Tuesday, August 18, 2020

ಕಲಿಯುಗದಲ್ಲಿ ತಿಳಿಯಬೇಕಾದ ಕಟು ಸತ್ಯಗಳು

ಚಿತ್ರಕ್ಕೆ ಪದ್ಯ/ಜೀವನದ ಸತ್ಯ-೩೯

"ಪ್ರಶ್ನೆಗಳು-"

•ನಮ್ಮವರು ಇಲ್ಲಿ ಯಾರ್ಯಾರು?

•ನಮ್ಮದು ಎನ್ನುವುದು ಯಾವುದು?

•ಪ್ರಪಂಚದಲ್ಲಿ ನಮ್ಮ ಕರ್ತವ್ಯಗಳು ಏನಿಹುದು?


"ಉತ್ತರಗಳು-"

•ಪರಮಾತ್ಮನೊಬ್ಬನೇ ನಮ್ಮವನು.

•ನಾವು ಮಾಡುವ ಒಳ್ಳೆಯ ಕಾರ್ಯಗಳೇ ನಮ್ಮದು.

•ಧರ್ಮದ ಹಾದಿಯಲ್ಲಿ ನಡೆದು ಸಮಾಜದ ಹಿತಕ್ಕಾಗಿ ಜೀವಿಸುವುದೇ ನಮ್ಮ ಕರ್ತವ್ಯಗಳು.


"ಇತರೆ ಸತ್ಯದ ವಿಷಯಗಳು-"

•ಧರ್ಮದ ಮೂಲ ಆಧಾರವಾದ 'ಕರುಣೆ'ಯನ್ನು ಮೊಟ್ಟ ಮೊದಲಿಗೆ ಜೀವನದಲ್ಲಿ ರೂಪಿಸಿಕೊಳ್ಳಬೇಕಿದೆ.

•ಧರ್ಮದ ಐದು ಆಧಾರಗಳಾದ 'ಜ್ಞಾನ, ಧೈರ್ಯ, ಪ್ರೇಮ, ಸಮರ್ಪಣೆ, ನ್ಯಾಯ'ವನ್ನು ಅರಿಯಬೇಕಿದೆ.

•ಪಂಚ ಮಹಾಭೂತಗಳಾದ 'ಪೃಥ್ವಿ , ಜಲ, ಅಗ್ನಿ, ವಾಯು, ಆಕಾಶ'ದ ಭಿಕ್ಷೆಯೇ ಈ ದೇಹವೆಂಬುದನ್ನು ತಿಳಿಯಬೇಕಿದೆ.

•'ತಮಸ್ಸು, ರಜಸ್ಸು, ಸತ್ತ್ವ' ಎಂಬ ಗುಣಗಳು ಮನುಷ್ಯನ ಸ್ವಭಾವಕ್ಕೆ ಕಾರಣವಾಗಿದೆ.

•'ಭಯ, ಮೋಹ, ಕ್ರೋಧ, ಅಸೂಯೆ, ಅಹಂಕಾರ, ಮದ, ಲೋಭ, ಮಾತ್ಸರ್ಯ, ಕಾಮ'ದಂತಹ ಬಾಧೆಗಳಿಂದ ವಿಮುಕ್ತರಾಗಬೇಕಿದೆ‌.

•ಕೊನೆಯದಾಗಿ, ಆತ್ಮದಿಂದಲೇ ಪರಮಾತ್ಮನನ್ನು ಸೇರಬೇಕಿದೆ.

         ----ಚಿನ್ಮಯಿ

No comments:

Post a Comment