Monday, June 10, 2024

ಬದುಕ ಸಂಕೀರ್ಣತೆ... ಬದುಕ ಸಂಪೂರ್ಣತೆ...

ಭವದ ಭಾವವೇ ನಗೆಯು.

ಜಗದ ಸಾರವೇ ಒಲವು.

ಕೂಡಲಿ ಹೃದಯ-ಮನವು.

ದ್ವೇಷ-ಅಸೂಯೆ-ಜಾತಿ—

ಸಂದಿಗ್ಧತೆಯ ಸಾರಥಿ.

ಬೆಳಗಲಿ ಪ್ರೇಮ ಜ್ಯೋತಿ.


ಇರುಳ ಮೌನ ಬಹಳ..

ಬೆಳಕ ಮಾತು ಸರಳ.

ಸಾಗೋ ಕಾಲ ವಿರಳ.

ನಗಲು ಕಾರಣ ಬೇಕೆ?

ತುಟಿಯ ಹೊಳಪು ಸಾಕೆ?

ನಲಿಯಲಿ ಮೊಗದ ರೇಖೆ.


         ----ಚಿನ್ಮಯಿ

No comments:

Post a Comment