ಪ್ರೀತಿಗೆ ಮೋಸವ ಮಾಡಿದೆ ಏಕೇ?
ಕಾಮದ ಆಸೆಯು ಬಂದಿತೆ ನಿನಗೆ?
ನನ್ನಯ ಪ್ರೀತಿಗೆ ಇದುವೆಯಾ ಕೊಡುಗೆ? ||೩||

ತಪ್ಪು ಮಾಡಿದೆ ನಾ ಪ್ರೀತಿಸಿ ನಿನ್ನ,ಮೋಸ ಮಾಡಿತು ಈ ಕನಸ್ಸು ನನ್ನ.
ಕಾಮದ ವಸ್ತುವಲ್ಲ ಹೆಣ್ಣು ಎಂದು,ತೋರಿಸಿದೆ ನಾ ಎಲ್ಲರಿಗು ಇಂದು. ||೪||

ಕನಸ ಸರಿಸಿ ಮುಂದೆ ಹೋದೆ, ಮನಸ ನೋವನು ಮರೆತುಹೋದೆ ನಾನೇ ರಾಜಕುಮಾರಿ.
ಹೆಣ್ಣಿನ ಶಕ್ತಿ ಏನು ಎಂದು, ತೋರಿಸಿಕೊಟ್ಟ ನಾನು ಇಂದು ಆದೆನು ಮಾದರಿ.||ಪ||
                  ----ಚಿನ್ಮಯಿ

No comments:

Post a Comment