Thursday, December 30, 2021

ಹದಿಮೂರನೆ ಮರು ಸಾಹಿತ್ಯ ಬರವಣಿಗೆ

ಹಾಡು: "ನಗುತ ತಾಯಿ"

ಚಿತ್ರ: "ಮದಗಜ"

ಮೂಲ ಸಾಹಿತ್ಯ: "ಕಿನ್ನಾಲ್ ರಾಜ್"

ಮೂಲ ಗಾಯನ: "ಸಂತೋಷ್ ವೆಂಕಿ"

ಸಂಗೀತ: "ರವಿ ಬಸ್ರೂರ್"

ಮರುಸಾಹಿತ್ಯ ಹಾಡು: "ಸೋದರ-ಸೋದರಿ ಗೀತೆ"


ಅವಳೇ ಜೀವ ಎನಗೆ ದೈವ ಆಕಾಶದ ಮಿನುಗು ತಾರೆ,

ಬೇರೇ ಯಾವ ಜಾಗವು ಬೇಕಿಲ್ಲ ಅವಳ ಮಡಿಲಲ್ಲೆನ್ನ ಡೇರೆ.

ಉದರದ ಗೆಳತಿ ಸೋದರಿ ಎಂದು ಪದೇಪದೇ ಅಭ್ಯಾಸ ಅವಳಿಂದ ನಂಗೆ,

ಹಾಜರಿ ನಾನೇ ನೆನೆದರೆ ಒಮ್ಮೆ ಭಯದ ಕಡುರಾತ್ರಿಯಲ್ಲೂ ಆ ಕರೆಗೆ. ||ಪ||


ಹಿತ ಸ್ವರದಿಂದ ಕಣ ಕಣದಲ್ಲೂ ಶೃತಿಗೂ ಲಯಕ್ಕೂ ಸುಮಧುರ ನಂಟು,

ಎದೆಯ ಗೂಡೇ ದೇವರಸ್ಥಾನ ಅವಳೇ ದೇವತೆಯ ಪ್ರತಿ ಧ್ವನಿಯಂತೆ.

ಅರೆ ಘಳಿಗೆ ಬಿಡೆನು ಸ್ವಂತವೆಂದೂ ಆಕೆ,

ರವಿ ಇರುವ-ತನಕ ಅವಳಂತು ಕ್ಷೇಮ.

ಪ್ರಭೆ-ಯಂತೆ ಬೆಳಗೋ ಮೋರೆ ಕಂಡಾಗ,

ಮನದೊಳಗೆ ಉಗಮ ಹೊಸತು ಮಧುರ ಪ್ರೇಮ. ||೧||


ಲಕುಮಿ ನಾಥ ಹರನ ಭಾರ್ಯೆ ಜಗದ ಮೊದಲ ರಕುತ ಬಂಧ,

ಅವರೇ ನಾಚಿ ಬೆರಗೋ ಹಾಗೆ ಮೋಹಕ ಪ್ರೀತಿ ನಮ್ಮದೆ ಸ್ವಂತ.

ಅವಳೆಜ್ಜೆ-ಧರೆಗೆ ಸೋಕಿದರೆ ಸಾಕು,

ಕಹಿಬೇನೆ-ಸೋತು ಮಂಡಿ ಊರಿ ಶರಣು.

ಕಾದಾಟದಲ್ಲೂ ಸ್ವರ್ಗ ಸುಖವ ನೀಡೋ,

ಆಂತರ್ಯ ಜ್ಯೋತಿ ಆಕೆ ಬಾಳ ಭಾನು. ||೨|

       ----ಚಿನ್ಮಯಿ

Friday, December 3, 2021

ಕನ್ನಡಕ್ಕೆ ಅನುವಾದ ೧- "ಏಷ್ಯಾದ ನೀರಾವು"

ಚಿತ್ರಕ್ಕೆ ಪದ್ಯ/ ಸಾಕ್ಷ್ಯಚಿತ್ರ ಅನುವಾದ- ೫೭

ಬನ್ನಿ ವೀಕ್ಷಕರೇ, ಇವತ್ತು 'ವಿಷಕಾರಿಯಲ್ಲದ' ಒಂದು ಬಗೆಯ ಜೀವಿಯ ಬಗ್ಗೆ ತಿಳಿಯೋಣ. "ಅದೇ ಹಾವು". ಅರೇ ಏನಪ್ಪ ಇದು ಹಾವು ಅಂತಿದ್ದಾರೆ ಅಂತ ಆಶ್ಚರ್ಯ ಆಯ್ತ!? ಚಿಂತೆ ಬೇಡ, ಬನ್ನಿ ಅದೇನು ಅಂತ ವಿವರವಾಗಿ ಹೇಳ್ತಿನಿ ಕೇಳಿ.

        ವಿಷಕಾರಿಯಲ್ಲದ ಹಾವಿನ ಜಾತಿಯೊಂದಿದೆ, ಇದೆ ಸತ್ಯ. ಅದುವೇ 'ಏಷ್ಯಾದ ನೀರಾವು'. ಇದು ಸಾಮಾನ್ಯವಾಗಿ ಭಾರತದಲ್ಲಿ ಕಾಣುವಂತಹ ಹಾವುಗಳು. ಆದರೇ, ಇವುಗಳಿಗೆ ತೊಂದರೆಯುಂಟಾಗುವಂತಹ ಪರಿಸ್ಥಿತಿ ಬಂದರೆ ಕಚ್ಚಬಹುದು ಜೋಕೆ...! ಇವುಗಳು ನೆಸರ್ಗಿಕ ಹಾವುಗಳು ಅಥವಾ ಬೆನ್ನೇಣು ಹಾವುಗಳು. ಇವುಗಳು ಸರಿಸುಮಾರಾಗಿ ಮಧ್ಯದ ಗಾತ್ರದಲ್ಲಿರುವವು ಹಾಗೆಯೇ ಅಡಿಹಲಗೆ ಮಾಪಕಗಳನ್ನು ಹೊಂದಿರುವವು, ಇಷ್ಟಿದ್ದರೂ ಸಹಾ ಹೊಳಪಿನಿಂದ ಕಂಗೊಳಿಸುತ್ತವೆ. ಇವುಗಳ ಮೈಯೆಲ್ಲಾ ರಂಗುರಂಗಿನ ಮಾದರಿಯಂತೆ ಹಸಿರು, ಹಳದಿ ಹಾಗೂ ಕಂದು ಬಣ್ಣಗಳಿಂದ ರಾರಾಜಿಸುತ್ತದೆ. ಇವುಗಳು ಸರಾಸರಿಯಾಗಿ ೩-೪ ಅಡಿಯವರೆಗೂ ಬೆಳೆಯುತ್ತದೆ, ಕೆಲವು ೫ ಅಡಿಯವರೆಗೂ ಬೆಳೆಯಬಲ್ಲವು.

         ಇವುಗಳು ಭಾರತದಲ್ಲೆಲ್ಲಾ ತುಂಬಾನೇ ಸಾಮಾನ್ಯ. ಇವುಗಳ ವಾಸ ಸ್ಥಳಗಳು- ಕೊಳಗಳು, ಕೆರೆಗಳು, ನದಿಗಳು ಅಥವಾ ಬತ್ತದ ಗದ್ದೆಗಳು. ಇವುಗಳ ಆಹಾರ- ಕಪ್ಪೆಗಳು, ಮೀನುಗಳು, ಕೆಲವು ಸಲ ದಂಶಕಗಳನ್ನು ಹಾಗು ಪಕ್ಷಿಗಳನ್ನು ಸಹ ಸೇವಿಸುತ್ತವೆ. ಇವುಗಳನ್ನು 'ನೀರಾವು' ಎಂದು ಕರೆಯಲು ಕಾರಣ ಇವುಗಳ 'ಮೀನು ಬೇಟೆಯ ಚಾಣಾಕ್ಷತನ'ದಿಂದ. ಹೇಗೆ ನಾಗರಹಾವುಗಳು ತನ್ನ ಪ್ರಾಣರಕ್ಷಣೆಗೋಸ್ಕರ ಹೆಡೆಯೆತ್ತುತ್ತವೋ ಹಾಗೆಯೇ ಇವುಗಳು ದೇಹ ಹಾಗು ಹೆಡೆಯೆತ್ತಿ ನಾಗರಹಾವಿನಂತೆ ಅನುಕರಿಸುತ್ತವೆ. ಇದರಿಂದಲೇ ಇವುಗಳನ್ನು ನಾವು 'ಕೃತಕ ನಾಗರಹಾವು' ಎಂದು ಕರೆಯುತ್ತೇವೆ ಹಾಗೂ ಇವುಗಳನ್ನು ಕ್ರೂರವಾಗಿ ಹಿಡಿದಾಡಿದರೇ ಖಚಿತ ಕಚ್ಚುವವು.

         ----ಪರಿಕಲ್ಪನೆ ಹಾಗು ಕಯ್ಬರಹ, ಎರಿಕ್

         ----ಕನ್ನಡಕ್ಕೆ ಅನುವಾದ, ಚಿನ್ಮಯಿ

ಐದನೆ ಸ್ವಂತ ಸಾಹಿತ್ಯ ಬರವಣಿಗೆ

ಹಾಡು: ಬರ್ತಡೇ ಪಾರ್ಟಿ ಸಾಂಗ್

ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಹೆಚ್).


ಹೇ ಬಾ ಮಗ.

ಹೇ ಹೇ ಬಾರೋ ಮಗ.

ನಾ ready, ನೀ readyನಾ?

Shirtu ಹಾಕು suitu ಹಾಕು,

Pantu ಯಾಕೆ chaddi ಸಾಕು.

ಬಾ ಬೇಗ ಆಚೆ party ಶುರು.

ಹೇ ರಂಗು ರಂಗು ನಮ್ಮ ಬಾರು.||ಪ||


ಅಲ್ಲಿ ನೋಡು ಗೆಳೆಯ,

ಜೋರು ಜೋರು ಸಂಭ್ರಮ.

Birthday boy ನೋಡಲು,

ರಂಭೆ ಮೇನಕೆ ಸಂಗಮ.

ಅವರ ಜೊತೆ ನಾವೀಗ,

ಶುರು ಮಾಡುವ Hungama.||೧||


We wish you happy birthday

We wish you happy birthday


ಹೇ ಹೇ ಹೇ

Shirtu ಹಾಕು suitu ಹಾಕು,

Pantu ಯಾಕೆ chaddi ಸಾಕು.

ಬಾ ಬೇಗ ಆಚೆ party ಶುರು.

ನೀ ಬಾಯ್ಗೆ ಸ್ವಲ್ಪ ಬಿಟ್ಕೋ ಗುರು.

||ಅನು ಪ||


Joshu Songu ಬರಲಿ,

ಎಲ್ರೂ ಸೇರಿ ಕುಣಿಲಿ.

ತಮಟೆ Music ಜೊತೆಗೆ,

ಮೋಜು ಮಸ್ತಿ ಹೆಚ್ಚಲಿ.

ನಮ್ಮ್ ಹುಡುಗ ಬರ್ತಡೇ,

DJ ಸೌಂಡು ಏರ್ಸಲಿ. ||೨||


We wish you happy birthday

We wish you happy birthday


ಹೇ ಹೇ ಹೇ

ಎಣ್ಣೆ ಸಾಕು ಊಟ ಸಾಕು,

Party Super ನಿದ್ದೆ ಬೇಕು.

ನೀ ನಡಿ ಮಗ ಮನೆಗ್ ಬೇಗ.

ನಾ ಕೂಡ ಬಂದೆ ಹಿಂದೆ ಈಗ.

||ಅನು ಪ||


ಹೇ ಬಾ ಮಗ.

ಬಾ ಬಾ ಮಲ್ಗಣ ಮಗ.

ನಾ ಸುಸ್ತು, ನೀನು ಸುಸ್ತು.

Shirtu ಸಾಕು suitu ಸಾಕು,

Pantu chaddi ಎರಡು ನೂಕು.

ಆ ಕುಣ್ದು ಕುಣ್ದು ಬೆನ್ನು ನೋವು.

ಲೋ ಬಾರೋ ಗುರು ಮಲ್ಕೋ ಇನ್ನು.

||ಪ||

We wish you happy birthday maga.

        ----ಚಿನ್ಮಯಿ

Wednesday, November 3, 2021

ಪ್ರೇಮದರಸಿ

ನನ್ನೊಲುಮೆಯ ಹೂವೆ
ಎದೆಬಾಂದಳ ತಾರೆ.
ಕಣ್ಣೊಳ ನೆಲಸಿಹುದು
ಮಂದಾರದ ಮೋರೆ.

ಅನುದಿನ ಹೊಳೆಯುವ
ಅಪರೂಪದ ಚಂದ್ರಿಕೆ.
ಅನುಕ್ಷಣ ಪ್ರೀತಿಸಲು
ಹೃದಯವೇ ವೇದಿಕೆ.

ಮನಭಾವನೆಯ
ರಾಗ ತರಂಗಿಣಿ ಸುಧೆ.
ಎದೆಯಾಗರದಿ
ಪ್ರೇಮದೋಕುಳಿ ನಿಂದೆ.

ಭಾವಾಂತರಂಗದೊಳು
ಪ್ರೇಮದ ಮಂಥನ.
ಸಂಜೀವಿನಿ ನೀನಾಗಲು
ಚಿರಂಜೀವಿ ಈ ಚೇತನ.

ಅಚಲ ನಿಶ್ಚಲವೀ
ಪ್ರೇಮ ಕಾಶ್ಮೀರ.
ಗಿರಿಕನ್ಯೆ ಪ್ರಿಯೇ
ನೀ ಎನ್ನೆದೆ ಶಿಖರ.

     ----ಚಿನ್ಮಯಿ

Friday, October 29, 2021

ನಾನು-ನಾವು

ನೂರಾರು ಹೃದಯದೊಳು ಗೂಡು ಕಟ್ಟು,

ಝಣ ಝಣ ಕಾಂಚಾಣವ ದೂರವಿಟ್ಟು.

ತನ್ನ ಗರ್ಭದೊಳು ಚಿರನಿದ್ರಾ ಲಾಲಿಯಾಡುವಾಗ ಭೂಮಿ,

ಹೊತ್ಕೊಂಡ್ ಹೋಗೋದ್ ಏನಿದೆ ಸ್ವಾಮಿ?

ಒಳ್ಳೆತನದಿ ಬಾಳಿದರಷ್ಟೇ ನೀ ಸಿರಿವಂತ,

ಸ್ನೇಹ ಪ್ರೀತಿ ವಿಶ್ವಾಸದಿಂದಲೇ ನೀ ಜೀವಂತ.


ಮೂರ್ನಾಲ್ಕ್ ದಿನದ ಬಾಳಿದು.

ಇರುವಷ್ಟ್ ದಿನ ಒಳ್ಳೆದ್ ಮಾಡು.

'ನಾನು'ವೇ ಅಂಧಕಾರ.

'ನಾವು'ವೇ ಸಾಕ್ಷಾತ್ಕಾರ.

       ----ಚಿನ್ಮಯಿ

ಸಂಚಾರಿ ವಿಜಯಣ್ಣ🙏🏽💔

ಜೀವನದ ಸಂಚಾರದಲ್ಲಿ ಕಣ್ಮರೆಯಾದರೂ,

ನಮ್ಮೆಲ್ಲರ ನೆನಪಲ್ಲಿ ಸದಾಕಾಲವೂ "ಸಂಚಾರಿಯಾಗಿಯೇ" ನಿಶ್ಯಬ್ಧದಿಂದ ಸಂಚರಿಸುವಿರಿ.

"ಸಂಚಾರಿ ವಿಜಯಣ್ಣ"🙏🏽💔

        ----ಚಿನ್ಮಯಿ

ಯುವರತ್ನ "ಪುನೀತ್ ರಾಜ್‍ಕುಮಾರ್"🙏🏽💔

 ಓ ಪುನೀತ, ನೀ ವಿನೀತ.

ನೀ ವಿನೀತ, ನೀ ಪುನೀತ.


ಆ ಮಗುವಿನ ನಗು ಎಂದಿಗು ಜೀವಂತ.

ಈ ಮುಗುಳ್ನಗು ಎನ್ನೆದೆಯಲಿ ಶಾಶ್ವತ.

'ಪುನೀತ'ನಂತೆ ಬಾಳಿದ 'ರಾಜಕುಮಾರ'ನ ಸುತ.


ಯುವರತ್ನ "ಪುನೀತ್ ರಾಜ್‍ಕುಮಾರ್"🙏🏽💔

           ----ಚಿನ್ಮಯಿ

Saturday, October 16, 2021

True Cricket Fans

There are 'few people' called "IPL Cricket Pans" who will be 'only alive for two months of IPL period' and 'they vanish when India plays cricket.'

There are 'so many people' called "True Cricket Fans" who will be 'alive forever' and 'they enjoy both IPL and Indian Cricket Campaign.'

Only the second category people will "watch, love and respect cricket."

                                   🏏🇮🇳💛❤️

                                   ----chinmayi

Wednesday, October 13, 2021

Debate- An Healthy Argument

In any debate, one must listen first and then speak. Also one must strictly just stick to the point and speak about it only and must avoid nonsense, unnecessary, irrelevant and past personal talks. This is the rule/law of any debate and it's called as an "Healthy Argument."

         ----chinmayi

Tuesday, October 5, 2021

Yuva Bharathiya🇮🇳

Our youths, specifically North Indian youths are leaning towards Western Culture probably for these below couple of reasons-

1) Thinking that "Present India" is unfit for youths in many aspects due to various political reasons.

2) Thinking that Western Culture is the most elegant culture. 

But, my dear youths let me correct you that it's "Bharath" and not "India". Bharath has got an immense and great history which everyone should learn from scratch since it's been rewritten and manipulated by westerns so many times and many of our historical evidences have been burnt and destroyed which should be researched (Some has been searched). Then must remember it and document it in a proper way and finally not to be forgotten. Let's all strive hard to bring back the glory of World's Ancient and Best Existing Cultural Civilization called as "Sanathana Dharma-The Way Of Living."

             Always be a proud "Bharathiya🇮🇳"

                             ----chinmayi

Friday, September 24, 2021

ಹನ್ನೆರಡನೆ ಮರು ಸಾಹಿತ್ಯ ಬರವಣಿಗೆ

ಹಾಡು: "ನೂರು ಜನ್ಮಕೂ"

ಚಿತ್ರ: "ಅಮೇರಿಕ ಅಮೇರಿಕ"

ಮೂಲ ಸಾಹಿತ್ಯ: "ನಾಗತಿಹಳ್ಳಿ ಚಂದ್ರಶೇಖರ್"

ಮೂಲ ಗಾಯನ: "ರಾಜೇಶ್ ಕೃಷ್ಣನ್"

ಮರುಸಾಹಿತ್ಯ ಹಾಡು: "ಸ್ನೇಹ ಗೀತೆ"


ನೂರು ಜನ್ಮಕೂ ನೂರಾರು ಜನ್ಮಕೂ

ನೂರು ಜನ್ಮಕೂ ನೂರಾರು ಜನ್ಮಕೂ

ಮನದ ಭಾವನೆ ಎದೆಯುಸಿರ ಪ್ರಾರ್ಥನೆ-

ನನ್ನ ಆತ್ಮ, ನನ್ನ ಪ್ರಾಣ ನೀವೆಂದು.

ನೂರು ಜನ್ಮಕೂ ನೂರಾರು ಜನ್ಮಕೂ

ಮನದ ಭಾವನೆ ಎದೆಯುಸಿರ ಪ್ರಾರ್ಥನೆ-

ನಾನು ನೀವು, ನೀವು ನಾನು ಒಂದೆಂದು

ನೂರು ಜನ್ಮಕೂ... ||ಪ||


ಇರುಳಲ್ಲಿಯೂ ಬೆಳಕಾಗೊ 'ಸ್ನೇಹ' ಹಣತೆ, ಇನ್ನೆಲ್ಲಿ ಅಜ್ಞಾನ!?

ಹಗಲಾದರೆ ಬೆಳದಿಂಗ್ಳ ಜ್ಞಾನ

ನನ್ನುಸಿರ ಜೀವಗಳೇ

ಓ.. ಓ.. ಓ.ಓ.

ನನ್ನುಸಿರ ಜೀವಗಳೇ ನೀವೆಂದು ನನ್ನವರು

ಕಣ್ಣೊಳ ಕಂಬನಿಯ ಸಂತೈಸೊ ನಮ್ಮವರು

ನನ್ನೊಳಗೆ ಹಾಯಾಗಿ ಕುಳಿತವರು. ||೧||


ನೂರು ಜನ್ಮಕೂ ನೂರಾರು ಜನ್ಮಕೂ

ನೂರು ಜನ್ಮಕೂ ನೂರಾರು ಜನ್ಮಕೂ

ಮನದ ಭಾವನೆ ಎದೆಯುಸಿರ ಪ್ರಾರ್ಥನೆ-

ನನ್ನ ಆತ್ಮ, ನನ್ನ ಪ್ರಾಣ ನೀವೆಂದು

ನೂರು ಜನ್ಮಕೂ.. ||ಅನು ಪ||


ಈ ಸ್ನೇಹದ ಅತಿರೇಕ ಸವಿಯೋ ಘಳಿಗೆ ಝೇಂಕಾರ ಎಲ್ಲೆಡೆಯೂ,

ಈ ಆತ್ಮಕೆ ಸವಿರಾಗ ನೀವೂ

ಕಷ್ಟಕೆ ಹೆಗಲಾಗಿ,

ಓ.. ಓ.. ಓ.ಓ.

ಕಷ್ಟಕೆ ಹೆಗಲಾಗಿ ಜೊತೆಯಲ್ಲೇ ನಿಂತವರು

ಸಿರಿವಂತ ಆತ್ಮಗಳು ಇವರಿವರೇ ನನ್ನವರು

ಜೀವನದ ಎದೆಬಡಿತ ಸ್ನೇಹಿತರು. ||೨||


ನೂರು ಜನ್ಮಕೂ ನೂರಾರು ಜನ್ಮಕೂ.

ನೂರು ಜನ್ಮಕೂ ನೂರಾರು ಜನ್ಮಕೂ.

ಮನದ ಭಾವನೆ ಎದೆಯುಸಿರ ಪ್ರಾರ್ಥನೆ-

ನನ್ನ ಆತ್ಮ, ನನ್ನ ಪ್ರಾಣ ನೀವೆಂದು.

ನೂರು ಜನ್ಮಕೂ.. ||ಅನು ಪ||

        ----ಚಿನ್ಮಯಿ

Sunday, August 29, 2021

"ಆಧ್ಯಾತ್ಮಿಕತೆ"- ಮುಂದುವರಿದ ಪ್ರಾಚೀನ ವಿಜ್ಞಾನ <-> "Spirituality"- An advanced ancient science.

ಯಾರು 'ಆಧ್ಯಾತ್ಮಿಕತೆ'ಯನ್ನು 'ವಿಜ್ಞಾನ'ದ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವರೋ ಅಥವಾ ಅನುಭವಿಸುವರೋ, ಅಂತಹವರು ಮಾತ್ರ "ದೇವರ"ನ್ನು ಅನುಭವಿಸಲು ಅಥವಾ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಏಕೆಂದರೆ, 'ಆಧ್ಯಾತ್ಮಿಕತೆಯೇ ವಿಜ್ಞಾನವಾಗಿದೆ'- ಇದನ್ನು ಅನುಭವಿಸಲು ಅರ್ಥಮಾಡಿಕೊಳ್ಳಬೇಕು ಹಾಗೂ ಅರ್ಥಮಾಡಿಕೊಳ್ಳಲು ಅನುಭವಿಸಬೇಕು. ಇನ್ನಷ್ಟೂ ನಿರ್ದಿಷ್ಟವಾಗಿ ಹೇಳುವುದಾದರೆ, ಇದು 'ಆಧುನಿಕ ವಿಜ್ಞಾನ'ಕ್ಕಿಂತಲೂ ತುಂಬಾನೇ ಮುಂದುವರಿದಿದ್ದ 'ಪ್ರಾಚೀನ ವಿಜ್ಞಾನ'.

ಆದ್ದರಿಂದಲೇ, 'ರಾಮಾಯಣ' ಹಾಗೂ 'ಮಹಾಭಾರತ' ಎರಡೂ ಸಹ ನಮ್ಮ ಹೆಮ್ಮೆಯ 'ಇತಿಹಾಸ'ವಾಗಿದೆ. ಇವುಗಳನ್ನು 'ಕಲ್ಪಿತ ಕಥೆ'ಗಳೆಂದು ಹೇಳುವುದರಲ್ಲಿ ಯಾವುದೇ ಅರ್ಥವಿರುವುದಿಲ್ಲ.

            ----ಚಿನ್ಮಯಿ

When anyone learns to understand or experience 'Spirituality' in perspective of 'Science', then that person will experience or understand "GOD" ultimately. This is because, 'Spirituality is Science' itself which is to be understood to experience and experienced to understand. To be more specific, it is an 'Ancient Science' which was much more advanced than 'Modern Science'.

Hence, both 'Ramayana' and 'Mahabharata' are our great 'History' or 'Itihasa'. Labeling them as 'Mythology' makes no sense.

           ----chinmayi

Saturday, July 31, 2021

ಪ್ರೇಮ ವಾಚನ

ನಿನ್ನ ನೋಡಿದೆ ಒಂದು ಸಂಜೆ,

ಜಾಗವೇನೋ ಊರ ಸಂತೆ.

ನನ್ನ ಚಿತ್ತವ ಸೆಳೆದೆ ನೀನು,

ಇಳೆಯು ರವಿಯ ಸುತ್ತುವಂತೆ.


ನಿನ್ನ ಹೆಜ್ಜೆಯ ಸೋಕಿದ ಕ್ಷಣ-

ಸುತ್ತಲೂ ಆವರಿಸಿತು ನಿಶೆ.

ನಿನ್ನ ಗೆಜ್ಜೆಯ ಸದ್ದಿನಿಂದಲೇ-

ಮೆಲ್ಲ-ಮೆಲ್ಲನೆ ಏರಿತು ನಶೆ.


ಹಿಂದೆ-ಹಿಂದೆಯೇ ಬಂದೆ ನಾ-

ತಿಳಿಯಲು ಮನೆ ವಿಳಾಸ.

ತಿಳಿದ ಮರುಕ್ಷಣದಿಂದಲೇ-

ಎದೆಯ ತುಂಬಾ ವಿಲಾಸ.


ಅಂದಿನಿಂದಲೇ ಶುರುವು-

ಮಾಡಿದೆ ಪ್ರೇಮ ವ್ಯವಸಾಯ.

ದಿನವೂ ನಿನದೆ ಗುಂಗಿನಲ್ಲಿ-

ಮುಳುಗಿ ಕಳೆದೆ ಸಮಯ.


ನಿನ್ನ ಕಂಡ ಹಳೆಯ ದಿನಗಳ-

ನಿನಗೇ ಹೇಳಿದೆ ಇಂದು.

ನಿನ್ನ ಎದುರೇ ನಿಂತು ಈಗ-

ಪ್ರೇಮವೇಳುವೆ ಕೇಳು. 


ಪ್ರೇಮವೇನೋ ರೇಸಿಮೆಯಂತೆ,

ನಾನೇ ಆಗುವೆ ರೇಸಿಮೆಯ ಧಾರ‌.

ಮಾಡಬಾರದೇ ನೀ ಕಸೂತಿಯ,

ಎನ್ನೆದೆಯಲಿ ಹೂಡಿ ಬಿಡಾರ!?

             ----ಚಿನ್ಮಯಿ

Friday, July 30, 2021

ಆತ್ಮ ಸಂಯಮ

ನಾಲಿಗೆ ತಿಳಿದರೂ ಬೇವು-ಬೆಲ್ಲದ ರುಚಿಯ,

ಸದಾ ಬಯಸುವುದು ಮಾತ್ರ ಬೆಲ್ಲದ ಸ್ನೇಹವ.

ಮನವೇ ಆದರೂ ನೋವು-ಸಂತಸದ ಒಡೆಯ,

ಸದಾ ಬಯಸುವುದು ಮಾತ್ರ ನೋವಿನ ಕ್ಷಣವ.


ನಾಲಿಗೆಗೆ ಕಹಿ ಬೇಡ, ಮನಕ್ಕೆ ಸಿಹಿ ಬೇಡ,

ಒಂದೇ ದೇಹದಲ್ಲಿದ್ದರೂ, ಇಬ್ಬರ ಬಯಕೆಯು ವಿರುದ್ಧ.

ಏತಕ್ಕೆ ಈ ರೀತಿ ಎಂಬುದಕ್ಕೆ ಉತ್ತರ ನಿಗೂಢ!

ನಿಗೂಢತೆಯ ಭೇದಿಸಲು ಆತ್ಮವಾಗಬೇಕು ಪರಿಶುದ್ಧ.

                          ----ಚಿನ್ಮಯಿ

Tuesday, July 13, 2021

ಶೂನ್ಯ <-> Nothingness

ನನಗೆ ತಿಳಿದಿರುವುದೊಂದೆ- 

" 'ನಾನು' ಶೂನ್ಯ" ವೆಂಬುದು.

            ----ಚಿನ್ಮಯಿ

All I know is-

" ' 'I' (is) am' Nothingness."

             ----chinmayi

        

Monday, July 12, 2021

ಬೀಸಣಿಗೆ

ಸೆಕೆಗಾಲದಿ ನನಗೂ-

ಪ್ರಕೃತಿಗೂ ಭಾರಿ ಕಾದಾಟ,

ರಾತ್ರಿ ಮಲಗಲಾಗದೆ-

ಬೈಯುತ ಗೊಣಗುತ ಒದ್ದಾಟ.


ತಂಪು ಗಾಳಿಯೊಡನೆ-

ಸರಸವಾಡಲಾಸೆ ಛಾವಣಿಗೆ,

ಮುನಿಸಿದ ಗಾಳಿಗೆ-

ಆತ್ಮೀಯ ಸ್ನೇಹಿತ ಬೀಸಣಿಗೆ.

         ----ಚಿನ್ಮಯಿ

Thursday, June 24, 2021

ಮದುವೆಯ ನಂತರದ ಫಜೀತಿ

"ಏನ್ರೀ, ಸ್ವಲ್ಪ ಅಂಗ್ಡೀಗ್ ಹೋಗಿ ಮನೆ ಸಾಮಾನ್ ತರ್ಬಾರ್ದೇ, ಯಾವಾಗ್ಲೂ ಆ ಹಾಳಾದ್ ನ್ಯೂಸ್ ನೋಡ್ಕೊಂಡೇ ಇರ್ತೀರಲ್ಲ" ಎಂದು ಹೆಂಡ್ತಿ ಹೇಳಲು,

ದಿಢೀರನೆ ಹೆಂಡ್ತಿಯ ಕಾಟ ತಡೆಯದೇ ಗಂಡ ಒಮ್ಮೆಲೆ ಎದ್ದು ಹೋದನು ಅಂಗ್ಡಿಯ ಕಡೆಗೆ, ಆ ಅಂಗ್ಡಿಯವ ಬಾಗಿಲ ಮುಚ್ಚುವ ಒಳಗೆ.

ನಿಟ್ಟುಸಿರ ಬಿಡುತ್ತ ಅಂಗ್ಡಿಯವನಿಗೆ ಗಂಡ ಹೇಳಿದ- "ಹೇ ಸ್ವಲ್ಪ ತಡಿಯೋ ಮಾರಾಯ, ತಿಂಗಳಿನ ಸಾಮಾನು ಕೊಟ್ಟು ಬಾಗಿಲಾಕಯ್ಯ",

ಹಳೆಯ ಗಿರಾಕಿ ಎನ್ನುವ ಸಲಿಗೆಯಿಂದ ಗಂಡ ಕೇಳಲು ರಿಯಾಯಿತಿ, ಒಲ್ಲದ ಮನಸ್ಸಿನಿಂದಲೇ ಅಂಗ್ಡಿಯವ ಕೊಟ್ಟನು ರಿಯಾಯಿತಿ.


ಮನೆಗೆ ವಾಪಸ್ಸಾದ ಗಂಡನಿಗೆ ಇನ್ನೊಂದು ಕೆಲಸ ಕೊಡಲು ಹೆಂಡ್ತಿ, "ಸರಿ ಆಯ್ತು ಕಣೆ ಎನ್ನಲ್ಲಷ್ಟೇ ಅಲ್ಲವೇ ಆದೀತು" ಎಂದು ಗೊಣಗಿದ ಗಂಡ,

ಗೊಣಗಲು ನಿಲ್ಲಿಸದ ಗಂಡ ಮತ್ತೆ ಹೀಗೆ ಗೊಣಗಿದನು-"ಯಾರಿಗೆ ಬೇಕು ಸ್ವಾಮಿ ಇದ್ದೆಲ್ಲಾ, ಏನೂ ಬೇಕಾದರೂ ತಡೆಯಬಹುದು ಈ ಹೆಂಡ್ತೀರ ಕಾಟ ತಡೆಯಲು ಆಗದು".

ಗಂಡನ ಗೊಣಗಾಟ ಕೆಳಿಸಿಕೊಂಡ ಹೆಂಡ್ತಿ- "ಏನ್ರೀ ಅದು ಗೊಣಗ್ತಾಯಿರೋದು" ಎಂದೊಂಡನೆಯೇ, "ಹೇ ಏನಿಲ್ಲ ಕಣೆ" ಎಂದು ಕೆಲಸವನ್ನು ಗೊಣಗುತ್ತಲೇ ಮುಂದುವರೆಸಿದ,

ಗಂಡ ಓದುಗರಿಗೆ ಗೊಣಗುತ್ತಲೇ ಹೀಗೆಂದನು- "ಹೀಗೇ ನೋಡಿ ಸ್ವಾಮಿ ಗಾಳಿ ಹೋದ ಬಲೂನಿನಂತೆಯೇ ಅಲ್ಲವೇ ಗಂಡಂದಿರ ಪರಿಸ್ಥಿತಿ, ಓಹೋ ನಿಮಗೆ ಮದುವೆ ಆಗಿಲ್ಲವೇ!? ಆಗಿ ನೋಡಿ ತಿಳಿಯುತ್ತೆ ಮದುವೆಯ ನಂತರದ ಫಜೀತಿ". 


ಈ ವಿನೋದಮಯ ಸತ್ಯವನ್ನು ಓದುವ ನಿಮಗೆ ನಗಲು ಆಗದೇ ಅಳಲು ಆಗದೇ ಉಂಟಾಗಬಹುದು ಇಕ್ಕಟ್ಟಿನ ಸ್ಥಿತಿ, ನೆನೆಸಿಕೊಂಡು ಮದುವೆಯ ನಂತರದ ಫಜೀತಿ!?

                ----ಚಿನ್ಮಯಿ

Wednesday, June 9, 2021

ಯೋಚಿಸಿ...! / Think...!

ಇದುವರೆಗೂ ಎಷ್ಟೋ ವಿಜ್ಞಾನಿಗಳು ಈಗಾಗಲೇ ಪ್ರಕೃತಿಯಲ್ಲಡಗಿದ್ದ ಎಷ್ಟೋ ವಿಚಾರಗಳ ಕುರಿತು ಆವಿಷ್ಕಾರ ಮಾಡಿದ್ದಾರೆ. ಸಾಮಾನ್ಯ ಮನುಷ್ಯರೇ ಇಷ್ಟೆಲ್ಲಾ ಮಾಡುವರೆಂದರೆ, ಇನ್ನೂ ಭಗವಂತನು ಪ್ರತಿಯೊಂದನ್ನು ಮುಂಚೆಯೇ ಸೃಷ್ಟಿಸಿರಲು ಸಾಧ್ಯವಿರುವುದಿಲ್ಲವೇ? ಹಾಗೂ ಮನುಷ್ಯನಿಗೆ ಎಲ್ಲವನ್ನೂ ಅರಿತುಕೊಳ್ಳಲು ಒಂದವಕಾಶ ಕೊಟ್ಟಿರಬಹುದಲ್ಲವೇ?

ಒಮ್ಮೆ ನೀವೇ ಯೋಚಿಸಿ ನೋಡಿ...!

          ----ಚಿನ್ಮಯಿ

In this long run of life on Earth, so many scientists have invented and discovered so many things which already had been hidden in nature. If a mere human beings can do all this, then will God not be responsible for been created everything already before humans? and will God not be responsible for giving a chance for humans to understand everything?

At least think about it once...!

          ----chinmayi

ನಾಲ್ಕನೆ ಸ್ವಂತ ಸಾಹಿತ್ಯ ಬರವಣಿಗೆ

ಹಾಡು: ಹೇ ಯೋಧನೆ
ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಹೆಚ್).


ಹೇ ಯೋಧನೆ ಹೇ ಯೋಧನೆ

ನೀ ನಮ್ಮಯ ಕಣ್ಗಾವಲು.

ಹೇ ವೀರನೆ ಹೇ ವೀರನೆ

ನಿನ್ನಿಂದಲೇ ಹಗಲ್-ಇರುಳು.


ನಮ್ಮ ಹೆಮ್ಮೆ ನೀವು,

ನಮ್ಮ ಹೆಮ್ಮೆss ನೀವು. ||ಪ||


ಶತ್ರುಗೆ ಯಮನಿವ ಸರದಾರ,

ವಜ್ರದ ಕವಚವು ಭಾರತಿಗೆ.

ತಲೆಯೇ ಬಾಗದೀ ಯುವಶೂರ,

ಸ್ಪೂರ್ತಿಯ ಧಾತ ತಾಯ್ನಾಡಿಗೆ.

ಹೇ ಬಿಸಿಲು ಚಳಿಗೆ ನಡುಗದೀ,

ರೋಷ-ಆವೇಷದ ಗುಂಡಿಗೆ.

ಕೊಂಚವು ಅಂಜದ ಯೋಧನ,

ಭಿಕ್ಷೆಯೇ ಈ ಉಸಿರು ನಮಗೆ‌.||೧||


ನಮ್ಮ ಹೆಮ್ಮೆ ನೀವು,

ನಮ್ಮ ಹೆಮ್ಮೆss ನೀವು.


ನಿನ್ನ ನಂಬಿದ್ದ ಬಾಳಿಗೆಲ್ಲಾ,

ನೀನೇ ಧೈರ್ಯದ ಹೊಂಗಿರಣ.

ನಮ್ಮ ದೇಶದ ಬಾವುಟವು,

ಹಾರಲು ನೀನೊರ್ವ ಕಾರಣ.

ಕೋಟಿ ಕಾಲಕೂ ಮರೆವೆವು,

ಇಂತಹ ಪವಿತ್ರ ಬಲಿದಾನ.

ದೇಶದ ಜನರ ಕೂಗಿದು,

ನಿನಗೆ ಇದುವೇ ಗುಣಗಾನ. ||೨||


ನಮ್ಮ ಹೆಮ್ಮೆ ನೀವು,

ನಮ್ಮ ಹೆಮ್ಮೆss ನೀವು.


ದೇಶವ ಕಾಯುವ ಸೈನಿಕನಲ್ಲಿ,

ದೇಶಾಭಿಮಾನವು ಅಳಿಯದು.

ಎಷ್ಟೋ ಆಯುದ್ಧ ಇದ್ದರು,

ಧೈರ್ಯವೇ ಆಯುದ್ಧ ಅವನದು.

ವೀರತ್ವ ಮೆರೆದ ಓ ವೀರನೇ,

ನಿನಗಿದು ಅರ್ಪಣೆ ಈ ಹಾಡು‌.

ನಮ್ಮಯ ಸೌಭಾಗ್ಯವು ಇದು,

ನಿನ್ನ ನಿವಾಸ ಎದೆ-ಗೂಡು. ||೩||


ನಮ್ಮ ಹೆಮ್ಮೆ ನೀವು,

ನಮ್ಮ ಹೆಮ್ಮೆss ನೀವು.


ಹೇ ಯೋಧನೆ ಹೇ ಯೋಧನೆ

ನೀ ನಮ್ಮಯ ಕಣ್ಗಾವಲು.

ಹೇ ವೀರನೆ ಹೇ ವೀರನೆ

ನಿನ್ನಿಂದಲೇ ಹಗಲ್-ಇರುಳು.


ನಮ್ಮ ಹೆಮ್ಮೆ ನೀವು,

ನಮ್ಮ ಹೆಮ್ಮೆss ನೀವು. ||ಪ||

          ----ಚಿನ್ಮಯಿ

Saturday, May 22, 2021

ನನ್ನಾಕೆ

ಅಂದೊಂದು ದಿನ ಕಂಡೆನವಳ ನಗುತಿದ್ದಲಿ-

ಕೇಳಲಾಸೆ, ಹೇಳಲಾಸೆ ಎಂದೆನಿಸಿ-

ಪಚ್ಚೆ ಹಸುರ ತೊಟ್ಟವಳ ಬಳಿ ನಿಂತೆನು.

ಅವಳ ನಗುವ ಕಂಡೊಡನೆ ಆಗೊಮ್ಮೆ-

ಮಾತು ಬಾರದೆ, ಮೌನ ಕಾಡಿದೆ-

ಎಂದು ಯೋಚಿಸಿ ಕುಂತೆನು!


ನಡುವ ಬಳುಕುತಲಿ ಅವಳಾಕಡೆಗೆ ಹೊಂಟಳು-

'ಏನು ವಿಷಯವೆಂದು?' ಎನ್ನ ಕೇಳಿ-

ಉತ್ತರ ಸಿಗದೆ, ತಿರುಗಿ ನೋಡದೆ ಸೀದಾ ಹೊಂಟಳು.

ಈ ದಿನಕ್ಕೆ ವ್ಯರ್ಥ ಮರುದಿನಕ್ಕೆ ಸಮರ್ಥ-

ವೆಂಬಂತೆ ಧೈರ್ಯ ಮಾಡಿದೊಮ್ಮೆಲೆ-

ಗುಲಾಬಿಯ ಹಿಡಿದೆ, ಅವಳೆಡೆಗೆ ನಡೆದೆ ಪ್ರೇಮವೇಳಲು.


ನಡುವೇನೋ ಸಣ್ಣ, ನುಣುಪಾದ ಕಣ್ಣ-

ನೋಡುತಲೇ ತಲೆ ಗಿರಗಿರನೆ ತಿರುಗಿ-

ದಂತಾದರೂ ಪ್ರೇಮವ ಹೇಳಿಯೇಬಿಟ್ಟೆ.

ಅವಳೇನೋ ನಾಚಿದಳೋ, ಕುಪಿತಗೊಂಡಳೋ-

ಅರಿವಿಲ್ಲ ಎನಗೆ ಕಾಣಿಸಿತಷ್ಟೇ ತಲೆಯಲ್ಲಿದ್ದ ಮಲ್ಲಿಗೆ-

ಅದ ನೋಡಿದೆ, ಸುಮ್ಮನಾದೆ ಗುಲಾಬಿಯ ಎಸೆದುಬಿಟ್ಟೆ.


ಬೇಜಾರಾದ ಎನಗೆ, ಬೇಕೆನಿಸಿತು ಸಲಿಗೆ-

ಆಗಿದ್ದಾಗಲೆಂದು ಮತೊಮ್ಮೆ ಕಾದೆ-

ನಾನು ಅವಳು ಬಹಳೆಂದು.

ಒಂದಾಶ್ಚರ್ಯ ಕಾದಿತ್ತೆನಗೆ ಮೇಗಡೆ-

ನೋಡಲು ರೇಸಿಮೆಯುಟ್ಟು ಬಂದೊಡನೆ-

ಮುತ್ತಿಟ್ಟಳೆನ್ನ ಕೆನ್ನೆಗೆ, ಆ ಘಳಿಗೆ-

ಬಂದಿತ್ತು ಪ್ರೇಮದೌತಣ ಸವಿಯಲೆಂದು.

               ----ಚಿನ್ಮಯಿ

Tuesday, May 4, 2021

Past-Present-Future / ಭೂತ-ವರ್ತಮಾನ-ಭವಿಷ್ಯತ್

Be it "Time Travel", "Alien Theories", "Black Hole Theories", "Multiverse and Parallel Universe Concepts", "100% Brain Capacity Concepts" and much more things which are being shown and being showed in movies, webseries etc and also the hypothetical theories that were and that are being published by many scientists have become true reality. Henceforth, in the far future many other things will surely become true and we humans ourselves will watch and experience all of it lively like how we are watching and experiencing it now.

"Human mind is so powerful and at the same time it's so cruel."

                  ----chinmayi

"ಕಾಲಯಾನ", "ಅನ್ಯಲೋಕ ಜೀವಿಗಳ ಸಿದ್ಧಾಂತಗಳು", "ಕಪ್ಪು ರಂಧ್ರದ ಸಿದ್ಧಾಂತಗಳು", "ಬಹುತೇಕ ಬ್ರಹ್ಮಾಂಡದ ಹಾಗೂ ಸಮಾನಾಂತರ ಬ್ರಹ್ಮಾಂಡದ ಪರಿಕಲ್ಪನೆಗಳು", "೧೦೦% ರಷ್ಟು ಮೆದುಳಿನ ಸಾಮರ್ಥ್ಯ"- ಇವುಗಳೆಲ್ಲದರ ಕುರಿತು ಹಾಗೂ ಇನ್ನೂ ಬಹುತೇಕ ಅವಿಸ್ಮರಣಿಯ ವಿಚಾರಗಳ ಕುರಿತು ಚಲನಚಿತ್ರಗಳಲ್ಲಿ ಹಾಗೂ ಗಣಕ ಜಾಲ ಸರಣಿಗಳಲ್ಲಿ ಮುಂಚೆಯೇ ತೋರಿಸಿರುವುದು ಹಾಗೂ ಈಗೀಗ ತೋರಿಸುತ್ತಿರುವುದು ಹಾಗೂ ಎಷ್ಟೋ ವಿಜ್ಞಾನಿಗಳು ರಚಿಸಿರುವ ಸಾಕಷ್ಟೂ ಕಲ್ಪನೆಯ ಸಿದ್ಧಾಂತಗಳು ಎಲ್ಲವೂ ನಿಜವಾಗಿದೆ. ಈಗ ಹೆಂಗೆ ನಾವು ಮನುಷ್ಯರೆಲ್ಲರೂ ಎಲ್ಲವನ್ನೂ ಕಾಣುತ್ತಿರುವೆವೋ ಹಾಗು ಅನುಭವಿಸುತ್ತಿರುವೆವೋ ಹಾಗೆಯೇ ಇನ್ನು ಮುಂಬರುವ ಬಹು ದೂರದ ಭವಿಷ್ಯತ್ಕಾಲದಲ್ಲಿ ಇನ್ನೂ ಎಷ್ಟೋ ವಿಚಾರಗಳು ಅವಶ್ಯವಾಗಿ ಸತ್ಯವಾಗುವುದು ಹಾಗೂ ನಾವೆಲ್ಲರೂ ಇದನ್ನೆಲ್ಲವನ್ನೂ ಸ್ವತಃ ಪ್ರತ್ಯಕ್ಷವಾಗಿ ಕಾಣುವೆವು ಹಾಗು ಅನುಭವಿಸುವೆವು.

"ಮನುಷ್ಯನ ಮೆದುಳು ಎಷ್ಟು ಶಕ್ತಿಯುತವಾದದ್ದೋ ಅಷ್ಟೇ ಕ್ರೂರವಾಗಿದೆ."

                     ----ಚಿನ್ಮಯಿ

Tuesday, April 20, 2021

ಉತ್ತರದ ಪ್ರೇಮ<->ಪ್ರೇಮಕ್ಕೆ ಉತ್ತರ

ಹೇ ಹುಡುಗಿ ಕೇಳ್ಲೇ ಸ್ವಲ್ಪ,

ನಾವಿಬ್ರೂ ಚಲೋ ಜೋಡಿ ಅಂತಿವ್ನಿ.

ಈ ಕಡ್ಯಾಗ ಕಣ್ಣ್ ಹಾಯಿಸ್ಲೇ,

ನಿನ್ನೇ ನೋಡ್ಕೊಂತ ಹಾಗೆ ನಿಂತಿವ್ನಿ.


ಕೇಳ್ಲೇ ಹುಡುಗ ಖರೆ ಮಾತ,

ನಿನ್ನ ನೋಡಕ್ಕಂತಲೇ ನಾ ಬಾನ್ನಿ.

ಗುರುತಾತು ನನಗ ನಿನ್ನಿಷ್ಟ,

ಅದಕ್ಕಂತಲೇ ತಾಳಿಯ ನಾ ತಾನ್ನಿ.


ಮದವಿ ಆಗಣ ನಾವೀಗ,

ಜೊತೆಯಾಗ ಜೀವನ ಬಂಡಿ ನಡೆಸಾಕ.

ಹೂ! ನನಗ ಅದೇ ಆಸೆ ಐತೀ,

ಆದರ ಇಷ್ಟ ಲಗೂ ಬೇಡ ಸ್ವಲ್ಪ ನೀ ತಡ್ಕ.

          ----ಚಿನ್ಮಯಿ

Wednesday, April 7, 2021

TIME

ಚಿತ್ರಕ್ಕೆ ಪದ್ಯ/ಉಲ್ಲೇಖ- ೫೬

TIME will fuck anyone either right away or slowly. But, TIME will heal and cure slowly.

TIME is both 'evil' and 'good'.

Just BEWARE of TIME.

            ----chinmayi

Monday, April 5, 2021

ನಿರಮ್ತರ ಪ್ರೇಮ...!?

ನಿಂತು ಹೋದಾಗ ನಿರಮ್ತರ ಹೃದಯಗಳ ಪ್ರೇಮದ ಯಾನ,

ಹೃದಯವೇ ನೀಡಬೇಕು ಖಾಲಿತನಕ್ಕೇನೆಂದು ಕಾರಣ.

ಒಂಟಿತನದ ಪರಮ ಸ್ನೇಹಿತ ಕಣ್ಣೀರು ಕೂಡ ಬಯಸಿದಾಗ ಮರಣ,

ನಗುವು ಮಾಯವಾಗಿ ಇನ್ನೇಗೆ ತಾನೆ ಸಾಗುವುದು ಜೀವನ!?

              ----ಚಿನ್ಮಯಿ

Thursday, February 25, 2021

ನಗುವಾಯಿತು ನಾಚಿಕೆ

ಚಿತ್ರಕ್ಕೆ ಪದ್ಯ- ೫೫


ಎಷ್ಟು ಮಾತಾಡಿದ್ರೂ ಅವಳೊಡನೆಯ ಮಾತು-ಕತೆ ಮುಗಿಯುತ್ತಿಲ್ಲ,
ಯಾಕಿಂಗೆ ಎನ್ನುವ ಮುದ್ದಾದ ಅನುಮಾನವೊಂದು ಕಾಡಿದಾಗ ಉತ್ತರ ಸಿಗುತ್ತಿಲ್ಲ.!
ಅವಳೊಮ್ಮೆ ನಸುನಕ್ಕಿ ಉತ್ತರ ನೀಡಿದರೆ ನಯನಗಳರಡಿ ಹೊಸ ಚೇತನ ಮೊಗಕ್ಕೆ,
ಅವಳೊಡನೆಯೇ ಪ್ರತಿ ಜನ್ಮ ಕಳೆಯಬೇಕೆಂದರಿತಾಗಲೇ ನಗುವಾಯಿತು ನಾಚಿಕೆ.
----ಚಿನ್ಮಯಿ

Wednesday, January 20, 2021

ಇಳೆಯ ಅಪ್ಸರೆ

ರವಿ ಮುಳುಗೋ ವೇಳೆಯದು,

ಕಂಡೆನಾಗ ಬೆಳದಿಂಗಳ ಚಂದಿರ.

ಯಾವ ಊರ ಅಂದಗಾತಿಯೋ,

ಕಂಡ ಒಡನೆಯೇ ತಲೆ ಗಿರಗಿರ.


ಜಡೆಯೇನೋ ಬಲು ಉದ್ದವು,

ಮುಡಿದಿಹಳು ಮಾರು ಮಲ್ಲಿಗೆ.

ನಯನವೇನೋ ಮೀನಿನಂತೆ,

ಅಂದವ ಹೆಚ್ಚಿಸಿಹಳು ಹಚ್ಚಿ ಕಾಡಿಗೆ.


ಅಧರವದು ಸಿಹಿ ಜೇನೇ ಸರಿ,

ನುಡಿದರೆ ಸಿಗುವುದೆಷ್ಟೋ ಮುತ್ತು.

ಕೊರಳ ದನಿ ಕೊಳಲಿನ ಹಾಗೆ,

ನುಡಿಸಿದಷ್ಟೂ ಏರುವುದು ಮತ್ತು.


ಲತೆಯಂತೆಯೇ ಇವಳ ನಡುವು,

ಬಳುಕಿದಾಗ ರೆಪ್ಪೆಗೇನೋ ನಾಚಿಕೆ.

ನನ್ನಾಕೆ ಇವಳೇ ಇಳೆಯ ಅಪ್ಸರೆ,

ಅದರಂತೆಯೇ ಹೆಸರಿವಳದು ಮೇನಕೆ.


ಪ್ರೇಮದೋಲೆಯ ನೀಡಿದೆನಿಂದು,

ಸ್ವೀಕರಿಸಿ ಸುಮ್ಮನಾದಳೊಮ್ಮೆಲೆ.

ಹಿಂತಿರುಗಿ ಹಾಗೆ ಸುಮ್ಮನೆ ನಕ್ಕಳು, ಅರಿತೆನಾಗ-

ನಗುವೇ ಒಪ್ಪಿಗೆಯ ಕರೆಯೋಲೆ.

         ----ಚಿನ್ಮಯಿ

Tuesday, January 19, 2021

Science specifically Vedic Science and Spirituality

If any person understands that both Science specifically Vedic Science and Spirituality are a single coin with two sides (wherein both should coexist rather than quarrel), then that person will definitely understand the true reality of life and world. Else, that person falsely believes the illusion as a true reality.

          ----chinmayi

Thursday, January 14, 2021

ಬ್ಯಾಸರದ್ ಬಾಳು!

ಬ್ಯಾಸರದ್ ಬಾಳು,

ಶ್ಯಾನೆ ಗೋಳು.

ಬ್ಯಾಸರದ್ ಬಾಳು,

ಶ್ಯಾನೆ ಗೋಳು.

ಹಿಂಗ್ ಅನ್ನ್ಕೊಂಡ್ರೇನೆ

ಶ್ಯಾನೆ ಬ್ಯಾಸರ ಕೇಳು.

ಯೋಚ್ನೆ ಮಾಡ್ದೀರಾ

ಓದು ಮುಂದಿನ್ ಸಾಲು.


ಮನ್ಸಾ ಅಂದ್ಮ್ಯಾಗ್ ಕಷ್ಟ್ಗಳ್ ನೂರ್ ಬರ್ತದೆ,

ಕಷ್ಟ್ಗಳ್ ಎದ್ರುಸೋ ತಾಕತ್ತ್ ಎಲ್ರಿಗ್ ಇರ್ತದೆ.


ಹೊಟ್ಟ್ತುಂಬಾ ಹಿಟ್ಟ್ ಇದ್ರೆ ಇನ್ನೇನ್ ಬೇಕು!

ಮಲ್ಕೊಂಡ್ಮೇಲ್ ನಿದ್ದ್ ಬಂದ್ರೆ ಅಷ್ಟೇ ಸಾಕು.


ಬ್ಯಾಸರದ್ ಬಾಳು,

ಶ್ಯಾನೆ ಗೋಳು.

ಬ್ಯಾಸರದ್ ಬಾಳು,

ಶ್ಯಾನೆ ಗೋಳು.

ಬ್ಯಾಸರದಿಂದ್ಲೆ ಪೂರ

ಜೀವನ ಆಗ್ತೈತ್ ಜಾಳು.

ಬ್ಯಾಸರ ಬಿಟ್ಟ್ರೇನೇ

ಇದ್ ಬಂಗಾರದ್ ಬಾಳು.

        ----ಚಿನ್ಮಯಿ

Saturday, January 2, 2021

ಪೂರ್ಣಚಂದಿರ

ಚಿತ್ರಕ್ಕೆ ಪದ್ಯ-೫೪

ಪೂರ್ಣಚಂದಿರನು ರವಿಯನ್ನು 

ಮರೆಮಾಡಿ ಉದಯಿಸಿದನು,

ಹಾಗೆಯೇ ಅವನು ತೆಂಗಿನ ಗರಿಯ 

ಹಿಂದೆಯೇ ನಗುತ ಅಡಗಿಹನು.


ಬೀಸೋ ಗಾಳಿ ಜೊತೆಗಾಯಿತೀಗ

ತೆಂಗಿನ ಗರಿಯ ಮಿಲನ,

ತೂಗೋ ಉಯ್ಯಾಲೆಯಂತೆಯೇ

ಸೊಗಸು ಗರಿಯ ನರ್ತನ.


ಸಾಗರ ಅಲೆಗಳ ಸಿಹಿ ಮುತ್ತು

ಸ್ವೀಕರಿಸಿತೀಗ ಅಂಬರ,

ಅಂಬರದಿಂದಲೇ ಬೆಳದಿಂಗಳ

ಚೆಲ್ಲಿದನು ಪೂರ್ಣಚಂದಿರ.

          ----ಚಿನ್ಮಯಿ