ಚಿತ್ರಕ್ಕೆ ಪದ್ಯ / ಉಲ್ಲೇಖ- ೯೭ |
ನೇಸರನ ರಥ ಬದಲಿಸಲು ಪಥ ಧನುವಿನಿಂದ ಮಕರದೆಡೆಗೆ,
ಆಗಸದಿ ಕಾಣುವುದೊಂದು ದಿವ್ಯ ಜ್ಯೋತಿ—
ಅದುವೇ ಅಯ್ಯಪ್ಪ ಸ್ವಾಮಿಯ ಕಾಂತಿ.
ಮಾಗಿಯ ಕಾಲ ಅಂತ್ಯದಿ ಸುಗ್ಗಿಯ ಕಾಲ ಶುರುವು,
ಅನ್ನದಾತನ ನಗುವೇ ಹಸಿವಿನ ಸುಖ ಕಾಮನೆ—
ಅದುವೇ ಸಂಕ್ರಮಣದ ಸಿಹಿ ಸೂಚನೆ.
ಅವರೆಕಾಯಿ-ಕಡಲೆಕಾಯಿ-ಗೆಣಸು-ಕಬ್ಬು ಸವಿಯುತಲಿ,
ಎಳ್ಳು-ಬೆಲ್ಲದ ಸಂಗಮದಿ ನಗು ನಗುತ ನಲಿಯುತಲಿ,
ಹಬ್ಬದ ಸಂಭ್ರಮಾಚರಣೆಯಲ್ಲೇ ಜೀವಿಸೋಣ.
ಸರ್ವರಿಗೂ ಸುಗ್ಗಿಯ ಹಬ್ಬ- "ಮಕರ ಸಂಕ್ರಾಂತಿ"ಯ ಶುಭಕಾಮನೆಗಳು.
----ಚಿನ್ಮಯಿ
No comments:
Post a Comment