Sunday, December 24, 2023

ಅಖಿಲ ಬ್ರಹ್ಮಾಂಡಗಳ ಅನ್ನದಾತ— "ರೈತ"

ಚಿತ್ರಕ್ಕೆ ಪದ್ಯ- ೭೪


ದೇವರ ರೂಪಿ ದೈವ ಸ್ವರೂಪಿ

ಅನ್ನಪೂರ್ಣೆಯ ಮಗನು.

ನಿಸ್ವಾರ್ಥ ಹೃದಯೀ ಕರುಣಾಮಯೀ

ವೈಕುಂಠವಾಸಿಯವತಾರನು.

ಅವನೇ ನಮ್ಮವ ರೈತನು.

ಅಖಿಲ ಬ್ರಹ್ಮಾಂಡಗಳ ಅನ್ನದಾತನು.


ಧರೆಯ ತಾಕಿ ಭಕ್ತಿಯ ತೋರಿ

ಎತ್ತುಗಳೊಡನೆ ಉಳುವನು.

ಭತ್ತವ ನಾಟಿ ಪ್ರೇಮದಿ ಸಾಕಿ

ನೀರುಣಿಸುತಲೇ ಬೆಳೆಸುವನು.

ಅವನೇ ನಮ್ಮವ ರೈತನು.

ಅಖಿಲ ಬ್ರಹ್ಮಾಂಡಗಳ ಅನ್ನದಾತನು.


ಬಿಸಿಲಲೂ ಗೆಯ್ಮೆ ಚಳಿಯಲೂ ಗೆಯ್ಮೆ

ಹಗಲಿರುಳ ಲೆಕ್ಕಿಸದವನು.

ಮಳೆಯೇ ವರ ಮಳೆಯೇ ಶಾಪ—

ಆದರೂ ಬಿಡದ ಚಲಗಾರನು.

ಅವನೇ ನಮ್ಮವ ರೈತನು.

ಅಖಿಲ ಬ್ರಹ್ಮಾಂಡಗಳ ಅನ್ನದಾತನು.


ಒಮ್ಮೊಮ್ಮೆ ಲಾಭ ಒಮ್ಮೊಮ್ಮೆ ನಷ್ಟ

ಇಷ್ಟ-ಕಷ್ಟಗಳೊಡನೆ ಜೀವಿಸುವನು.

ಬರೀ ನಷ್ಟ ಭಾರೀ ನಷ್ಟ—

ಏನೇ ಆದರೂ ನಿಸ್ವಾರ್ಥನು.

ಅವನೇ ನಮ್ಮವ ರೈತನು.

ಅಖಿಲ ಬ್ರಹ್ಮಾಂಡಗಳ ಅನ್ನದಾತನು.


ದೈವಕ್ಕೆ ಅನ್ನವ ಪ್ರೀತಿಯ ಜೊತೆಗೆ

ಉಣಿಸುವ ಮಹಾನುಭಾವನು.

ಭೆದವೇ ತೋರದೆ ಎಲ್ಲರ ತೃಪ್ತಿಗೆ

ಏಕೈಕ ಕಾರಣವು ಇವನು.

ಅವನೇ ನಮ್ಮವ ರೈತನು.

ಅಖಿಲ ಬ್ರಹ್ಮಾಂಡಗಳ ಅನ್ನದಾತನು.


      ----ಚಿನ್ಮಯಿ

Sunday, December 10, 2023

ಸಂಸ್ಕಾರವಿಲ್ಲದ ಮನುಷ್ಯ ಉಸಿರಾಡುವ ಹೆಣವಷ್ಟೇ...

ಮಕ್ಕಳಿಗೆ ವಿದ್ಯೆ, ಬುದ್ಧಿಗಳ ಜೊತೆ ಜೊತೆಯಲ್ಲಿ ಸಂಸ್ಕಾರ ಅವಶ್ಯವಾಗಿ ಕಲಿಸಲೇಬೇಕು- ಏಕೆಂದರೆ, ಸಂಸ್ಕಾರದಿಂದಲೇ ನಿಜವಾದ ಜೀವನದ ಪಾಠ ಅರ್ಥವಾಗೋದು, ಅದುವೇ ಜೀವನಕ್ಕೆ ಬೇಕಾಗಿರೋದು, ವಿದ್ಯೆ ಬುದ್ಧಿಯೆಲ್ಲವೂ ನಂತರವಷ್ಟೇ. ಆದರೇ, ಈಗಿನ ಕಾಲದ ಮುಕ್ಕಾಲೂ ಭಾಗ ತಂದೆ ತಾಯಂದಿರು ಈ ಅತೀ ಸೂಕ್ಷ್ಮ ಹಾಗೂ ಪ್ರಮುಖ ವಿಚಾರವನ್ನು ಕಡೆಗಣಿಸಿ, ಮರೆತು ತಮ್ಮ ಮಕ್ಕಳಿಗೆ ಕಲಿಸದಿರುವುದು ವಿಷಾದದ ಸಂಗತಿ ಹಾಗೂ ಅರ್ಧಮಕ್ಕೆ ಸಮ.

ಮನುಷ್ಯನಿಗೆ ವಿದ್ಯೆ, ಬುದ್ಧಿಗಳು ದೊರಕದಿದ್ದರೂ ಪರವಾಗಿಲ್ಲ ಆದರೇ, ಸಂಸ್ಕಾರ ಅಂತೂ ದೊರಕಲೇ ಬೇಕು- ಏಕೆಂದರೆ, "ಸಂಸ್ಕಾರವಿಲ್ಲದ ಮನುಷ್ಯ ಉಸಿರಾಡುವ ಹೆಣವಷ್ಟೇ..."

ಸಂಸ್ಕಾರವಿಲ್ಲದ ದೇಶವು ದೇಶವೇ ಅಲ್ಲ.

ಸಂಸ್ಕಾರವಿಲ್ಲದ ಮನೆಯು ಮನೆಯೇ ಅಲ್ಲ.

ಸಂಸ್ಕಾರವಿಲ್ಲದ ಮನುಷ್ಯನು ಮನುಷ್ಯನೇ ಅಲ್ಲ.


             ----ಚಿನ್ಮಯಿ

Sunday, November 26, 2023

Beautiful Phase of Life- Childhood

"Then:"

For each and everyone, childhood is so special. Our back in the old days when we were young were just amazing. If we just rewind it and think, those days were the golden days of our lives—

So much innocence.

So much fun and cute fights.

So much playful nature.

So many games (both outdoor and indoor) we used to play.

So many wounds and smiles and pains behind them.

So many heartful friendships.

At last, yeah we used to study sometimes when we felt like.

See, this was the life which we can remember always and wish to rewind and live it yet again during our adulthood and older ages. Indeed, our parents were supportive and strict back then.


"Now:"

But parents nowadays, probably have forgotten how they grew up and making their kids live a "Machine Life" rather than "Human Life". The sad part is they are only strict and not supportive at all. There's also studying and it's a part of it I agree but only studying is not good at all. However, most importantly there is adulthood to struggle hard in life to build a so-called "Good Life." 

If this is the case of true life, then why snatch that beautiful phase of life from your kids. A humble request from my side is that please allow your kids to live the most beautiful phase of their life to the fullest and please don't make them regret in their adulthood and older ages that they didn't enjoy their life at all because that's the only phase of life where kids laugh, smile, cry, shout, play, enjoy and do N number of things.


"Heartfelt Conclusion:"

The only phase of life to enjoy the most with a true heart along with nature and true people and learn as much as we can is the "Childhood" and that's the beautiful phase of everyone's life.


                    ----Chinmayi

Wednesday, November 15, 2023

ಗೆಲುವು ಒಳ್ಳೆಯತನಕ್ಕೇ

ಹಿಂದೆ ಮೋಸ ಮಾಡಿ ಮುಂದೆ ಬುದ್ಧಿವಂತ ಎಂದು ಕರೆಸಿಕೊಂಡು ನೂರು ಕಾಲ ಬದುಕುವುದಕ್ಕಿಂತ,

ಹಿಂದೆ-ಮುಂದೆ ಎರಡೂ ಕಡೆಯಲ್ಲೂ ಎಲ್ಲರಿಗೂ ಒಳ್ಳೆಯದನ್ನೇ ಮಾಡಿ ಒಳ್ಳೆಯದನ್ನೇ ಕೋರುತ ದಡ್ಡ ಎಂದು ಕರೆಸಿಕೊಂಡು ಕೊಂಚ ಕಾಲ ಬದುಕುವುದೇ ಲೇಸು...


                   ----ಚಿನ್ಮಯಿ

Tuesday, November 14, 2023

The Perfection in The Imperfection

Always wanting to be perfect in life is not necessary, because sometimes, imperfections are way too good that they alone become perfection.

             ----Chinmayi

ದೀಪಾವಳಿ ಹಬ್ಬದಿಂದಿರೋ ಪ್ರಮುಖ ಕಥೆಗಳು-ವಿಶೇಷತೆಗಳು.

ದೀಪಾವಳಿಯು ಬೆಳಕಿನ ಹಬ್ಬ— ಎಲ್ಲಾ ಕಾಲಘಟ್ಟದಲ್ಲೂ ಸುಮಾರು ಕಥೆಗಳಿವೆ. "ಧರ್ಮ-ಅಧರ್ಮ", "ಸತ್ಯ-ಅಸತ್ಯ" ಗಳ ನಡುವಿನ ಮಹಾ ಸಂಘರ್ಷಗಳಿವೆ. ಇಷ್ಟೆಲ್ಲದರಲ್ಲೂ ಗೆದ್ದಿರುವುದು "ಧರ್ಮ-ಸತ್ಯ" ಗಳೇ ಎಂಬುದನ್ನು ನಾವುಗಳೆಲ್ಲರೂ ಅರಿತು ಕೆಳಗಿನ ಪ್ರಮುಖ ಕಥೆಗಳ ಉದಾಹರಣೆಯಂತೆಯೇ ಜೀವಿಸುತ್ತ ನಮ್ಮೊಳಗಿನ ಅಂಧಕಾರವು ನಶಿಸಿ ಬೆಳಕಿನ ಉಗಮದಿಂದ ಬಾಳು ಬೆಳಕಿನೋತ್ಸವವಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತ ಹಬ್ಬದಾಚರಣೆಯ ಸಂಭ್ರಮಿಸೋಣ...


"ಸತ್ಯ ಯುಗ (ಚಿನ್ನದ ಯುಗ):"

ಸಮುದ್ರ ಮಂಥನ— ಅಮೃತ-ಮಹಾಲಕ್ಷ್ಮೀಯ ಉಗಮ.

ಬಲಿಯು ಪಾತಾಳದೆಡೆಗೆ— ವಾಮನನ ಪವಿತ್ರ ಪಾದ ಸ್ಪರ್ಶದಿಂದ.


"ತ್ರೇತಾ ಯುಗ:"

ರಾವಣನ ಅಂತ್ಯ— ರಾಮ-ಸೀತೆ-ಲಕ್ಷ್ಮಣರ ಅಯೋಧ್ಯೆಯ ಆಗಮನ.


"ದ್ವಾಪರ ಯುಗ:"

ನರಕಾಸುರನ ವಧೆ— ಕೃಷ್ಣ-ಸತ್ಯಭಾಮೆಯರ ಸಂಗಮದಿಂದ.

ದ್ರೌಪದಿ-ಪಾಂಡವರು— ವನವಾಸ-ಅಜ್ಞಾತವಾಸಗಳಿಂದ ಮುಕ್ತ.


"ಕಲಿ ಯುಗ (ಅಂಧಕಾರ ಯುಗ):"

ಮಹಾಕಾಳಿಯ ರಕ್ಕಸ ರಕ್ತದೋಕುಳಿ— ಮಹಾದೇವನಿಂದಲೇ ಶಾಂತಿಯು ಕೊನೆಗೆ.

ಮಹಾವೀರನ ನಿರ್ವಾಣ— ಜ್ಞಾನೋದಯದಿಂದ ಸರ್ವ ಮುಕ್ತ.

ಮೊಘಲರ ಸೆರೆಯಿಂದ— ಗುರು ಹರಗೋಬಿಂದರ ಬಿಡುಗಡೆಯ ಸಂಭ್ರಮ.


             ----ಚಿನ್ಮಯಿ

Wednesday, November 1, 2023

ನಾ ಕನ್ನಡಿಗನು

ನನ್ನ ಮಾತೃ ಭಾಷೆ 'ತೆಲುಗು' ಆದರೇ ನಾ ಹುಟ್ಟಿದ್ದು-ಬೆಳದದ್ದು ಹೊನ್ನಿನ ನಾಡಾದ ಕರುನಾಡಲ್ಲಿ, ಪ್ರೇಮದಿಂದ ಕಲಿತದ್ದು ಕನ್ನಡವನ್ನು. 

ನಾ ಅನುದಿನ ಅನುಕ್ಷಣ ಸವಿಯೋದು-ಆನಂದಿಸೋದು-ಆರಾಧಿಸೋದು-ಅನುಭವಿಸೋದು-ಜೀವಿಸೋದು ಜೇನಿನಂತಿರೋ ಬಾನೆತ್ತರದ "ಕನ್ನಡ"ವನ್ನೇ

— ಇದು ನನ್ನ ಆರಾಧ್ಯ ಕವಿಯಾದ ರಾಷ್ಟ್ರ ಕವಿ 'ಕುವೆಂಪು' ರವರ ಸಾಕ್ಷಿಯಾಗಿ ಸತ್ಯವು.

 

                   ----ಚಿನ್ಮಯಿ

Monday, October 2, 2023

ಕಲಾವಿದರ ಪ್ರೀತಿ

ನೀ ನಮ್ಮ್ ಒಲವಿನ ಧಾರಾವಾಹಿಯ ಮಧುರ ಸಂಚಿಕೆ.

ಮರಳಿ ರಂಜಿಸೆಂಬುದು ಹೃದಯದಭಿಮಾನಿಯ ಕೋರಿಕೆ...!


ಓ ಸಖಿಯೇ ಮರೆತೆಯ,

ಸಿನಿ ಪರದೆಯಿಂದೆ ನಮ್ಮೆರಡು ಹೃದಯಗಳ ಅನುರಾಗದ ಸಂಗಮ.

ಪ್ರೇಮ ಪರದೆಯ ನೀ ಒಮ್ಮೆ ಸರಿಸಿದರೆ ಕಾಣುವ ನೋಟ ವಿಹಂಗಮ.


ಓ ಪ್ರೇಯಸಿ ಕೇಳೇ ನೀ,

ಒಲುಮೆಯ ರಂಗಭೂಮಿಯಲ್ಲೇ ಅವಿಸ್ಮರಣೀಯ ಪ್ರಣಯ ಪಕ್ಷಿಗಳು ನಾವು.

ನಿನ್ನ ಹಿಂತಿರುಗುವಿಕೆಯಿಂದಲೇ ವಾಸಿಯಾಗುವುದೀ ವಿರಹ ನೋವು.


ನೀ ನಮ್ಮ್ ಒಲವಿನ ಧಾರಾವಾಹಿಯ ಮಧುರ ಸಂಚಿಕೆ.

ಮರಳಿ ರಂಜಿಸೆಂಬುದು ಹೃದಯದಭಿಮಾನಿಯ ಕೋರಿಕೆ...!


      ----ಚಿನ್ಮಯಿ

Sunday, October 1, 2023

ಹೃದಯದ ಯೋಚನೆ

ಯಾವಾಗಲೂ ಮನಸ್ಸಿನಿಂದಲೇ ಯೋಚಿಸಬೇಕೆಂದಿಲ್ಲ,

ಕೆಲವೊಮ್ಮೆ ಹೃದಯದಿಂದ ಯೋಚಿಸುವುದೇ ಸರಿಯಾಗಿರುತ್ತದೆ.


ಸಂಬಂಧಗಳಲ್ಲಿ 'ಅಹಂ' ನಶಿಸಲು ಹೃದಯದ ಯೋಚನೆಯೇ ಸೂಕ್ತ...


       ----ಚಿನ್ಮಯಿ

Sunday, August 27, 2023

ದೀಪು— ನನ್ನ ಬಾಳಿನ ದೀಪ

ನಿನ್ನ ಕಾಡಿಗೆ ಕಪ್ಪು ಕಮಲದ ಕಾಂತಿ,

ಅದ ಕಾಣೋ ನನಗೆ ದೊರೆತಿದೆ ಶಾಂತಿ.

ನಿನ್ನಯ ನಿಷ್ಕಲ್ಮಶ ಹೃದಯದ ಒಡೆಯ—

ನಾನಾಗುತ ಸುರಿಸುವೆ ಪ್ರೇಮದ ಮಳೆಯ...

ಕೇಳೇ ಓ ನನ್ನ ಜೀವ.

ನೀನೇ ಈ ಹಾಡ ಭಾವ.


ಅದೆಷ್ಟು ಪುಣ್ಯ ಮಾಡಿದೆಯೋ ನನ್ನಯ ಕೈ ಬೆರಳು,

ಸ್ಪರ್ಶ ಸುಖ ಅನುಭವಿಸುವಾಗ ನಿನ್ನಯ ಮುಂಗುರುಳು.

ಚಂದ್ರನಂತೊಳೆವ ಮುಗುಳುನಗೆಯ ಆ ಸಿಹಿ ಕೆನ್ನೆಗೆ—

ಸೋತು ಶರಣಾಗಿ ಒಲವ ಸಹಿ ಹಾಕುವಾಸೆ ಈ ತುಂಟ ತುಟಿಗೆ...


ನಿನ್ನ ಮೈಯ ಹಚ್ಚೆಗಳಷ್ಟು ಪುಣ್ಯ ನನಗೆ ಸಾಕು,

ಆ ಬಿಸಿಯುಸಿರಲ್ಲಿಯೇ ಜೀವಿಸಲು ನನ್ನನ್ನು ನೂಕು!

ನಾಟ್ಯ ಸರಸ್ವತಿಯ ಒಲಿಸಿರುವ ನಾಟ್ಯಮಯೂರಿಯೇ—

ನನ್ನೆದೆಯ ಪ್ರೇಮ ಕವನವಿದೋ ಸ್ವೀಕರಿಸಿ ಕುಣಿಯೇ...!


ನಿನ್ನ ಸೆರಗ ದಾರಿ ಹಿಂಬಾಲಿಸೋ ಅಭ್ಯಾಸ,

ಇನ್ನೂ ಮುಂದೆ ನನಗೆ ಖಾಯಂ ಹವ್ಯಾಸ.

ಬಾಳ ದೀಪವೇ ನೀ ಪ್ರಕಾಶಿಸು ಸಾಕಷ್ಟೇ—

ನಿನಗಾಗಿಯೇ ಮುಡಿಪೆನ್ನ ಪ್ರೇಮ ನಿಷ್ಠೆ...

ಕೇಳೇ ಓ ನನ್ನ ಜಾನು.

ನೀನೇ ಈ ಬಾಳ ಜೇನು.


       ----ಚಿನ್ಮಯಿ

Monday, August 21, 2023

ನನ್ನವಳ ಪ್ರೇಮ ಬಾಣ

ಎನ್ನೆದೆಗೆ ಕಣ್ಣೆಂಬ ಬಿಲ್ಲಿಂದ ಪ್ರೀತಿಯ ಬಾಣವ ಹಾಕಿದವಳು ನೀನೆ...

ಆ ಬಾಣದ ನಿವಾಸ ಇನ್ನೆಂದೂ ಎನ್ನೆದೆಯೇ, ಆ ನೋವು ಸಿಹಿ ಜೇನೆ...

💘

                   ----ಚಿನ್ಮಯಿ

Thursday, August 17, 2023

ವಿಧಿಯಾಟ

ಬಾಳ ಗೆಳತಿಯೊಡನೆ ಸಪ್ತಸಾಗರದೊಳು ಕೈಯಿಡಿದು ಈಜುವಾಗ ರಕ್ಕಸ ಸುನಾಮಿಯೊಂದಪ್ಪಳಿಸಲು ಒಬ್ಬರಿಗೊಬ್ಬರು ಕಾಣಿಸಲಾಗದೆ ಸೇರಲಾಗದೆ ಇಬ್ಬರ ದಿಕ್ಕೇ ಬೇರೆ ಬೇರೆ ಆಯಿತು— ಬಹುಶಃ ವಿಧಿಯಾಟದನುಸಾರ ಅವಳ ತೀರ ಹಾಗೂ ನನ್ನ ತೀರ ಬೇರೆ ಬೇರೆ ಇರಬಹುದು...

                  ----ಚಿನ್ಮಯಿ

ತಿಳುವಳಿಕೆ

ತಿಳುವಳಿಕೆಯು ಮನಸ್ಸಿನಲ್ಲಷ್ಟೇ ಅಲ್ಲದೇ ಹೃದಯದಲ್ಲೂ ಹಾಗೂ ಮಾತಿನಲ್ಲೂ ನೆಲೆಸಿರಬೇಕು.

              ----ಚಿನ್ಮಯಿ

Saturday, July 29, 2023

ಏಕತೆ, ಐಕ್ಯತೆ, ಸಮಾನತೆ.

ಏಕತೆ, ಐಕ್ಯತೆ, ಸಮಾನತೆ

ಕುರಿತಾಗಿ ಮಾತನಾಡುವ ಯೋಗ್ಯತೆ—

ಮೊದಲು ಸಂಪಾದನೆ ಮಾಡಬೇಕು 

ಹಾಗೂ 

ಸಂಪಾದನೆ ಮಾಡಕ್ಕೆ ಜೀವನದಲ್ಲಿ ಕಾರ್ಯರೂಪವಾಗಿ ಅದನ್ನೇ ಅಳವಡಿಸಿಕೊಳ್ಳಬೇಕು.


      ----ಚಿನ್ಮಯಿ

Sunday, July 23, 2023

CHANGE lies Within

Don't wait for a CHANGE to happen. Instead CHANGE YOURSELF, then automatically CHANGE happens.

                ----Chinmayi

Saturday, July 22, 2023

"ಕ" ಅಕ್ಷರದ ಕಲಿಯುಗ ಯುದ್ಧ. ಕಲಿ VS ಕಲ್ಕಿ. The battle of "K" in Kaliyuga. Kali VS Kalki.

ಚಿತ್ರಕ್ಕೆ ಪದ್ಯ- ೭೩


ಒಂದೇ ಒಂದು ವ್ಯತ್ಯಾಸ ಕಲಿ ಹಾಗೂ ಕಲ್ಕಿ ನಡುವಲ್ಲೇನೆಂದರೆ "ಕ" ಅಕ್ಷರ, ಅದರರ್ಥ ಕರುಣೆ.

               ----ಚಿನ್ಮಯಿ


The only difference between Kali and Kalki is the letter "K", which stands for Kindness.

              ----Chinmayi

Friday, July 21, 2023

ತ್ರಿಪದಿ- ೨

ಮೋರಿಯೊಳ ಮಳೆ ಮಿಂದರೂ ಶುಚಿ ಆಪುದಿಲ್ಲ.

ಸೇರಬೇಕು ಆತ್ಮದೊಳು ಪರಮಾತ್ಮನ ಸದ್ಭಾವನೆ—

ಅರಿವಿನ ಶುಚಿಯ ಉಗಮಕ್ಕೆ ಚಿನ್ಮಯಿ.


"ಭಾವಾರ್ಥ:"

ಮೋರಿಯೊಳಗೆ ಅದೆಷ್ಟೇ ಮಳೆ ನೀರು ಸೇರಿದರೂ ಮೇಲ್ನೋಟಕ್ಕೆ ಶುಚಿ ಕಾಣುವುದೇ ಹೊರತು ಆಳದಲ್ಲಿ ಕೊಳಕು ಆಗೆಯೇ ಕೊಳೆತು ನಾರುತ್ತಿರುತ್ತದೆ ಹಾಗೂ ತನ್ನ ಸೇರೋ ಮಳೆ ನೀರನ್ನು ಕೊಳಕು ಮಾಡುತ್ತದೆ. ಆಳದಿಂದ ಶುಚಿಯಾದಾಗಲೇ ಶುದ್ಧ ನೀರಿನ ರೂಪ ಪಡೆಯುವುದು.

ಹಾಗೆಯೇ, ಮನುಷ್ಯರ ವಿಚಾರದಲ್ಲೂ ಸಹ ಮೇಲ್ನೋಟಕ್ಕೆ ಆಡಂಬರ ಪೂಜೆ-ಪನಸ್ಕಾರಗಳು ಅದೆಷ್ಟೇ ಮಾಡಿದರೂ ಸಹ ಪರಮಾತ್ಮನು ಒಲಿಯಲ್ಲ, ಅಂಧಕಾರವ ದೂಡಿ ಪರಿಶುದ್ಧತೆ ಹಾಗೂ ಸದ್ಭಾವದ ಅರಿವಿಂದ ಆತ್ಮದಲ್ಲಿ ನೆಲೆಸಿಹ ಪರಮಾತ್ಮನನ್ನು ಒಲಿಸಿದರೇ ಭಕ್ತಿಯ ಉಗಮದಿಂದ ಪರಮಾತ್ಮನ ಸಾಕ್ಷಾತ್ಕಾರವಾಗುವುದು.


              ----ಚಿನ್ಮಯಿ

Best way to reach GOD.!?

Worshipping through pure mind and heart is the best way to access the best portal of life called GOD.

               ----Chinmayi

Wednesday, July 19, 2023

ಮನಸ್ಸು -> ನಾಲಗೆ <- ಹೃದಯ

ಚಿತ್ರಕ್ಕೆ ಪದ್ಯ- ೭೨


ಮನಸ್ಸು ಹಾಗೂ ಹೃದಯದ ಮಧ್ಯದಲ್ಲಿ ನಾಲಗೆಯನ್ನಿರಿಸಿ ಆ ಎರಡಕ್ಕೂ ನಾಲಗೆಯನ್ನ ಜೋಡಣೆ ಮಾಡಿರುವುದು ಆ ಬ್ರಹ್ಮನ ದೇಹ ವಿನ್ಯಾಸದ ಚಮತ್ಕಾರವೇ ಸರಿ.

ಏಕೆಂದರೆ,

ಮಾತನಾಡುವಾಗ ಮನಸ್ಸು-ಹೃದಯ ಎರಡರ ಹಿಡಿತವಿರಬೇಕು, ಸಮತೋಲನವಿರಬೇಕು— ಆಗಲೇ ಒಳ್ಳೆ ನಡತೆ ಪ್ರಾಪ್ತಿಯಾಗುತ್ತದೆ...


              ----ಚಿನ್ಮಯಿ

Sunday, July 16, 2023

ಆಷಾಢ ಪ್ರೇಮ

ನವ ದಂಪತಿಗಳ

ನವ ಜೀವನದ

ವಿರಹ ಯಾತನೆ

ಅದುವೇ ಆಷಾಢ ಪ್ರೇಮ.

ಬಳಿ ಸೇರಲಾಗದೆ

ಕಾಯೋ ತವಕದಿ

ಸನಿಹ ಭಾವನೆ

ಎದೆಯೊಳಗೆ ಉಗಮ.


ಇರುವೆ ಬಳಿಯಲಿ

ಸಿಹಿಯನ್ನಿರಿಸಿ

ತಾಕದಂಗೆ ತಡೆಯುವ

ಅಪರಾಧ ಬಲು ಘೋರ.

ಹೀಗೆಯೇ ಆಗಿರಲು

ನವಜೋಡಿ ಪರಿಸ್ಥಿತಿ

ಹೇಗೆ ತಾನೆ ಇಳಿಸಲು

ಸಾಧ್ಯವು ಎದೆಯ ಭಾರ...!


ಕುಸುಮದಲ್ಲಡಗಿಹ

ಸವಿಯನ್ನೀರುತ

ಮಕರಂದ ತಯಾರಿಗೆ

ಜೇನು ಹುಳುವಿಗೇರಪ್ಪಣೆ...?

ಹಾಗೆಯೇ ಸಖ-ಸಖಿಯ

ಒಲವ ಸಂಗಮಕ್ಕೆ

ಅಡಚಣೆಯ ಕುರಿತು

ಹೃದಯ ಬೇಡಿದೆ ಸ್ಪಷ್ಟನೆ...!


ಎಲ್ಲೆ ಮೀರಿದ ಚಳಿಗೆ

ನಲುಗಿ ಹೋಗುತ

ವಿಯೋಗ ಸವಿಯುತ

ಒಂದು ಮಾಸವು ಕಳೆದಾಯ್ತು.

ಪ್ರೇಯಸಿ ಹಾದಿಯ

ಎದುರು ನೋಡುತ

ಮುಗುಳುನಗುತ 

ಎದೆ ಕುಣಿಯಲು ನೋವೇ ಮರೆಯಾಯ್ತು..


      ----ಚಿನ್ಮಯಿ

Friday, July 7, 2023

ಬಾಳಸಾಥಿಯೇ...

ನಾ ಮಾಡಿದ ಯಾವ ಜನ್ಮದ ಪುಣ್ಯ—

ಈ ಜನ್ಮ ನಿನ್ನ ಪಡೆದ ನಾನೇ ಧನ್ಯ.

         ----ಚಿನ್ಮಯಿ

Thursday, July 6, 2023

ತ್ರಿದೇವಿ

ಚಿತ್ರಕ್ಕೆ ಪದ್ಯ- ೭೧

ಹೇ ಮಾತೆ ಜಗತ್ಜನನಿ ನಿನ್ನಿಂದಲೇ ಎನಗೆ ಆರೋಗ್ಯ-ಶಕ್ತಿಯ ಭಿಕ್ಷೆಯು. ಇದೋ ನಿನ್ನ ಪುತ್ರನ ನಮನಗಳು...

ಹೇ ಮಾತೆ ಮಹಾಲಕ್ಷ್ಮಿ ನಿನ್ನಿಂದಲೇ ಎನಗೆ ಹಣ-ಐಶ್ವರ್ಯದ ಭಿಕ್ಷೆಯು. ಇದೋ ನಿನ್ನ ಪುತ್ರನ ನಮನಗಳು...

ಹೇ ಮಾತೆ ಸರಸ್ವತಿ ನಿನ್ನಿಂದಲೇ ಎನಗೆ ವಿದ್ಯೆ-ಬುದ್ಧಿಯ ಭಿಕ್ಷೆಯು. ಇದೋ ನಿನ್ನ ಪುತ್ರನ ನಮನಗಳು...


ತ್ರಿದೇವಿಗಳಲ್ಲಿ ವಾಣಿಯೇ ಎನ್ನ ಪ್ರೀತಿಯ ಮಾತೇ. ಇದೋ ನಿನ್ನ ಪ್ರೀತಿಯ ಪುತ್ರನ ಶತಕೋಟಿ ನಮನಗಳು...


                 ----ಚಿನ್ಮಯಿ

Wednesday, July 5, 2023

ತ್ರಿದೇವಿ-ತ್ರಿಮೂರ್ತಿಗಳಲ್ಲಿ ಆದಿಶಕ್ತಿ ಹಾಗೂ ಆದಿಯೋಗಿಯೇ ಶ್ರೇಷ್ಠರು

ಚಿತ್ರಕ್ಕೆ ಪದ್ಯ- ೭೦

ಈ ಜೀವಕ್ಕೆ—

ಆರೋಗ್ಯ-ಶಕ್ತಿಯಿದ್ದರೆ ಮಾತ್ರ,

ವಿದ್ಯೆ-ಬುದ್ಧಿಯು ಹಾಗೂ ಹಣ-ಐಶ್ವರ್ಯವು ಉಪಯುಕ್ತ...


ಆದ್ದರಿಂದಲೇ, 

ಆದಿಶಕ್ತಿಯು ಆಕೆಯ ಮೂಲ ಮಹಾದೇವನು ಮೊದಲು ಒಲಿಯಬೇಕು,

ತದನಂತರ ತಂತಾನೆ ವಾಣಿಯು ಆಕೆಯ ಮೂಲ ವಿರಿಂಚನು ಹಾಗೂ ಮಹಾಲಕ್ಷ್ಮಿಯು ಆಕೆಯ ಮೂಲ ಅಚ್ಯುತನು ಒಲಿಯುವರು...


      ----ಚಿನ್ಮಯಿ

ಗುರುದೇವೋ ನಮಃ

ಇದೀಗ ಜನಿಸಿರುವ ಹಸುಳೆಯಿಂದಿಡಿದು, 

ಇನ್ನೇನು ಸಾಯುತ್ತಿರುವ-ಸತ್ತಿರುವ ಮನುಷ್ಯರವರೆಗೂ—

ಪಂಚಭೂತಗಳಿಂದಿಡಿದು,

ಸಕಲಜೀವರಾಶಿಗಳವರೆಗೂ—


ಎಲ್ಲರೂ ಎನಗೆ ಗುರುವೇ.

ಎಲ್ಲರಿಗೂ ತಲೆ ಬಾಗಿರುವೇ.

ಎಲ್ಲರಿಗೂ ನಮಿಸಿರುವೇ.

ಎಲ್ಲರೊಳಗೊಂದಾಗಿರುವೇ...


      ----ಚಿನ್ಮಯಿ

Tuesday, July 4, 2023

ಅರುಣರಾಗದ ಅನುರಾಗ

ಚಿತ್ರಕ್ಕೆ ಪದ್ಯ- ೬೯

ಗೋಧೂಳಿ ವೇಳೆಯಲಿ ತಂಗಾಳಿ ಬೀಸುತಲಿ,

ಬಾನಿಗೆ ಭಾನು ಉಡಿಸುವಾಗ ಕೇಸರಿ—

ಒಲವ ಮಂಟಪದಡಿ ನಮ್ಮಿಬ್ಬರ ಮಿಲನ.

ನದಿಯೊಳ ಸವಿದೆವು ಆ ಸುಂದರ ಕ್ಷಣ.

ಮೇಘಗಳು ಗದರಿ ತಾ ಬಿಕ್ಕಿ ಬಿಕ್ಕಿ ಅಳುವಾಗ,

ಇಳೆಯು ಆಗಸ ತಾಕಿ ಉಡುವಂತೆ ಹಸಿರ—

ನಮ್ಮಿಬ್ಬರ ಸಿಹಿ ಕಾದಾಟದ ಸವಿ ಸಮಯ.

ಅದರಿಂದಿರೋ ಮಧುರ ಸುಮಧುರ ಪ್ರಣಯ.

ಶಶಿಯ ಆಗಮನ ಬೇಡವೆನಿಸುವಷ್ಟು,

ಒಳ ಮನಸ್ಸನ್ನು ಹೊಕ್ಕಿರಲು ವಾತಾವರಣ—

ಈಗೆಯೇ ಸದಾ ಇದ್ದುಬಿಟ್ಟರೇ ಅದೆಷ್ಟು ಸಂತಸ!

ಅದಾಗದೆಂದಿಗೂ ಜೊತೆ ಆವರಿಸಿರಲು ನೀರಸ...!


        ----ಚಿನ್ಮಯಿ

Thursday, June 29, 2023

ಅಪ್ಪುಗೆ...

ತಣ್ಣನೆಯ ಗಾಳಿಯೊಡನೆ ಆ ರವಿಯ ಬಿಸಿ ಶಾಖ ಸೇರಿ ಸುಖದ ಭಾಸವಾದಂತೆಯೇ—

ಈ ವಿರಹದ ಬೇಗುದಿಯಲಿ ಬೇಯುತ್ತಿರುವ ಹೃದಯಕ್ಕೆ ಆಕೆಯ ಸನಿಹದ ಅಪ್ಪುಗೆ...


      ----ಚಿನ್ಮಯಿ 

Tuesday, June 20, 2023

Complete Human

Sanathana Dharma teaches us everything for living a life, but one must follow these below three steps to become a "Complete Human"—


As the first step, the one who decodes it.

As the second step, the one who learns from it.

As the third and final step which is most important, the one who follows and practices it in life.


      ----Chinmayi

ಆತ್ಮ ತೃಪ್ತಿ

ತನು-ಮನ-ಹೃದಯ ತೃಪ್ತಿಗಿಂತ ಆತ್ಮ ತೃಪ್ತಿ ಬಹಳ ಮುಖ್ಯ.

             ----ಚಿನ್ಮಯಿ

Take a STAND. Be a CHANGE.

Inject kindness and good thinking inside everyone's mind by helping others or being there for them in their tough times not only who you know even for unknown people also,

then automatically everyone starts—

believing in Humans,

believing in Humanity,

believing in Good and

most importantly believing in God.

         ----Chinmayi

Monday, June 19, 2023

ನಿಮಿತ್ತ

ಚಿತ್ರಕ್ಕೆ ಪದ್ಯ: ೬೮

ಅರ್ಜುನನಂತೆ ಧರ್ಮವಂತನಾದರೇ—


ಮುಂದೆ ಶ್ರೀ ಕೃಷ್ಣ (ಮಹಾವಿಷ್ಣು) ಇದ್ದು,

ಹಿಂದೆ ಆಂಜನೇಯ (ಮಹಾದೇವ) ಇದ್ದು ಹಾಗೂ

ಬ್ರಹ್ಮಾಸ್ತ್ರ (ಬ್ರಹ್ಮದೇವನ ವರದಾನವಾದ ಅಸ್ತ್ರ) ಸಹಾಯದಿಂದ- 

ತ್ರಿಮೂರ್ತಿಗಳ ಆಶೀರ್ವಾದದಿಂದ  "ನಿಮಿತ್ತ"ರಾಗಿ ಧರ್ಮಯುದ್ಧದಲ್ಲಿ ಗೆಲ್ಲುವುದು ಖಚಿತ...


      ----ಚಿನ್ಮಯಿ

Pressure

Things are broken from various External Pressure.

Mind and Heart are broken from our own Internal Pressure.

         ----Chinmayi

Sunday, June 18, 2023

ಸರ್ವ ಶ್ರೇಷ್ಠ ವ್ಯಕ್ತಿತ್ವ

ತನ್ನ ಬಳಿ ಏನೂ ಇಲ್ಲದಿದ್ದರೂ ಅಥವಾ ಸ್ವಲ್ಪವೇ ಇದ್ದರೂ, ಕೊಂಚವು ಯೋಚಿಸದೇ-ಏನನ್ನೂ ಅಪೇಕ್ಷಿಸದೇ ದಾನ ಮಾಡುವವ—

ತನಗೆಷ್ಟೇ ಕಷ್ಟ ಬಂದರೂ, ಅದೇನೇ ಆದರೂ ದೇವರನ್ನು ನಂಬುವವ—


ಈ ಮೇಲಿನೆರಡು ಗುಣವುಳ್ಳವರು ಸರ್ವ ಶ್ರೇಷ್ಠರು ಅಖಂಡ ವಿಶ್ವಗಳಲ್ಲಿಯೂ...


    ----ಚಿನ್ಮಯಿ

Sunday, June 11, 2023

ತಂದೆ

ತಾಯಿ ಹೆತ್ತರು, ತಂದೆಯ ಕಂಗಳಲಿ ಆನಂದಭಾಷ್ಪ.

ಪುಟ್ಟ ಕೈ ಕಾಲುಗಳ ಮೆಲ್ಲನೆ ತಾಕುತ ಅನುಭವಿಸುವವ- ಅಪ್ಪ.


ಎತ್ತಾಡಿಸಿ, ಕೈ ಹಿಡಿದು ನಡೆಸಿ, ಹೆಗಲೇರಿಸಿ ತೋರಿದರು ಪ್ರಪಂಚ-

ಅದೇನೇ ಕಂಡರು ಅವರ ಆ ನಗುವೊಂದೇ ಸುಂದರ ಪ್ರಪಂಚ.


ತುಂಬು ಹೃದಯದಿ ಪ್ರೇಮ ಧಾರೆಯೆರೆದು ಕೋಪದಿಂದಲೇ ಪ್ರೀತಿಸೋ ಏಕೈಕ ವ್ಯಕ್ತಿ.

ಬೇಕು ಬೇಡವ ತಿಳಿದು ತನಗೆ ಕಷ್ಟವಾದರೂ ಇಷ್ಟದಿ ಕೊಡಿಸೋ ಮಹಾನ್ ಶಕ್ತಿ.


ಮನೆಯನ್ನು ಒಬ್ಬರೇ ಮುನ್ನಡೆಸಿ ತನಗೆಷ್ಟೇ ದುಃಖವಿದ್ದರೂ ತೋರದ ಜೀವ.

ಮನೆಯವರ ಸುಖ ಸಂತೋಷವಷ್ಟೇ ಅವರ ಬಾಳಿನ ಮುಖ್ಯ ಧ್ಯೇಯ.


ಬಾಳಿನುದ್ದಕ್ಕೂ ಬೆವರಿಳಿಸಿ ದುಡಿದ ಅಪ್ಪನಿಗೇ ಸರಿಸಾಟಿ ಯಾರಿರಲು ಸಾಧ್ಯ!

ಆ ಪವಿತ್ರ ಬೆವರಿಂದಲೇ ಈ ದೇಹ ಬೆಳೆದು ಜೀವದ ಉಸಿರಾಗಿರುವುದು ಪರಮ ಸತ್ಯ.


ತಾಯಿ ಮಕ್ಕಳಿಗೆ ಗುರುವಾದರೇ ತಂದೆಯೇ ಕುಟುಂಬಕ್ಕೆ ಗುರುವು.

ತಾಯಿ ಆತ್ಮವಾದರೇ ತಂದೆಯೇ ಆತ್ಮದಲ್ಲಡಗಿಹ ಪರಮಾತ್ಮನು.


         ----ಚಿನ್ಮಯಿ

Monday, June 5, 2023

ಹೃದಯ-ಮನಸ್ಸಿನ ಕದನ

ಚಿತ್ರಕ್ಕೆ ಪದ್ಯ- ೬೭

ಹೃದಯ ಮೈಮರೆತಾಗ

ಮನಸ್ಸು ಮೌನವ್ರತ.

ಹೃದಯ ಮೋಸ ಹೋದಾಗ

ಮನಸ್ಸು ಜಾಗೃತ.


     ----ಚಿನ್ಮಯಿ

Thursday, June 1, 2023

ಅನುಮಾನದ ದ್ವಂದ್ವತೆ...

ಅನುಮಾನದ ಬೆಳಕಿನಲ್ಲಿ

ಸತ್ಯದ ನೆರಳು—

ಪ್ರೀತಿ-ನಂಬಿಕೆಗಳ ಗೋರಿಯೊಳಗೆ...


ಅನುಮಾನದ ಬೆಳಕಿನಲ್ಲಿ

ಪ್ರೀತಿ-ನಂಬಿಕೆಯು—

ಸುಳ್ಳಿನ ನೆರಳಿನ ಗೋರಿಯೊಳಗೆ...


     ----ಚಿನ್ಮಯಿ

Tuesday, May 30, 2023

ನಮ್ಮೊಳಗಿನ ಲಂಕಾ ಕದನ

ನಮ್ಮೊಳಗಿಹ ರಾವಣನನ್ನು,

ನಮ್ಮೊಳಗಿಹ ರಾಮನಿಂದ ಸೋಲಿಸಲು—

ಆತ್ಮದಲ್ಲಿ ನೆಲೆಸಿಹ ಶ್ರೀ ರಾಮನನ್ನೇ ಒಲಿಸಬೇಕು..

            ----ಚಿನ್ಮಯಿ

ನಮ್ಮೊಳಗಿನ ಕುರುಕ್ಷೇತ್ರ

ನಮ್ಮೊಳಗಿಹ ಕೌರವರನ್ನು,

ನಮ್ಮೊಳಗಿಹ ಪಾಂಡವರಿಂದ ಸೋಲಿಸಲು—

ಆತ್ಮದಲ್ಲಿ ನೆಲೆಸಿಹ ಶ್ರೀ ಕೃಷ್ಣನನ್ನು ಒಲಿಸಬೇಕು..

          ----ಚಿನ್ಮಯಿ

ಭಗವದ್ಗೀತೆ

ವಿಶ್ವ ಗುರು, ವಿಶ್ವ ಮಾನವ, ಭಗವಂತ 

ಶ್ರೀ ಕೃಷ್ಣನ ಉಪದೇಶದಿಂದ—

ಬದುಕಲು ದಾರಿ ದೀಪ.

ಬದುಕಿಗೆ ನಂದಾದೀಪ.


     ----ಚಿನ್ಮಯಿ

Monday, May 29, 2023

ಒಲವಿನ ಸ್ನೇಹ

ನೀಗಿಸು ಹೃದಯದ ಹಸಿವಾ,

ಕರುಣಿಸಿ ನಿರ್ವ್ಯಾಜ ಪ್ರೀತಿ..

ಗಾಳಿಯು ಮರ-ಗಿಡ ಸೇರುತ,

ತಕದಿಮಿ ಕುಣಿಸೋ ರೀತಿ..


ಅಳಿಸು ಬಾಳಿನೆಲ್ಲ ಕಷ್ಟವಾ,

ಪರಿಚಯಿಸಿ ಮುಗುಳುನಗು..

ನಗಿಸಿ ನಗುವುದರಿಂದಲೇ, 

ಅಲ್ಲವೇ ಸುಖಮಯ ಬಾಳು..


ಕನಸು ನನಸಿಗೂ ಪ್ರೇಮವಾ,

ಧಾರೆಯೆರೆಸಿಕೊಳ್ಳೋ ಮೋಹ..

ಮೋಹದ ಸೆರೆಯಲಿ ತನು,

ಮನವೂ ಬೆಸೆದರೆ ಸ್ನೇಹ..


    ----ಹರೀಶ್ರಘು💛❤️

Saturday, May 13, 2023

ಹೃದಯದ ನಗು

ಚಿತ್ರಕ್ಕೆ ಪದ್ಯ- ೬೬


ಹೃದಯ ನಕ್ಕದಿದ್ದರೂ ಮೋರೆ ನಗುವುದು, 

ಆದರೇ—

ಹೃದಯ ನಕ್ಕರೆ ಮೋರೆ ಕುಣಿವುದು.


ಹೃದಯದಿಂದ ನಗುವವನೇ ಜೀವನವ 'ಸುಖ' ಎಂದರಿತವನು..


   ----ಚಿನ್ಮಯಿ

Wednesday, March 22, 2023

ಯುಗಾದಿ

ಅಭ್ಯಂಜನ ಸ್ನಾನದಿಂಡಿದು ತಲ್ಲೀನ ದೇವರ ಪೂಜೆಯವರೆಗೂ ನವ ಚೈತನ್ಯದುಲ್ಲಾಸದ‌ ಹಬ್ಬದಾಚರಣೆಯಂತೆಯೇ ಯುಗ-ಯುಗಗಳಿಗೂ ಒಳ ಮನಸ್ಸಿನ ದೈವಿಕ ಭಾವ ಸದಾ ತೆರೆದಿರಲಿ—

ಅದುವೇ "ಒಳರಾಕ್ಷಸನ ಮರಣ, ಅಸುಳೆಯೆಂ ದೈವದ ಜನನಸೂಚಕ ಸಂವತ್ಸರಾರಂಭ ಕಾಲ."


ಜೀವನದ ಎಷ್ಟೋ ದ್ವಂದ್ವತೆಯ ಸಮರವ ಅಂತ್ಯಗೊಳಿಸಿ ಸಮಚಿತ್ತ ಭಾವದೊಳು ಜೀವಿಸಲೊಂದವಕಾಶ—

ಅದುವೇ "ನವ ಯುಗದ ಆದಿ- ಚೈತ್ರಮಾಸದ ಪ್ರಾರಂಭ ಕಾಲ."


'ಸರ್ವೇ ಜನಾಃ ಸುಖಿನೋ ಭವಂತು.'

'ಸರ್ವ ಜೀವರಾಶಿ ಸುಖಿನೋ ಭವಂತು.'


ಸರ್ವರಿಗೂ ಯುಗಾದಿಯ ಶುಭಾಶಯಗಳು. ಹೊಸ ವರ್ಷದ ಶುಭಾಶಯಗಳು.


       ----ಚಿನ್ಮಯಿ

'ರಾಜ ರತ್ನ-ಯುವರತ್ನ-ಕರ್ನಾಟಕ ರತ್ನ' "ಡಾ|| ಪುನೀತ್ ರಾಜ್‍ಕುಮಾರ್"

ಚಿತ್ರಕ್ಕೆ ಪದ್ಯ- ೬೫


ನಾ ಬರೆಯಲು ಹೋದರೆ ನಿಮ್ಮ ಕುರಿತು,

ಕೈ ನಡುಕ ಶುರುವಾಗಿ ಲೇಖನಿ ಜಾರಿತು.


ಒಂಥರ ಸುಮಧುರ ಭಯದಿ ಎದೆಬಡಿತ ಏರಿದೆ,

ಆ ನಗು ಮುಖವು ಸದಾ ಒಳ-ಒಳಗೆ ಕಾಡಿದೆ.

ನೀವ್ ಇಲ್ಲದಿದ್ದರೂ ಇದ್ದೀರಿ ಅನ್ನೋ ಭಾವನೆ ಒಲವು,

ಅತೀವ ದುಃಖದಲ್ಲೂ ನಗುವುದ ಹೇಳಿಕೊಟ್ಟ ನೀವೇ ಗುರುವು.


ಬದುಕ ಅನುಭವಿಸಲು, ಜೀವಿಸಲು, ಸತ್ತ ಮೇಲೂ ಬದುಕಲು ತೋರಿದ ಮಹಾನ್ ವ್ಯಕ್ತಿತ್ವದ ವ್ಯಕ್ತಿ—

ಎಷ್ಟೋ ಆತ್ಮದೊಳು ಪರಮಾತ್ಮನಾಗಿ ಸದಾ ಜೀವಿಸುತ್ತಿರುವ ಚಿರಂಜೀವಿಯಂತ ಚೇತನ ಶಕ್ತಿ—

ನೀವೇ ಅದು ನೀವೇ ಎಂದೆಂದಿಗೂ ನೀವೇ.


ನಾ ಬರೆಯಲು ಹೋದರೆ ನಿಮ್ಮ ಕುರಿತು,

ಕೈ— ತಾ ಕುಣಿದು ಶಾಯಿಯ ಕುಣಿಸಿತು.


      ----ಚಿನ್ಮಯಿ

ಪ್ರೇಮ ಚಾರಣ

ಕೊರಗಿದ ಬಾನಿನಲ್ಲಿ ಮೂಡಿ ಬರಲು ಚಂದಿರ,

ಕದಡಿದ ನೀರಿನಲ್ಲಿ ನಿನ್ನ ಮೊಗವು ಸುಂದರ.

ತಳಮಳ ಏಕೆ ಇನ್ನೂ ನಾನೇ ಇರಲು ಹತ್ತಿರ!!

ಜೊತೆಯಲೇ ಈಜುವ ಬಾರೇ‌ ಒಲವ ಸಾಗರ..


ಮೇಘಗಳ ಅಳುವಿಗೆ ನಕ್ಕು ಕುಣಿದಂಗೆ ಕಾಂತಾರ,

ಬೇಗುದಿಯ ನೀಗಿಸುವೆ ಇಂದೆ ಇನ್ನೇಕೆ ಬೇಸರ!!

ಸಿಹಿಯಾದ ಅಪ್ಪುಗೆಯ ನೀಡೋ ಒಪ್ಪಿಗೆಯ ನಿರ್ಧಾರ—

ಎದೆಭಾವದಿ ಠಸ್ಸೆಯೊತ್ತು- ಎದೆಯೊಳು ಪ್ರೇಮ ಸಂಚಾರ..


ಅಘನಾಶಿನಿ ಒಳಗಿರೆ ಆತ್ಮ ಪರಿಶುದ್ಧತೆ ಸಾಕಾರ,

ಪ್ರೇಮಗಂಗೆ ಜಳಕವೇ ಶುಧ್ಧ ಪ್ರೇಮೋದಯಕ್ಕ್ ಆಧಾರ.

ಕೋಗಿಲೆಯೇ ನಾಚಿಕೊಂಡ ಪ್ರೇಮದುಂಧುಬಿಯ ಝೇಂಕಾರ—

ದಯಮಾಡಿ ನೀ ಕೇಳೊಮ್ಮೆ- ನೀಡೆನ್ನ ಪ್ರೇಮಕ್ಕೆ ಆಕಾರ.!


       ----ಚಿನ್ಮಯಿ

Thursday, February 9, 2023

ಪ್ರೇಮದ ಸವಾರಿ :: ವಿರಹದ ತಯಾರಿ

ಪ್ರೇಮದ ಸವಾರಿ:


ಕಣ್ಣ ರೆಪ್ಪೆಗೂ ನಾಚಿಕೆ ಆಯಿತೇನೋ..

ಕಣ್ಣ ರೆಪ್ಪೆಗೂ ನಾಚಿಕೆ ಆಯಿತೇನೋ....

ನಿನ್ನನ್ನು ಕಂಡ,

ನಿನ್ನನ್ನು ಕಂಡ ಈ ಸಮಯ...

ನಿನ್ನನ್ನು ಕಂಡ....


ವಿರಹದ ತಯಾರಿ:


ಸಣ್ಣ ಹನಿಯೊಂದು ಮೂಡಿದೆ ಕಣ್ಣಲೀಗ..

ಸಣ್ಣ ಹನಿಯೊಂದು ಮೂಡಿದೆ ಕಣ್ಣಲೀಗ....

ನನ್ನದೆ ತಪ್ಪು,

ನನ್ನದೆ ತಪ್ಪು ನೆನೆದಾಗ...

ನನ್ನದೆ ತಪ್ಪು....


       ----ಚಿನ್ಮಯಿ

Thursday, January 26, 2023

ಪಫ್ಸ್ ಗಳ ಕಥೆ

ಯಾರ್ಯಾರೋ—

ಮೈದಾ ಒಳಕ್ಕೆ ಈರುಳ್ಳಿ ಹಾಕ್ಬಿಟ್ರೇ ಅದು "ವೆಜ್ ಪಫ್ಸ್" ಆಗಕ್ಕಿಲ್ಲ,

ಮೈದಾ ಒಳಕ್ಕೆ ಸುಮ್ಕೆ ಮೊಟ್ಟೆ ಹಾಕ್ಬಿಟ್ರೇ ಅದು "ಎಗ್ ಪಫ್ಸ್" ಆಗಕ್ಕಿಲ್ಲ,

ಹಾಗೆಯೇ "ಪನೀರ್ ಪಫ್ಸ್", "ಕ್ಯಾಫ್ಸಿಕಮ್ ಪಫ್ಸ್", "ಚಿಕನ್ ಪಫ್ಸ್" ಇತ್ಯಾದಿಗಳು.


ಕೆಲವೇ ಕೆಲವರು ಮಾತ್ರ—

ಮೈದಾ ಒಳಕ್ಕೆ ಕರೆಕ್ಟ್ ತರ್ಕಾರಿ ಮಿಶ್ರಣದಿಂದ ಒಳ್ಳೇ ಟೇಸ್ಟ್ನ "ವೆಜ್ ಪಫ್ಸ್",

ಮೈದಾ ಒಳಕ್ಕೆ ಮೊಟ್ಟೆ ಹಾಕಿ ಕರೆಕ್ಟ್ ಹಾಗೂ ಒಳ್ಳೇ ಟೇಸ್ಟ್ನ "ಎಗ್ ಪಫ್ಸ್",

ಹಾಗೆಯೇ "ಪನೀರ್ ಪಫ್ಸ್", "ಕ್ಯಾಫ್ಸಿಕಮ್ ಪಫ್ಸ್", "ಚಿಕನ್ ಪಫ್ಸ್" ಇತ್ಯಾದಿಗಳನ್ನ ಮಾಡೋರು ಅಂದ್ರೆ.


      ----ಚಿನ್ಮಯಿ

Sunday, January 22, 2023

ದತ್ತಾತ್ರೇಯ

ಚಿತ್ರಕ್ಕೆ ಪದ್ಯ- ೬೪

ಎನ್ನಪ್ಪನೇ ಹರನು.

ಎನ್ನಮ್ಮಳೇ ಮೋಹಿನಿ.

ಜೀವೋದ್ಭವ ಶಕ್ತಿಯೇ ಬ್ರಹ್ಮನು.


ಇವರಿಬ್ಬರಲ್ಲಿಯೇ ದತ್ತಾತ್ರೇಯ ಕಾಣೋ ಮಹಾನ್ ಭಕ್ತ ನಾನೇ ಧನ್ಯ.


         ----ಚಿನ್ಮಯಿ

Tuesday, January 17, 2023

ಬಾಲ್ಯ

ಚಿತ್ರಕ್ಕೆ ಪದ್ಯ- ೬೩

ಮುಗ್ಧತೆ, ಕೊಂಚ ಜ್ಞಾನ, ಹೆಚ್ಚೆಚ್ಚು ಪ್ರೀತಿ.

ಸ್ನಿಗ್ಧತೆ, ಮುಗುಳುನಗು, ಪರಿಶುದ್ಧ ಕಾಂತಿ.

ತಿಳಿ ನೀರ ಹಾಗೆ ಎದೆಯಾಳದ ನಿಲುವು.

ಎಲ್ಲಾ ಒಂದೇ ಎಂಬ ಕಂಗಳೊಳ ಒಲವು.


ಮರಳಿ ಬೇಕೆನಿಸೋ ಆ  ದಿನಗಳು ಬಲು ಸುಂದರ.

ಅಲ್ಲಿಯೇ ಸದಾಕಾಲ ಜೀವಿಸೋ ಭ್ರಾಂತಿಯೂ ಹಿತಕರ.


      ----ಚಿನ್ಮಯಿ

Saturday, January 7, 2023

ನದಿಯಿಂದ ಜೀವನದ ಪಾಠ

ಚಿತ್ರಕ್ಕೆ ಪದ್ಯ- ೬೨


ನದಿಯು,

ಹುಟ್ಟುವುದು ಎಲ್ಲೋ.

ಹರಿಯುವುದು ಇನ್ನೆಲ್ಲೋ.

ಸಾಯುವುದು ಮತ್ತೆಲ್ಲೋ.


ಹುಟ್ಟಿನಿಂದ ಸಾವಿನವರೆಗು ಸಾವಿರಾರು ಅಡೆತಡೆಗಳ ಲೆಕ್ಕಿಸದೆ ಮುನ್ನುಗ್ಗಿ ಸಾಗುವುದು, ಕೊನೆಗೆ ಸಾಗರ ಸೇರುವುದು.

ಜೀವನವು ಸಾರ್ಥಕವು.


ಸತ್ತ ನಂತರ ಮರಳಿ ಜನಿಸುವುದು ಸಾಗರ-ಮೋಡಗಳ ಮಿಲನದಿ ಸಹಾಯದಿಂದ, ಹನಿಗಳ ತೋರಣದ ಭೂ ಸ್ವರ್ಶದಿಂದ.

ನವ ಜನನದ ಖುಷಿಯು.


ನದಿಯು,

ಮರಳಿ ಹುಟ್ಟುವುದು ಅಲ್ಲಿಯೇ.

ಹರಿಯುವುದು ಅದೇ ಹಳೆ ದಾರಿಯಲ್ಲಿಯೇ (ಆದರೇ, ಈಗ ಹೊಸ ಅಡೆತಡೆಗಳ ಹೆದರಿಸಲು ಕೂಡ ಸಿದ್ದವು).

ಸಾಯುವುದು ಅದೇ ಸಾಗರದಲ್ಲಿಯೇ.


ಇದೊಂದು ಮುಗಿಯದ ಅಧ್ಯಾಯ.

ನಿರಂತರ ಮರುಕಳಿಸುವ ದೈವದ ನಿರ್ಧಾರ.

ನದಿಯ ಜೀವನದಿಂದ ಮನುಷ್ಯರು ಬಹಳಷ್ಟು ಕಲಿಯೋದಿದೆ, ನನಗೆ ಆ ದಿನ ಅರಿವಾಗಿ ಈ ಸಾಲುಗಳ ಬರೆದೆ.


         ----ಚಿನ್ಮಯಿ