Don't wait for a CHANGE to happen. Instead CHANGE YOURSELF, then automatically CHANGE happens.
----Chinmayi
Don't wait for a CHANGE to happen. Instead CHANGE YOURSELF, then automatically CHANGE happens.
----Chinmayi
ಮೋರಿಯೊಳ ಮಳೆ ಮಿಂದರೂ ಶುಚಿ ಆಪುದಿಲ್ಲ.
ಸೇರಬೇಕು ಆತ್ಮದೊಳು ಪರಮಾತ್ಮನ ಸದ್ಭಾವನೆ—
ಅರಿವಿನ ಶುಚಿಯ ಉಗಮಕ್ಕೆ ಚಿನ್ಮಯಿ.
"ಭಾವಾರ್ಥ:"
ಮೋರಿಯೊಳಗೆ ಅದೆಷ್ಟೇ ಮಳೆ ನೀರು ಸೇರಿದರೂ ಮೇಲ್ನೋಟಕ್ಕೆ ಶುಚಿ ಕಾಣುವುದೇ ಹೊರತು ಆಳದಲ್ಲಿ ಕೊಳಕು ಆಗೆಯೇ ಕೊಳೆತು ನಾರುತ್ತಿರುತ್ತದೆ ಹಾಗೂ ತನ್ನ ಸೇರೋ ಮಳೆ ನೀರನ್ನು ಕೊಳಕು ಮಾಡುತ್ತದೆ. ಆಳದಿಂದ ಶುಚಿಯಾದಾಗಲೇ ಶುದ್ಧ ನೀರಿನ ರೂಪ ಪಡೆಯುವುದು.
ಹಾಗೆಯೇ, ಮನುಷ್ಯರ ವಿಚಾರದಲ್ಲೂ ಸಹ ಮೇಲ್ನೋಟಕ್ಕೆ ಆಡಂಬರ ಪೂಜೆ-ಪನಸ್ಕಾರಗಳು ಅದೆಷ್ಟೇ ಮಾಡಿದರೂ ಸಹ ಪರಮಾತ್ಮನು ಒಲಿಯಲ್ಲ, ಅಂಧಕಾರವ ದೂಡಿ ಪರಿಶುದ್ಧತೆ ಹಾಗೂ ಸದ್ಭಾವದ ಅರಿವಿಂದ ಆತ್ಮದಲ್ಲಿ ನೆಲೆಸಿಹ ಪರಮಾತ್ಮನನ್ನು ಒಲಿಸಿದರೇ ಭಕ್ತಿಯ ಉಗಮದಿಂದ ಪರಮಾತ್ಮನ ಸಾಕ್ಷಾತ್ಕಾರವಾಗುವುದು.
----ಚಿನ್ಮಯಿ
Worshipping through pure mind and heart is the best way to access the best portal of life called GOD.
----Chinmayi
ನವ ದಂಪತಿಗಳ
ನವ ಜೀವನದ
ವಿರಹ ಯಾತನೆ
ಅದುವೇ ಆಷಾಢ ಪ್ರೇಮ.
ಬಳಿ ಸೇರಲಾಗದೆ
ಕಾಯೋ ತವಕದಿ
ಸನಿಹ ಭಾವನೆ
ಎದೆಯೊಳಗೆ ಉಗಮ.
ಇರುವೆ ಬಳಿಯಲಿ
ಸಿಹಿಯನ್ನಿರಿಸಿ
ತಾಕದಂಗೆ ತಡೆಯುವ
ಅಪರಾಧ ಬಲು ಘೋರ.
ಹೀಗೆಯೇ ಆಗಿರಲು
ನವಜೋಡಿ ಪರಿಸ್ಥಿತಿ
ಹೇಗೆ ತಾನೆ ಇಳಿಸಲು
ಸಾಧ್ಯವು ಎದೆಯ ಭಾರ...!
ಕುಸುಮದಲ್ಲಡಗಿಹ
ಸವಿಯನ್ನೀರುತ
ಮಕರಂದ ತಯಾರಿಗೆ
ಜೇನು ಹುಳುವಿಗೇರಪ್ಪಣೆ...?
ಹಾಗೆಯೇ ಸಖ-ಸಖಿಯ
ಒಲವ ಸಂಗಮಕ್ಕೆ
ಅಡಚಣೆಯ ಕುರಿತು
ಹೃದಯ ಬೇಡಿದೆ ಸ್ಪಷ್ಟನೆ...!
ಎಲ್ಲೆ ಮೀರಿದ ಚಳಿಗೆ
ನಲುಗಿ ಹೋಗುತ
ವಿಯೋಗ ಸವಿಯುತ
ಒಂದು ಮಾಸವು ಕಳೆದಾಯ್ತು.
ಪ್ರೇಯಸಿ ಹಾದಿಯ
ಎದುರು ನೋಡುತ
ಮುಗುಳುನಗುತ
ಎದೆ ಕುಣಿಯಲು ನೋವೇ ಮರೆಯಾಯ್ತು..
----ಚಿನ್ಮಯಿ
![]() |
| ಚಿತ್ರಕ್ಕೆ ಪದ್ಯ- ೭೧ |
ಹೇ ಮಾತೆ ಜಗತ್ಜನನಿ ನಿನ್ನಿಂದಲೇ ಎನಗೆ ಆರೋಗ್ಯ-ಶಕ್ತಿಯ ಭಿಕ್ಷೆಯು. ಇದೋ ನಿನ್ನ ಪುತ್ರನ ನಮನಗಳು...
ಹೇ ಮಾತೆ ಮಹಾಲಕ್ಷ್ಮಿ ನಿನ್ನಿಂದಲೇ ಎನಗೆ ಹಣ-ಐಶ್ವರ್ಯದ ಭಿಕ್ಷೆಯು. ಇದೋ ನಿನ್ನ ಪುತ್ರನ ನಮನಗಳು...
ಹೇ ಮಾತೆ ಸರಸ್ವತಿ ನಿನ್ನಿಂದಲೇ ಎನಗೆ ವಿದ್ಯೆ-ಬುದ್ಧಿಯ ಭಿಕ್ಷೆಯು. ಇದೋ ನಿನ್ನ ಪುತ್ರನ ನಮನಗಳು...
ತ್ರಿದೇವಿಗಳಲ್ಲಿ ವಾಣಿಯೇ ಎನ್ನ ಪ್ರೀತಿಯ ಮಾತೇ. ಇದೋ ನಿನ್ನ ಪ್ರೀತಿಯ ಪುತ್ರನ ಶತಕೋಟಿ ನಮನಗಳು...
----ಚಿನ್ಮಯಿ
ಇದೀಗ ಜನಿಸಿರುವ ಹಸುಳೆಯಿಂದಿಡಿದು,
ಇನ್ನೇನು ಸಾಯುತ್ತಿರುವ-ಸತ್ತಿರುವ ಮನುಷ್ಯರವರೆಗೂ—
ಪಂಚಭೂತಗಳಿಂದಿಡಿದು,
ಸಕಲಜೀವರಾಶಿಗಳವರೆಗೂ—
ಎಲ್ಲರೂ ಎನಗೆ ಗುರುವೇ.
ಎಲ್ಲರಿಗೂ ತಲೆ ಬಾಗಿರುವೇ.
ಎಲ್ಲರಿಗೂ ನಮಿಸಿರುವೇ.
ಎಲ್ಲರೊಳಗೊಂದಾಗಿರುವೇ...
----ಚಿನ್ಮಯಿ
![]() |
| ಚಿತ್ರಕ್ಕೆ ಪದ್ಯ- ೬೯ |
ಗೋಧೂಳಿ ವೇಳೆಯಲಿ ತಂಗಾಳಿ ಬೀಸುತಲಿ,
ಬಾನಿಗೆ ಭಾನು ಉಡಿಸುವಾಗ ಕೇಸರಿ—
ಒಲವ ಮಂಟಪದಡಿ ನಮ್ಮಿಬ್ಬರ ಮಿಲನ.
ನದಿಯೊಳ ಸವಿದೆವು ಆ ಸುಂದರ ಕ್ಷಣ.
ಮೇಘಗಳು ಗದರಿ ತಾ ಬಿಕ್ಕಿ ಬಿಕ್ಕಿ ಅಳುವಾಗ,
ಇಳೆಯು ಆಗಸ ತಾಕಿ ಉಡುವಂತೆ ಹಸಿರ—
ನಮ್ಮಿಬ್ಬರ ಸಿಹಿ ಕಾದಾಟದ ಸವಿ ಸಮಯ.
ಅದರಿಂದಿರೋ ಮಧುರ ಸುಮಧುರ ಪ್ರಣಯ.
ಶಶಿಯ ಆಗಮನ ಬೇಡವೆನಿಸುವಷ್ಟು,
ಒಳ ಮನಸ್ಸನ್ನು ಹೊಕ್ಕಿರಲು ವಾತಾವರಣ—
ಈಗೆಯೇ ಸದಾ ಇದ್ದುಬಿಟ್ಟರೇ ಅದೆಷ್ಟು ಸಂತಸ!
ಅದಾಗದೆಂದಿಗೂ ಜೊತೆ ಆವರಿಸಿರಲು ನೀರಸ...!
----ಚಿನ್ಮಯಿ
ತಣ್ಣನೆಯ ಗಾಳಿಯೊಡನೆ ಆ ರವಿಯ ಬಿಸಿ ಶಾಖ ಸೇರಿ ಸುಖದ ಭಾಸವಾದಂತೆಯೇ—
ಈ ವಿರಹದ ಬೇಗುದಿಯಲಿ ಬೇಯುತ್ತಿರುವ ಹೃದಯಕ್ಕೆ ಆಕೆಯ ಸನಿಹದ ಅಪ್ಪುಗೆ...
----ಚಿನ್ಮಯಿ
Sanathana Dharma teaches us everything for living a life, but one must follow these below three steps to become a "Complete Human"—
As the first step, the one who decodes it.
As the second step, the one who learns from it.
As the third and final step which is most important, the one who follows and practices it in life.
----Chinmayi
Inject kindness and good thinking inside everyone's mind by helping others or being there for them in their tough times not only who you know even for unknown people also,
then automatically everyone starts—
believing in Humans,
believing in Humanity,
believing in Good and
most importantly believing in God.
----Chinmayi
Things are broken from various External Pressure.
Mind and Heart are broken from our own Internal Pressure.
----Chinmayi
ತನ್ನ ಬಳಿ ಏನೂ ಇಲ್ಲದಿದ್ದರೂ ಅಥವಾ ಸ್ವಲ್ಪವೇ ಇದ್ದರೂ, ಕೊಂಚವು ಯೋಚಿಸದೇ-ಏನನ್ನೂ ಅಪೇಕ್ಷಿಸದೇ ದಾನ ಮಾಡುವವ—
ತನಗೆಷ್ಟೇ ಕಷ್ಟ ಬಂದರೂ, ಅದೇನೇ ಆದರೂ ದೇವರನ್ನು ನಂಬುವವ—
ಈ ಮೇಲಿನೆರಡು ಗುಣವುಳ್ಳವರು ಸರ್ವ ಶ್ರೇಷ್ಠರು ಅಖಂಡ ವಿಶ್ವಗಳಲ್ಲಿಯೂ...
----ಚಿನ್ಮಯಿ
ತಾಯಿ ಹೆತ್ತರು, ತಂದೆಯ ಕಂಗಳಲಿ ಆನಂದಭಾಷ್ಪ.
ಪುಟ್ಟ ಕೈ ಕಾಲುಗಳ ಮೆಲ್ಲನೆ ತಾಕುತ ಅನುಭವಿಸುವವ- ಅಪ್ಪ.
ಎತ್ತಾಡಿಸಿ, ಕೈ ಹಿಡಿದು ನಡೆಸಿ, ಹೆಗಲೇರಿಸಿ ತೋರಿದರು ಪ್ರಪಂಚ-
ಅದೇನೇ ಕಂಡರು ಅವರ ಆ ನಗುವೊಂದೇ ಸುಂದರ ಪ್ರಪಂಚ.
ತುಂಬು ಹೃದಯದಿ ಪ್ರೇಮ ಧಾರೆಯೆರೆದು ಕೋಪದಿಂದಲೇ ಪ್ರೀತಿಸೋ ಏಕೈಕ ವ್ಯಕ್ತಿ.
ಬೇಕು ಬೇಡವ ತಿಳಿದು ತನಗೆ ಕಷ್ಟವಾದರೂ ಇಷ್ಟದಿ ಕೊಡಿಸೋ ಮಹಾನ್ ಶಕ್ತಿ.
ಮನೆಯನ್ನು ಒಬ್ಬರೇ ಮುನ್ನಡೆಸಿ ತನಗೆಷ್ಟೇ ದುಃಖವಿದ್ದರೂ ತೋರದ ಜೀವ.
ಮನೆಯವರ ಸುಖ ಸಂತೋಷವಷ್ಟೇ ಅವರ ಬಾಳಿನ ಮುಖ್ಯ ಧ್ಯೇಯ.
ಬಾಳಿನುದ್ದಕ್ಕೂ ಬೆವರಿಳಿಸಿ ದುಡಿದ ಅಪ್ಪನಿಗೇ ಸರಿಸಾಟಿ ಯಾರಿರಲು ಸಾಧ್ಯ!
ಆ ಪವಿತ್ರ ಬೆವರಿಂದಲೇ ಈ ದೇಹ ಬೆಳೆದು ಜೀವದ ಉಸಿರಾಗಿರುವುದು ಪರಮ ಸತ್ಯ.
ತಾಯಿ ಮಕ್ಕಳಿಗೆ ಗುರುವಾದರೇ ತಂದೆಯೇ ಕುಟುಂಬಕ್ಕೆ ಗುರುವು.
ತಾಯಿ ಆತ್ಮವಾದರೇ ತಂದೆಯೇ ಆತ್ಮದಲ್ಲಡಗಿಹ ಪರಮಾತ್ಮನು.
----ಚಿನ್ಮಯಿ
ಅನುಮಾನದ ಬೆಳಕಿನಲ್ಲಿ
ಸತ್ಯದ ನೆರಳು—
ಪ್ರೀತಿ-ನಂಬಿಕೆಗಳ ಗೋರಿಯೊಳಗೆ...
ಅನುಮಾನದ ಬೆಳಕಿನಲ್ಲಿ
ಪ್ರೀತಿ-ನಂಬಿಕೆಯು—
ಸುಳ್ಳಿನ ನೆರಳಿನ ಗೋರಿಯೊಳಗೆ...
----ಚಿನ್ಮಯಿ
ನಮ್ಮೊಳಗಿಹ ರಾವಣನನ್ನು,
ನಮ್ಮೊಳಗಿಹ ರಾಮನಿಂದ ಸೋಲಿಸಲು—
ಆತ್ಮದಲ್ಲಿ ನೆಲೆಸಿಹ ಶ್ರೀ ರಾಮನನ್ನೇ ಒಲಿಸಬೇಕು..
----ಚಿನ್ಮಯಿ
ನಮ್ಮೊಳಗಿಹ ಕೌರವರನ್ನು,
ನಮ್ಮೊಳಗಿಹ ಪಾಂಡವರಿಂದ ಸೋಲಿಸಲು—
ಆತ್ಮದಲ್ಲಿ ನೆಲೆಸಿಹ ಶ್ರೀ ಕೃಷ್ಣನನ್ನು ಒಲಿಸಬೇಕು..
----ಚಿನ್ಮಯಿ
ವಿಶ್ವ ಗುರು, ವಿಶ್ವ ಮಾನವ, ಭಗವಂತ
ಶ್ರೀ ಕೃಷ್ಣನ ಉಪದೇಶದಿಂದ—
ಬದುಕಲು ದಾರಿ ದೀಪ.
ಬದುಕಿಗೆ ನಂದಾದೀಪ.
----ಚಿನ್ಮಯಿ
ನೀಗಿಸು ಹೃದಯದ ಹಸಿವಾ,
ಕರುಣಿಸಿ ನಿರ್ವ್ಯಾಜ ಪ್ರೀತಿ..
ಗಾಳಿಯು ಮರ-ಗಿಡ ಸೇರುತ,
ತಕದಿಮಿ ಕುಣಿಸೋ ರೀತಿ..
ಅಳಿಸು ಬಾಳಿನೆಲ್ಲ ಕಷ್ಟವಾ,
ಪರಿಚಯಿಸಿ ಮುಗುಳುನಗು..
ನಗಿಸಿ ನಗುವುದರಿಂದಲೇ,
ಅಲ್ಲವೇ ಸುಖಮಯ ಬಾಳು..
ಕನಸು ನನಸಿಗೂ ಪ್ರೇಮವಾ,
ಧಾರೆಯೆರೆಸಿಕೊಳ್ಳೋ ಮೋಹ..
ಮೋಹದ ಸೆರೆಯಲಿ ತನು,
ಮನವೂ ಬೆಸೆದರೆ ಸ್ನೇಹ..
----ಹರೀಶ್ರಘು💛❤️
ಅಭ್ಯಂಜನ ಸ್ನಾನದಿಂಡಿದು ತಲ್ಲೀನ ದೇವರ ಪೂಜೆಯವರೆಗೂ ನವ ಚೈತನ್ಯದುಲ್ಲಾಸದ ಹಬ್ಬದಾಚರಣೆಯಂತೆಯೇ ಯುಗ-ಯುಗಗಳಿಗೂ ಒಳ ಮನಸ್ಸಿನ ದೈವಿಕ ಭಾವ ಸದಾ ತೆರೆದಿರಲಿ—
ಅದುವೇ "ಒಳರಾಕ್ಷಸನ ಮರಣ, ಅಸುಳೆಯೆಂ ದೈವದ ಜನನಸೂಚಕ ಸಂವತ್ಸರಾರಂಭ ಕಾಲ."
ಜೀವನದ ಎಷ್ಟೋ ದ್ವಂದ್ವತೆಯ ಸಮರವ ಅಂತ್ಯಗೊಳಿಸಿ ಸಮಚಿತ್ತ ಭಾವದೊಳು ಜೀವಿಸಲೊಂದವಕಾಶ—
ಅದುವೇ "ನವ ಯುಗದ ಆದಿ- ಚೈತ್ರಮಾಸದ ಪ್ರಾರಂಭ ಕಾಲ."
'ಸರ್ವೇ ಜನಾಃ ಸುಖಿನೋ ಭವಂತು.'
'ಸರ್ವ ಜೀವರಾಶಿ ಸುಖಿನೋ ಭವಂತು.'
ಸರ್ವರಿಗೂ ಯುಗಾದಿಯ ಶುಭಾಶಯಗಳು. ಹೊಸ ವರ್ಷದ ಶುಭಾಶಯಗಳು.
----ಚಿನ್ಮಯಿ
![]() |
| ಚಿತ್ರಕ್ಕೆ ಪದ್ಯ- ೬೫ |
ನಾ ಬರೆಯಲು ಹೋದರೆ ನಿಮ್ಮ ಕುರಿತು,
ಕೈ ನಡುಕ ಶುರುವಾಗಿ ಲೇಖನಿ ಜಾರಿತು.
ಒಂಥರ ಸುಮಧುರ ಭಯದಿ ಎದೆಬಡಿತ ಏರಿದೆ,
ಆ ನಗು ಮುಖವು ಸದಾ ಒಳ-ಒಳಗೆ ಕಾಡಿದೆ.
ನೀವ್ ಇಲ್ಲದಿದ್ದರೂ ಇದ್ದೀರಿ ಅನ್ನೋ ಭಾವನೆ ಒಲವು,
ಅತೀವ ದುಃಖದಲ್ಲೂ ನಗುವುದ ಹೇಳಿಕೊಟ್ಟ ನೀವೇ ಗುರುವು.
ಬದುಕ ಅನುಭವಿಸಲು, ಜೀವಿಸಲು, ಸತ್ತ ಮೇಲೂ ಬದುಕಲು ತೋರಿದ ಮಹಾನ್ ವ್ಯಕ್ತಿತ್ವದ ವ್ಯಕ್ತಿ—
ಎಷ್ಟೋ ಆತ್ಮದೊಳು ಪರಮಾತ್ಮನಾಗಿ ಸದಾ ಜೀವಿಸುತ್ತಿರುವ ಚಿರಂಜೀವಿಯಂತ ಚೇತನ ಶಕ್ತಿ—
ನೀವೇ ಅದು ನೀವೇ ಎಂದೆಂದಿಗೂ ನೀವೇ.
ನಾ ಬರೆಯಲು ಹೋದರೆ ನಿಮ್ಮ ಕುರಿತು,
ಕೈ— ತಾ ಕುಣಿದು ಶಾಯಿಯ ಕುಣಿಸಿತು.
----ಚಿನ್ಮಯಿ
ಕೊರಗಿದ ಬಾನಿನಲ್ಲಿ ಮೂಡಿ ಬರಲು ಚಂದಿರ,
ಕದಡಿದ ನೀರಿನಲ್ಲಿ ನಿನ್ನ ಮೊಗವು ಸುಂದರ.
ತಳಮಳ ಏಕೆ ಇನ್ನೂ ನಾನೇ ಇರಲು ಹತ್ತಿರ!!
ಜೊತೆಯಲೇ ಈಜುವ ಬಾರೇ ಒಲವ ಸಾಗರ..
ಮೇಘಗಳ ಅಳುವಿಗೆ ನಕ್ಕು ಕುಣಿದಂಗೆ ಕಾಂತಾರ,
ಬೇಗುದಿಯ ನೀಗಿಸುವೆ ಇಂದೆ ಇನ್ನೇಕೆ ಬೇಸರ!!
ಸಿಹಿಯಾದ ಅಪ್ಪುಗೆಯ ನೀಡೋ ಒಪ್ಪಿಗೆಯ ನಿರ್ಧಾರ—
ಎದೆಭಾವದಿ ಠಸ್ಸೆಯೊತ್ತು- ಎದೆಯೊಳು ಪ್ರೇಮ ಸಂಚಾರ..
ಅಘನಾಶಿನಿ ಒಳಗಿರೆ ಆತ್ಮ ಪರಿಶುದ್ಧತೆ ಸಾಕಾರ,
ಪ್ರೇಮಗಂಗೆ ಜಳಕವೇ ಶುಧ್ಧ ಪ್ರೇಮೋದಯಕ್ಕ್ ಆಧಾರ.
ಕೋಗಿಲೆಯೇ ನಾಚಿಕೊಂಡ ಪ್ರೇಮದುಂಧುಬಿಯ ಝೇಂಕಾರ—
ದಯಮಾಡಿ ನೀ ಕೇಳೊಮ್ಮೆ- ನೀಡೆನ್ನ ಪ್ರೇಮಕ್ಕೆ ಆಕಾರ.!
----ಚಿನ್ಮಯಿ
ಪ್ರೇಮದ ಸವಾರಿ:
ಕಣ್ಣ ರೆಪ್ಪೆಗೂ ನಾಚಿಕೆ ಆಯಿತೇನೋ..
ಕಣ್ಣ ರೆಪ್ಪೆಗೂ ನಾಚಿಕೆ ಆಯಿತೇನೋ....
ನಿನ್ನನ್ನು ಕಂಡ,
ನಿನ್ನನ್ನು ಕಂಡ ಈ ಸಮಯ...
ನಿನ್ನನ್ನು ಕಂಡ....
ವಿರಹದ ತಯಾರಿ:
ಸಣ್ಣ ಹನಿಯೊಂದು ಮೂಡಿದೆ ಕಣ್ಣಲೀಗ..
ಸಣ್ಣ ಹನಿಯೊಂದು ಮೂಡಿದೆ ಕಣ್ಣಲೀಗ....
ನನ್ನದೆ ತಪ್ಪು,
ನನ್ನದೆ ತಪ್ಪು ನೆನೆದಾಗ...
ನನ್ನದೆ ತಪ್ಪು....
----ಚಿನ್ಮಯಿ
ಯಾರ್ಯಾರೋ—
ಮೈದಾ ಒಳಕ್ಕೆ ಈರುಳ್ಳಿ ಹಾಕ್ಬಿಟ್ರೇ ಅದು "ವೆಜ್ ಪಫ್ಸ್" ಆಗಕ್ಕಿಲ್ಲ,
ಮೈದಾ ಒಳಕ್ಕೆ ಸುಮ್ಕೆ ಮೊಟ್ಟೆ ಹಾಕ್ಬಿಟ್ರೇ ಅದು "ಎಗ್ ಪಫ್ಸ್" ಆಗಕ್ಕಿಲ್ಲ,
ಹಾಗೆಯೇ "ಪನೀರ್ ಪಫ್ಸ್", "ಕ್ಯಾಫ್ಸಿಕಮ್ ಪಫ್ಸ್", "ಚಿಕನ್ ಪಫ್ಸ್" ಇತ್ಯಾದಿಗಳು.
ಕೆಲವೇ ಕೆಲವರು ಮಾತ್ರ—
ಮೈದಾ ಒಳಕ್ಕೆ ಕರೆಕ್ಟ್ ತರ್ಕಾರಿ ಮಿಶ್ರಣದಿಂದ ಒಳ್ಳೇ ಟೇಸ್ಟ್ನ "ವೆಜ್ ಪಫ್ಸ್",
ಮೈದಾ ಒಳಕ್ಕೆ ಮೊಟ್ಟೆ ಹಾಕಿ ಕರೆಕ್ಟ್ ಹಾಗೂ ಒಳ್ಳೇ ಟೇಸ್ಟ್ನ "ಎಗ್ ಪಫ್ಸ್",
ಹಾಗೆಯೇ "ಪನೀರ್ ಪಫ್ಸ್", "ಕ್ಯಾಫ್ಸಿಕಮ್ ಪಫ್ಸ್", "ಚಿಕನ್ ಪಫ್ಸ್" ಇತ್ಯಾದಿಗಳನ್ನ ಮಾಡೋರು ಅಂದ್ರೆ.
----ಚಿನ್ಮಯಿ
![]() |
| ಚಿತ್ರಕ್ಕೆ ಪದ್ಯ- ೬೨ |
ನದಿಯು,
ಹುಟ್ಟುವುದು ಎಲ್ಲೋ.
ಹರಿಯುವುದು ಇನ್ನೆಲ್ಲೋ.
ಸಾಯುವುದು ಮತ್ತೆಲ್ಲೋ.
ಹುಟ್ಟಿನಿಂದ ಸಾವಿನವರೆಗು ಸಾವಿರಾರು ಅಡೆತಡೆಗಳ ಲೆಕ್ಕಿಸದೆ ಮುನ್ನುಗ್ಗಿ ಸಾಗುವುದು, ಕೊನೆಗೆ ಸಾಗರ ಸೇರುವುದು.
ಜೀವನವು ಸಾರ್ಥಕವು.
ಸತ್ತ ನಂತರ ಮರಳಿ ಜನಿಸುವುದು ಸಾಗರ-ಮೋಡಗಳ ಮಿಲನದಿ ಸಹಾಯದಿಂದ, ಹನಿಗಳ ತೋರಣದ ಭೂ ಸ್ವರ್ಶದಿಂದ.
ನವ ಜನನದ ಖುಷಿಯು.
ನದಿಯು,
ಮರಳಿ ಹುಟ್ಟುವುದು ಅಲ್ಲಿಯೇ.
ಹರಿಯುವುದು ಅದೇ ಹಳೆ ದಾರಿಯಲ್ಲಿಯೇ (ಆದರೇ, ಈಗ ಹೊಸ ಅಡೆತಡೆಗಳ ಹೆದರಿಸಲು ಕೂಡ ಸಿದ್ದವು).
ಸಾಯುವುದು ಅದೇ ಸಾಗರದಲ್ಲಿಯೇ.
ಇದೊಂದು ಮುಗಿಯದ ಅಧ್ಯಾಯ.
ನಿರಂತರ ಮರುಕಳಿಸುವ ದೈವದ ನಿರ್ಧಾರ.
ನದಿಯ ಜೀವನದಿಂದ ಮನುಷ್ಯರು ಬಹಳಷ್ಟು ಕಲಿಯೋದಿದೆ, ನನಗೆ ಆ ದಿನ ಅರಿವಾಗಿ ಈ ಸಾಲುಗಳ ಬರೆದೆ.
----ಚಿನ್ಮಯಿ
ಮನಸ್ಸಿಗೆ ಕಾಮದೂಟ ಉಣಿಸಿದರೆ ಮನುಷ್ಯನಾಗುವನು ಕಾಮಾಸುರ.
ಮನಸ್ಸಿಗೆ ಪ್ರೇಮದೂಟ ಉಣಿಸಿದರೆ ಮನುಷ್ಯನ ಹೃದಯ ಪ್ರೇಮ ಮಂದಿರ.
----ಚಿನ್ಮಯಿ
ಅಂಕು-ಡೊಂಕಿನ ರಸ್ತೆಯ ಮೇಗಡೆ ದಿನವೂ ಸವಾರಿ.
ಗಾಡಿ ಜೊತೆ ಬಾಡಿ ಬೌಂಸಿಂಗ್ ಹ್ಯಾಂಡಲ್ ಸ್ವಿಂಗಿಂಗ್.
ಬೇಸಿಗೆ-ಚಳಿಗಾಲದಲ್ಲಿ ಪರವಾಗಿಲ್ಲ ರಸ್ತೆ ಕಾಣುವುದು,
ಬೈಕ್-ಕಾರ್ ಓಡ್ಸ್ಬೋದು.
ಮಳೆಗಾಲದ ಕಥೆಯೇ ಬೇರೆ,
ಆಗಲೇ ಉದಯಿಸುವುದು ಸಿಟ್ಟಿನ ಮೋರೆ.
ಗಾಡಿ ಓಡ್ಸೋ ಕಷ್ಟಕ್ಕೆ ಆಗಾಗ ನೆನೆಸ್ಕೊಂಡ್ ನೆನೆಸ್ಕೊಂಡ್ ಉಗಿಯುವೆವು,
"ಎಂಎಲ್ಎ - ಎಂಎಲ್ ಸಿ - ಎಂಪಿ" ಗಳಿಗೆ "ಥೂ ಬ್ಯಾವರ್ಸಿಗಳ ನಿಮ್ಮ್ ಮಕ್ಕೆ, ಉದ್ದಾರ ಆಗಕ್ಕಿಲ್ಲ ದ್ಯಾವ್ರಾಣೆ" ಎಂದು.
----ಚಿನ್ಮಯಿ
ಮಾಡಿ ನೋಡು ಅಹಂಕಾರದ ಸಂಹಾರ,
ಮರುಚಣವೇ ಉದ್ಭವಿಸುತ್ತದೆ ಸಂಸ್ಕಾರ.
'ಸಂಸ್ಕಾರ'ದಿಂದಲೇ 'ಅಹಂಕಾರ'ದ ಸಂಹಾರ...
----ಚಿನ್ಮಯಿ
ಮನುಷ್ಯ ಇತರ ಮನುಷ್ಯರನ್ನು ಹಾಗೂ ಸಕಲ ಜೀವರಾಶಿಗಳನ್ನು ತನ್ನಲ್ಲಿ ಒಬ್ಬರೆಂದು ಮಾನವೀಯತೆಯಿಂದ ಕಂಡರೆ ಪ್ರಪಂಚ ಎಷ್ಟೋ ಸುಂದರಮಯ
----ಚಿನ್ಮಯಿ
ದೇವರೇ ಈ ಬದುಕು ನಿನ್ನಯ ಭಿಕ್ಷೆ.
ತಪ್ಪಿಗೆ ಅನುಭವಿಸಲೇಬೇಕು ಶಿಕ್ಷೆ.
ಬಂದಂತೆ ಬದುಕುವುದೇ ಧರ್ಮ.
ಇಲ್ಲವೇ ಕಾದು ಕುಳಿತಿರುವುದು ಕರ್ಮ.
----ಚಿನ್ಮಯಿ
ಬದುಕ- ಬಂದಂತೆ ಜೀವಿಸು.
ಎಲ್ಲರ ನಿಷ್ಕಲ್ಮಶದಿ ಪ್ರೀತಿಸು.
ಇಷ್ಟಿದ್ದರೆ ದ್ವೇಷ-ಆಕ್ರೋಷ ಇನ್ನೇತಕೆ?
ಖುಷಿಯಿಂದ ಜೀವಿಸಿದರೆ ಸಾರ್ಥಕವು ಬದುಕೇ..
----ಚಿನ್ಮಯಿ
There are two successes to be achieved in life:
•The first one (which everyone needs it desperately and almost all achieve it) is to earn name, fame, and money- All comprises of getting settled.
•The second one and the most important one (which only few achieve but most fail to achieve) is to lead a peaceful, happy life by "being human".
----chinmayi
ಚೊಚ್ಚಲ ಚಲನಚಿತ್ರದ ಸಾಹಿತ್ಯ ಬರವಣಿಗೆ
ಹಾಡು: ನಿಜವಾ ಇದು
ಚಲನಚಿತ್ರ: ಲವ್ ಲೆಟರ್
ಸಾಹಿತ್ಯ: ಚಿನ್ಮಯಿ
ನಿಜವಾ ಇದು ಭ್ರಮೆಯ ಇದು ಆಶ್ಚರ್ಯದ ಭಾವ!
ನಿಜವಾ ಇದು ಭ್ರಮೆಯ ಇದು ಆಶ್ಚರ್ಯದ ಭಾವ!
ಎದೆಕುಸುಮವೇ ಮುಳುವಾದರೆ ತಾಳಲಾರೆ ನೋವ. ||ಪ||
ಅರ್ಧಾಂಗಿಯಾಗಿ ಜೊತೆಯಲ್ಲೇ ಇದ್ದು ಕಡು ವಂಚಕಿಯಾದೆ.
ಅರ್ಧಾಂಗಿಯಾಗಿ ಜೊತೆಯಲ್ಲೇ ಇದ್ದು ಕಡು ವಂಚಕಿಯಾದೆ.
ಕೈಹಿಡಿದು ನೀನು ಸಪ್ತಪದಿ ತುಳಿದು.
ಕೈಹಿಡಿದು ನೀನು ಸಪ್ತಪದಿ ತುಳಿದು.
ಅಗ್ನಿಸಾಕ್ಷಿಯಾಗಿ ನನ್ನಿಂದೆ ಬಂದು.
ಅಗ್ನಿಸಾಕ್ಷಿಯಾಗಿ ನನ್ನಿಂದೆ ಬಂದು.
ಬೆನ್ನಿಂದೆಯೇ ಪ್ರೀತಿ ಕೊಂದೆ ಇಂದು. ||೧||
ನಿಜವಾ ಇದು ಭ್ರಮೆಯ ಇದು ಆಶ್ಚರ್ಯದ ಭಾವ! ||ಅನು ಪ||
ಒಳಗೊಂದು ವೇಷ ಹೊರಗೊಂದು ವೇಷ ಎಂತೆಂಥ ಮೋಸ.
ಒಳಗೊಂದು ವೇಷ ಹೊರಗೊಂದು ವೇಷ ಎಂತೆಂಥ ಮೋಸ.
ನಗುಮುಖದೀ ಮುಖವಾಡವ ಧರಿಸಿ.
ನಗುಮುಖದೀ ಮುಖವಾಡವ ಧರಿಸಿ.
ನಟನೆಯಿಂದಲೇ ಅನುದಿನ ನಂಬಿಸಿ.
ನಟನೆಯಿಂದಲೇ ಅನುದಿನ ನಂಬಿಸಿ.
ಮನಃಶಾಂತಿಯ ಕೆಡಿಸಿ ದೂರಾದೆ ನೀ. ||೨||
ನಿಜವಾ ಇದು ಭ್ರಮೆಯ ಇದು ಆಶ್ಚರ್ಯದ ಭಾವ!
ಎದೆಕುಸುಮವೇ ಮುಳುವಾದರೆ ತಾಳಲಾರೆ ನೋವ. ||ಪ||
----ಚಿನ್ಮಯಿ
ಎದೆ ಮುಗಿಲ ಮೋಡಗಳು ಭಾರವಾಗಲು—
ನಯನಗಳು ಸುರಿಸುತ್ತಿವೆ ಧಾರಾಕಾರ ಮಳೆಯ.
ಕರಿ ಮೋಡಗಳ್ಹಿಂದೆ ಎಲ್ಲೋ ನಗೆ—
ಸೂರ್ಯನು ಮರಳಿ ಉದಯಿಸಬಹುದೇನೋ ಪ್ರಾಯಶಃ!
ಎದೆದೋಟದ ಹೂಗಳೆಲ್ಲವೂ ಬಾಡಿ—
ಕಳೆದುಕೊಂಡಿರುವ ಹಾಗಿದೆ ಬದುಕಿನ ಉತ್ಸಾಹವ.
ಯಾರಾದರೂ ನವ ಚೈತನ್ಯವೆಂ—
ನೀರುಣಿಸಿ ಮರಳಿ ಬದುಕಿಸಬಹುದೇನೋ ಪ್ರಾಯಶಃ!
----ಚಿನ್ಮಯಿ
"Information" is the infinite dots hidden in nature.
"Knowledge" is how one tries to acquire as many dots as possible.
"Intelligence" is how one connects to the acquired dots.
"Wisdom" is how one leads life to the fullest after connecting with the dots.
----Chinmayi
"ನಾ ತಿನಿಸುವೆ, ನಾ ತಿನಿಸುವೆ."
'ನಾ ತಿನ್ನುವೆ, ನಾ ತಿನ್ನುವೆ.'
"ನೀ ಮೊದಲೋ ನಾ ಮೊದಲೋ ನೋಡುವೆ."
'ಓಹೋ! ಸರಿ ನಾನು ಸಹ ನೋಡುವೆ.'
"ಇಗೋ ಶುರುವು ಆಟ,
ಇದೇ ನಿನಗೆ ಊಟ.
ಅಗಲಿಸು ಬಾಯಿಯನ್ನ,
ಕೈಯಿಗೆ ಕೊಡು ಕೆಲಸವನ್ನ."
'ಬಟಾಣಿ, ಈರುಳ್ಳಿ, ಟೊಮ್ಯಾಟೊ, ಮಿಕ್ಸ್ಚರ್,
ಮಸಾಲೆ, ಪಾನಿಯ ಪರ್ಫೆಕ್ಟ್ ಮಿಕ್ಸ್ಚರ್.
ಆಹಾ! ರುಚಿಯೋ ರುಚಿಯು,
ನಾಲಗೆಗೇನೋ ಸಡಗರದ್ಕುಣಿತವು.'
'ಮೊದಮೊದಲು ನಾ ಮೊದಲು,
ತದನಂತರ ನೀನೇ ಮೊದಲು.'
"ಒಂದರಿಂದಿನ್ನೊಂದು ಪಾನಿಪುರಿ,
ತಿನಿಸುವುದರಲ್ಲಿ ನಾನೇ ಕಿಂಗು ರೀ.
ಇನ್ನಷ್ಟು ತಿನಿಸುವೆ ಬಾ ಬಾರೋ,
ತಿಂದು ಗೆದ್ದರೆ ನೀನೇ ಹೀರೋ."
'ಅಯ್ಯೋ! ಶುರುವಿನಲ್ಲಿ ಮಸ್ತೋ ಮಸ್ತು,
ತಿಂದು ಸಾಕಾಗೀಗ ಸುಸ್ತೋ ಸಸ್ತು.'
----ಚಿನ್ಮಯಿ