Saturday, January 11, 2025

ಸಕಲ ಬ್ರಹ್ಮಾಂಡದ ಮನುಷ್ಯರೆಲ್ಲರ ಗುರಿ ಒಂದೇ...

ನಾವೆಲ್ಲರೂ ಒಂದೇ. ನಮ್ಮೆಲ್ಲರ ಗುರಿ ಒಂದೇ- ಅದುವೇ "ಭಗವಂತನ ಧ್ಯಾನದೊಳು ತಲ್ಲೀನರಾಗಿ ಲೀನವಾಗೋದು."

ಇದನ್ನು ಸಾಕಾರಗೊಳ್ಳಿಸಲು ಮನುಷ್ಯರಾದ ನಾವುಗಳು ಹಲವಾರು ಧರ್ಮಗಳನ್ನು, ಕರ್ಮಗಳನ್ನು, ಜಾತಿಗಳನ್ನು, ನೀತಿಗಳನ್ನು, ಮತಗಳನ್ನು, ಪಥಗಳನ್ನು, ಚಿಂತೆಗಳನ್ನು, ಚಿಂತನೆಗಳನ್ನು, ಭಾವಗಳನ್ನು, ಭಾವನೆಗಳನ್ನು, ರೂಪಗಳನ್ನು, ರೂಪಕಗಳನ್ನು ಹಾಗೂ ಇನ್ನೂ ಅನೇಕ ಇತ್ಯಾದಿಗಳನ್ನು ಚೌಕಟ್ಟಾಗಿ ಸೃಷ್ಟಿಸಿಕೊಂಡು ಹರಸಾಹಸ ಪಡುತ್ತಿದ್ದೇವೆ. ಇಂತಹ ಅನೇಕ ವಿಶಿಷ್ಟ, ವೈವಿಧ್ಯ ಗೊಂದಲಗಳಿಂದಲೇ ನಾವುಗಳು ತಲ್ಲೀನತೆಯಿಂದ ಭಗವಂತನಲ್ಲಿ ಲೀನವಾಗೋದು ಅತೀ ಕಠಿಣವಾಗಿಬಿಟ್ಟಿದೆ.

ಇಂತಹ ಎಲ್ಲಾ ಕಟ್ಟುಪಾಡುಗಳನ್ನೆಲ್ಲಾ ಭೇದಿಸಿ ದಾಟಿ ಜ್ಞಾನ ಮಂದಿರದೊಳು ಪ್ರೇಮ ಜ್ಯೋತಿಯ ಬೆಳಗಿದರೇ ತಲ್ಲೀನರಾಗಿ ಭಗವಂತನಲ್ಲಿ ಲೀನವಾಗೋದ್ರಲ್ಲಿ ಸಂಶಯವೇ ಇಲ್ಲ.

ಇದನ್ನ ಬಹಳ ಸ್ಪಷ್ಟವಾಗಿ ಹೇಳುವಂತಹ ಸಕಲ ಬ್ರಹ್ಮಾಂಡದ ಒಂದೇ ಒಂದು ಆತ್ಮ— ಭಾಷೆ, ಭಾವ, ವಿದ್ಯೆ, ಜ್ಞಾನ ಅಂದ್ರೆ ಅದುವೇ "ಸನಾತನ ಧರ್ಮ." ಇಲ್ಲಿ 'ಸನಾತನ'ವೆಂದರೇ ಶಾಶ್ವತವಾಗಿರುವಂತಹದು ಹಾಗೂ 'ಧರ್ಮ'ವೆಂದರೇ ನಮ್ಮಾತ್ಮದಲ್ಲಡಗಿಹ ಪರಮಾತ್ಮನೆಂಬ ನಂದಾದೀಪದ ಬೆಳಕನ್ನು ಬೆಳಗಿಸಿ ಅದರ ಬೆಳಕಲ್ಲೇ ನಡೆದು ಬದುಕಿದರೆ ಅದೇ ಬೆಳಕಲ್ಲೇ ಮುಕ್ತಿ ಸಿಗುವುದೆಂಬುದನ್ನು ತಿಳಿಸುವಂತಹ ದಾರಿದೀಪವದು.


"ವಸುಧೈವ ಕುಟುಂಬಕಂ."

"ಸರ್ವೇ ಜನಾಃ ಸುಖಿನೋ ಭವಂತು."

"ಸರ್ವ ಜೀವರಾಶಿ ಸುಖಿನೋ ಭವಂತು."

"ಸರ್ವೇ ಭವಂತು ಸುಖಿನಃ."

🙏🏽🙇🏾‍♂️🕉️🤍


               ----ಚಿನ್ಮಯಿ

No comments:

Post a Comment