ಚಿತ್ರಕ್ಕೆ ಪದ್ಯ-೪೧ |
ಸ್ವರ್ಗದ ದ್ವಾರವಾದ ಸಕಲೇಶಪುರ,
ಹಾಸನ ಜಿಲ್ಲೆಗೆ ಹೆಮ್ಮೆಯ ಗೋಪುರ.
ಕಾಫಿ ಬಿತ್ತನೆಯ ಚಿಕ್ಕಮಗಳೂರು,
ಸುಂದರ ಸ್ಥಳಗಳಿಗೂ ತವರೂರು.
ಸ್ವಚ್ಛ ಗಾಳಿ ಸೇವನೆಯ ಮಲೆನಾಡು,
ನಿರ್ಮಲ ನಿಸರ್ಗ ತಾಣಗಳ ನೆಲೆಬೀಡು.
ಪುಣ್ಯಕ್ಷೇತ್ರಗಳ ಪ್ರಕೃತಿಯೇ ದಕ್ಷಿಣ ಕನ್ನಡ,
ಹೋಗಲೇಬೇಕು ತಪ್ಪದೇ ಎಲ್ಲರ ಸಂಗಡ.
ಕಾವೇರಿಯ ಉಗಮಸ್ಥಾನವಾದ ಕೊಡಗು,
ಸ್ವರ್ಗದ ಅರಮನೆಗಿಂತಲೂ ಸೊಬಗು.
ಇದುವೇ ಪಶ್ಚಿಮ ಘಟ್ಟಗಳ ಸೌಂದರ್ಯ,
ಕರುನಾಡಿನ ಮೂಲ ಚೇತನದ ಸಾನ್ನಿಧ್ಯ.
----ಚಿನ್ಮಯಿ