ಹಾಡು: ನಗು ಎಂದಿದೆ ಮಂಜಿನ ಬಿಂದು
ಚಿತ್ರ: ಪಲ್ಲವಿ ಅನುಪಲ್ಲವಿ
ಮೂಲ ಸಾಹಿತ್ಯ: ಆರ್. ಎನ್. ಜಯಗೋಪಾಲ್
ಮೂಲ ಗಾಯನ: ಎಸ್. ಜಾನಕಿ
ಸಂಗೀತ: ಇಳಯರಾಜ
ಮರುಸಾಹಿತ್ಯ ಹಾಡು: ನಭ ವಾರಿಧಿ ಸೇರಿದೆ ಈಗ
--------------------------------------------------------------
--------------------------------------------------------------
ನಭ ವಾರಿಧಿ ಸೇರಿದೆ ಈಗ.
ನಭ ವಾರಿಧಿ ಸೇರಿದೆ ಈಗ.
ಮಳೆ ಹನಿಯ ಭಾವ ಮೇಘ.
ನಭ ವಾರಿಧಿ ಸೇರಿದೆ ಈಗ.
||ಪ||
ಚಿಗುರೆಲೆ ಒಮ್ಮೆ ನಕ್ಕರೆ ಗಾಳಿಗೆ ಬಂತು ಜೀವ.
ಮರಗಿಡ ಸೋಕೋ ಜೀವಂತ ಅಂಶವೇ ನೀರ ಭಾವ.
ಹಾಸಲು ಹಾಸಿಗೆ ಕಾನನವು.
ಮೂಡಿದೆ ಹಸುರಿಗೆ ಸಂತಸವು.
ಚಿಲಿಪಿಲಿ ಒಲವದು ಓ.
ಇಂದು ಮಾಗಲು ಓ.
ಎಂಥ ಸಂಭ್ರಮವೋ.
ಹಾಡೋ ಹಕ್ಕಿಯ ಇಂಚರ ಕಾವ್ಯ.
ಓಡೋ ಜಿಂಕೆಯ ಕುಣಿತ ಭವ್ಯ. ||೧||
ಆ....ತನನ....
ಜಾರುತ ಸಾಗೋ ಜಲ ಧಾರೆ
ಪಯಣವು ಮೌನ ಗಾನ.
ತರುಲತೆ ಬಳ್ಳಿ ನದಿ ಜೊತೆ
ನಡೆಸಿದೆ ಪ್ರೇಮ ಯಾನ.
ತೀರದಲಿ ಅಲೆಯ ಬರವಣಿಗೆ.
ನದಿಯದು ಕಡಲಿನ ಪ್ರೇಮನಗೆ.
ಮೂಡಿದೆ ಜೀವಸುಧೆ.
ಬಾನ ಅನುರಾಗ ಹಾಹಾ ಸೋಜಿಗ.
ಹಾರೋ ಹಕ್ಕಿಯ ಚಾರಣ ಲಾಸ್ಯ.
ಈಜೋ ಮೀನಿನ ನೆಗೆತ ದಿವ್ಯ.
ಹಾರೋ ಹಕ್ಕಿಯ ಚಾರಣ ಲಾಸ್ಯ. ||೨||
----ಚಿನ್ಮಯಿ
No comments:
Post a Comment