ಚಿತ್ರಕ್ಕೆ ಪದ್ಯ-೩೮ |
ಅಮ್ಮ ಎಂಬ ಶಬ್ದವೇ
ಎಲ್ಲದಕ್ಕೂ ಮೊದಲು.
ನನ್ನ ಜೀವಕ್ಕೆ ಅವಳೇ
ಪ್ರೇಮದ ಹೊನಲು.
ಸೂರ್ಯ ಚಂದ್ರ ತಾರೆಯರಂತೆ
ಬೆಳಕಾಗಿ ನಿಲ್ಲುವಳು ಬೀರುತಲಿ ಪ್ರಕಾಶ.
ಮೊಟ್ಟ ಮೊದಲಿನ ಗುರುವಾಗಿ
ಸ್ವರ್ಣದಂತಾಗಿಸುವಳು ಬದುಕಿನ ವಿಕಾಸ.
ಅಮ್ಮ ಎಂದು ಕರೆದರೆ
ಓಡಿ ಬರುವಳು ಬಳಿಗೆ.
ನೆನೆಯುತ ಸೇರುವಳು
ಬಿಟ್ಟಿರದೆ ಒಂದು ಗಳಿಗೆ.
ಹಸುಳೆ ಇಂದ ಕೊನೆಯವರೆಗೂ
ಬೆಳಗುವುದು ತಾಯಿಯೆಂಬ ಹಣತೆ.
ಜೀವನಕ್ಕೊಂದು ದಾರಿ ತೋರಿಸಿ
ಸಾಕಿ ಸಲಹುವಳು ಬಾರದಂತೆ ಕೊರತೆ.
ಅಮ್ಮ ನಿನ್ನ ನೆನೆದಾಗ
ಎದೆತುಂಬುವುದು ತಕ್ಷಣ.
ನನ್ನ ಸಂಪೂರ್ಣ ಬದುಕಿಗೆ
ನೀನೇ ಮೊದಲ ಕಾರಣ.
----ಚಿನ್ಮಯಿ
No comments:
Post a Comment