Sunday, June 30, 2024

ನಿಸರ್ಗದ ಪ್ರೇಮ ಪ್ರಸಂಗ

ಕೊಳದ ಪ್ರಿಯಕರ ಮಳೆ.

ಗಾಳಿಯ ಸ್ನೇಹಿತ ಮಳೆ.

ಮಳೆಯ ಸ್ಪರ್ಶವೇ—

ಕೊಳದ ಉಸಿರು.

ಗಾಳಿಯ ನಸುನಗೆ.


ರೆಂಬೆ-ಕೊಂಬೆಗಳ ಸಡಗರ.

ಚಿಗುರೆಲೆಗಳ ಹರ್ಷೋದ್ಗಾರ.

ಪ್ರೀತಿಯು ಮಾಗಲು—

ಮರದ ಪುನಃ ಜನನ.

ಮಣ್ಣಲಿ ಪ್ರೇಮಾಂಕುರ.


          ----ಚಿನ್ಮಯಿ

No comments:

Post a Comment