Tuesday, January 6, 2026

ಎಂಟನೆ ಸ್ವಂತ ಸಾಹಿತ್ಯ ಬರವಣಿಗೆ

ಹಾಡು: ನಾ ನಿನ್ನನ್ನು ಸೇರಲು...

ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಎಚ್)


ನಾ ನಿನ್ನನ್ನು ಸೇರಲು ಕಾತುರ.

ಈ ಹೃದಯ ಹಠವೇ ಸಡಗರ. ||ಪ||

ಮಾಯದ ಗಾಯವೇ ಪ್ರೇಮವು ಅಲ್ಲವೇ!

ಸಾವಿಗೂ ಅಂಜಿಕೆ ಕಾಯುವ ಕೋರಿಕೆ.

ಬೀಸುವ ಗಾಳಿಯು ವೃಕ್ಷವ ಅಪ್ಪಿದೆ.

ಸಾಗರ ಆಳವು ಆಗಸ ಮೋಡವು ಸೇರಿದೆ... |ಅನು ಪ|


ನಾ ನಿನ್ನನ್ನು ಸೇರಲು ಕಾತುರ.

ಈ ಹೃದಯ ಹಠವೇ ಸಡಗರ. ||ಪ||


ಬಾ ಕೇಳು ಬಾ ಈ ಬಡಿತವ.

ನನ್ನೆದೆಯ ಭಾವ ಲಹರಿಯ.

ಗಾಢ ಪ್ರೇಮಕ್ಕೂ ಕಾಯೋ ಬೇಗುದಿ!

ಈ ಖಾಯಿಲೇಗೆ ನೀನೆ ಔಷಧಿ. ||Verse||

ಭಾವದ ಗಾಳಕೆ ಸಿಲುಕಿದೆ ರಾಗವು.

ಜೀವನ ಸಾಥಿಯೇ ಬೇಕಿದೆ ಸನಿಹವು.

ಸೋಲುವೆ ಈಗಲೇ ನಿನ್ನನ್ನು ಗೆಲ್ಲಲು.

ಕನಸಲೂ ನಿನ್ನನೇ ಹೃದಯವು ಬೇಡಿದೆ ಸೇರು ಬಾ... |ಅನು ಪ|


ನಾ ನಿನ್ನನ್ನು ಸೇರಲು ಕಾತುರ.

ಈ ಹೃದಯ ಹಠವೇ ಸಡಗರ. ||ಪ||


       ----ಚಿನ್ಮಯಿ

No comments:

Post a Comment