Thursday, July 18, 2024

ರಾಧೆಶ್ಯಾಮ

ಚಿತ್ರಕ್ಕೆ ಪದ್ಯ- ೮೩


ಓ ಸಖಿಯೇ,

ಕೇಳೆನ್ನ ಸತಿಯೇ,

ನಿನ್ನೆದೆಯಂಗಳದೊಳು ಎನ್ನ ಕೊಳಲ ದನಿಯ ನಿನಾದ.

ಎನ್ನೆದೆಯಂಗಳದಿ ಪ್ರೇಮ ನಾದ ಲಹರಿಗಳು ಪ್ರಮೋದ.

ನೀನೆನ್ನ ರಾಧೆಯು.

ನಾನಿನ್ನ ಶ್ಯಾಮನು.


ಓ ಸಖನೇ,

ಕೇಳೆನ್ನ ಪತಿಯೇ,

ಸಾಕಿನ್ನು ಗೋಪಿಕೆಯರೊಡನೆಯ ರಾಸಲೀಲೆಯು.

ಬೇಕಿನ್ನು ನನ್ನೊಡನೆಯ ತುಂಟ ಪ್ರೇಮ ಲೀಲೆಯು.

ನೀನೆನ್ನ ಕೃಷ್ಣನು.

ನಾನಿನ್ನ ಭಾಮೆಯು.


ಓ ಪ್ರಿಯೆಯೇ,

ಓ ಪ್ರಿಯನೇ,

ನಮ್ಮನಂತ ಪ್ರೇಮಕಥೆಯ ಜಗಕ್ಕೇಳುವ ಬಾ.

ನೃತ್ಯ ಮಂಜರಿಯೊಡನೆ ಕುಣಿದು ನಲಿದಾಡುವ ಬಾ.

ನೀನೆನ್ನ ಲಕ್ಷ್ಮಿಯು.

ನೀನೆನ್ನ ವಿಷ್ಣುವು.


                ----ಚಿನ್ಮಯಿ

Wednesday, July 17, 2024

ಚಿರಕಾಲ ಆಭಾರಿ

ನನ್ನಗಲಿಕೆಯ ಮುನ್ನವೇ—

ನಿಜವಾದ ಬದುಕಿನರ್ಥ ತಿಳಿದೆನು.

ಬದುಕುವುದೇಗೆಂದು ಕಲಿತು ಬದುಕಿದೆನು.

ನಾ ನಿಮಿತ್ತವಷ್ಟೇ ಇಲ್ಲಿ, ಇದಕ್ಕೆಲ್ಲಾ ಮೂಲ ಕಾರಣವಾದ ಭಗವಂತನಿಗೆ ನಾ ಚಿರಕಾಲ ಆಭಾರಿ.


             ----ಚಿನ್ಮಯಿ

ಎಡೆಬಿಡದ ಆತ್ಮ ಯಾತ್ರೆ

ಚಿತ್ರಕ್ಕೆ ಪದ್ಯ- ೮೨

ನೀ ಜನಿಸಿದ ನಕ್ಷತ್ರದೆಡೆಗೇ ನಿನ್ನ ದೇಹವ ತೊರೆದು ನಿನ್ನದಾಗಿದ್ದ ಆತ್ಮದ ಶವಯಾತ್ರೆ—

ಮತ್ತೋರ್ವರ ಬದುಕಿಗುಸಿರಾಗಲೆಂದು ಪಂಕ್ತಿಯಲ್ಲಿ ಕಾದಿದೆ ಕಾಣುತ ಅಗಣಿತ ಆತ್ಮಗಳ ಜಾತ್ರೆ.


              ----ಚಿನ್ಮಯಿ

ಹಾಲಿನಿಂದ ಬದುಕಿಗೊಸನುಭವ

ಹಾಲನ್ನು ಹೆಪ್ಪಾಕಿದರೆ ಮೊಸರಾಗುವುದು.

ಮೊಸರನ್ನು ಕಡೆದರೆ ಮಜ್ಜಿಗೆಯಾಗುವುದು.

ಮಜ್ಜಿಗೆಯನ್ನು ಇನ್ನೆಚ್ಚು ಕಡೆದರೆ ಬೆಣ್ಣೆಯಾಗುವುದು.

ಬೆಣ್ಣೆಯನ್ನು ಕಾಯಿಸಿದರೆ ತುಪ್ಪವಾಗುವುದು.


ಈ ಮೇಲಿನ ಪ್ರಕ್ರಿಯೆಯಂತೆ ಹಾಲು ಕೊಂಚ ಕೊಂಚವೇ ಸಮಯಕ್ಕನುಸಾರವಾಗಿ ಪರಿವರ್ತನೆಯಿಂದ ಹೊಸನುಭವಗೊಳಗಾಗುವುದು.

ಇದೇ ರೀತಿಯಲ್ಲಿ, ಮನುಷ್ಯ ಕೂಡ ಸಮಯಕ್ಕನುಸಾರವಾಗಿ ಪರಿವರ್ತನೆಗೊಳಗಾಗಿ ಬದುಕಿನೊಸನುಭವ ಅನುಭವಿಸಿದರೇನೆ ಬದುಕು ಪರಿಪೂರ್ಣ.

                     ----ಚಿನ್ಮಯಿ

Inner Self = True Ultimate Guru

Right from our childhood if we start studying, understanding, analysing, decoding and revising our great epic and ancient writings, then I hope we can limit ourselves to depend upon external Guru's for seeking truth, knowledge and wisdom of life.

Because, when we practice and adapt those teachings in our lives, our inner self (GOD) will become our ultimate Guru and will teach everything to us.

                      ----Chinmayi

Sunday, July 14, 2024

ಪ್ರಥಮ ಸೂರ್ಯ ಕಿರಣಗಳು

ಚಿತ್ರಕ್ಕೆ ಪದ್ಯ- ೮೧


ಪ್ರತಿದಿನ ದೇಹಕ್ಕೆ ಸೂರ್ಯದೇವನ ಪ್ರಥಮ ಕಿರಣಗಳ ಸ್ಪರ್ಶವು ಆತ್ಮಜ್ಯೋತಿ ಬೆಳಗಲು—

ಒಳ ನೆಲಸಿಹ ಪರಮಾತ್ಮನಿಗೆ ಅದುವೇ ಕಿರಣೋತ್ಸವಭಿಷೇಕರ್ಚನೆಯು.


               ----ಚಿನ್ಮಯಿ

Sunday, July 7, 2024

ಅವಳ ಪ್ರೇಮ... ಅವಳ ನೆನಪು...

ಚಿತ್ರಕ್ಕೆ ಪದ್ಯ- ೮೦


ಅವಳ ಪ್ರೇಮ. ಹೃದಯ ಧಾಮ.

ಅವಳ ನೆನಪು. ಮನದ ಹೊಳಪು.


ಅವಳೋ ರೂಪರಾಶಿ. ಅವಳೇ ರೂಪದರ್ಶಿ.

ಸೌಮ್ಯ ಲತೆಗಳೇ ಕೇಶವು. ಎರಡು ದಿವ್ಯಾಸ್ತ್ರಗಳೇ ಹುಬ್ಬು.

ಕೆಂದಾವರೆಯೇ ನಯನಗಳು. ರಮ್ಯ ಕಾಂತಿಯು ನೋಟವು.

ಇಬ್ಬನಿಯೇ ಮೊಗದ ಸಿಗ್ಗು. ನಗುವು ಅರಳೋ ಮೊಗ್ಗು.

ಅಧರ ಕುಸುಮ ಜೇನೆ. ಭ್ರಮರ ಎಂದೂ ನಾನೆ.


ಅವಳೋ ಪ್ರೇಮದರಸಿ. ಅವಳೇ ಹೃದಯವಾಸಿ.

ಕೊರಳ ದನಿ ಕೊಳಲ ಇಂಚರ. ನಡುವ ಬಳುಕು ಅಮೋಘ ಸಾಗರ.

ಬೆರಳಸ್ಪರ್ಷವೇ ಕೆನ್ನೆಗಾವಲು. ಪಾದಗುರುತೇ ಕಾಯಂ ಅಮಲು.

ಹೃದಯ ನಿರ್ಮಲ ದೇವಸ್ಥಾ‌ನ. ಮನಸ್ಸು ಅನಂತ ಚೇತನ.

ಅವಳೆನ್ನ ಬದುಕ ಅಧ್ಯಾಪಕಿಯು‌. ಅವಳನುರಾಗವೇ ಅಧ್ಯಯನವು.


ಅವಳ ಪ್ರೇಮ. ಸುಧೆಯ ಸುಮ.

ಮಧುರ ನೆನಪು. ಅಗಣಿತ ಬೆಳಕು.


          ----ಚಿನ್ಮಯಿ

Thursday, July 4, 2024

ಬೆಳಕು

ಚಿತ್ರಕ್ಕೆ ಪದ್ಯ- ೭೯


ಹಗಲಿಗೆ ಆದಿತ್ಯನೇ ಬೆಳಕು.

ಇರುಳಿಗೆ ಚಂದ್ರ-ತಾರೆಯರೇ ಬೆಳಕು.

ತಗಡುಗತ್ತಲೆಗೆ ಕಂದೀಲೇ ಬೆಳಕು.

ಕಂಗಾಲ ಜೀವಕ್ಕೆ ಭರವಸೆಯೇ ಬೆಳಕು.


ಬೀಸೋ ಗಾಳಿಗೆ ದಿಕ್ಕುಗಳೇ ಬೆಳಕು.

ಹರಿಯುವ ನೀರಿಗೆ ಹಾದಿಯೇ ಬೆಳಕು.

ಅಂಧಕಾರಕ್ಕೆ ಜ್ಞಾನವೇ ಬೆಳಕು.

ಸಂಪೂರ್ಣತೆಗೆ ವಿನಯವೇ ಬೆಳಕು.


ಹಾರೋ ಹಕ್ಕಿಗೆ ಆಕಾಶವೇ ಬೆಳಕು.

ಜಾರೋ ಜಲಪಾತಕ್ಕೆ ನೆಲವೇ ಬೆಳಕು.

ಸಂದಿಗ್ಧತೆಗೆ ಮೌನವೇ ಬೆಳಕು.

ಸಂಕೀರ್ಣತೆಗೆ ಧ್ಯಾನವೇ ಬೆಳಕು.


ಬಿಳಿ ಮೇಘಗಳಿಗೆ ಕರಿ ಮೇಘಗಳೇ ಬೆಳಕು.

ವಿಶಾಲ ಸಾಗರಕ್ಕೆ ನದಿಗಳೇ ಬೆಳಕು.

ಸುಂದರ ಸೃಷ್ಟಿಗೆ ಭೀಕರ ಅಂತ್ಯವೇ ಬೆಳಕು.

ಧರ್ಮಕ್ಕೆ ಅಧರ್ಮವೇ ಬೆಳಕು.


ಬೀಳೋ ವೃಕ್ಷಕ್ಕೆ ತನ್ನ ಬೀಜವೇ ಬೆಳಕು.

ಬಾಡೋ ಕುಸುಮಕ್ಕೆ ದುಂಬಿಯೇ ಬೆಳಕು.

ನಾಳೆಗಳಿಗೆ ಇಂದು-ನಿನ್ನೆಗಳೇ ಬೆಳಕು.

ಇಂದಿಗೆ ಈ ಕ್ಷಣವೇ ಬೆಳಕು.


ಬೆಳೆವ ಪೈರಿಗೆ ಮಣ್ಣು-ನೀರು-ಗಾಳಿಯೇ ಬೆಳಕು.

ಬೆಳೆದ ಭತ್ತಕ್ಕೆ ಕುಡುಗೋಲೇ ಬೆಳಕು.

ಬಾಲ್ಯಕ್ಕೆ ಆಟ-ಪಾಠ-ಮುಗ್ಧತೆಯೇ ಬೆಳಕು.

ಯೌವ್ವನಕ್ಕೆ ಬಾಲ್ಯದ ಕಲಿಕೆಯೇ ಬೆಳಕು.


ಕೆಟ್ಟದಕ್ಕೆ ಒಳ್ಳೆಯದೇ ಬೆಳಕು.

ಒಳ್ಳೆಯದಕ್ಕೆ ಕರ್ಮ ಸಿದ್ಧಾಂತವೇ ಬೆಳಕು.

ಮುಪ್ಪಿಗೆ ಬಾಲ್ಯ-ಯೌವ್ವನದ ಸಿಹಿ ನೆನಪುಗಳೇ ಬೆಳಕು.

ಮುಪ್ಪಿಗೆ ಜೀವನವಧಿಯ ಅನುಭವಗಳೇ ಬೆಳಕು.


ಸರಿಯುವ ಸಮಯಕ್ಕೆ ಋತುಗಳೇ ಬೆಳಕು.

ದಿಟ್ಟ ಜ್ಞಾನಾರ್ಜನೆಗೆ ಋಷಿಗಳೇ ಬೆಳಕು.

ಹಸಿವಿಗೆ ಅನ್ನಪೂರ್ಣೆಯೇ ಬೆಳಕು.

ಹಸಿದವನಿಗೆ ಅನ್ನದಾತನೇ ಬೆಳಕು.


ಜಗದ ಹಸಿವಿಗೆ ರೈತನೇ ಬೆಳಕು.

ದೇಶದ ಉಳಿವಿಗೆ ಯೋಧನೇ ಬೆಳಕು.

ಮಕ್ಕಳ ಬೆಳವಣಿಗೆಗೆ ತಂದೆ-ತಾಯಿಯರೇ ಬೆಳಕು.

ಅಡ್ಡ ದಾರಿಗೆ ಒಳ್ಳೆ ಸಂಗಡವೇ ಬೆಳಕು.


ಕಂಗಳಿಗೆ ತನ್ನ ರೆಪ್ಪೆಗಳೇ ಬೆಳಕು.

ಮಿಂಚುಹುಳುವಿಗೆ ತನ್ನ ಬೆನ್ನೇ ಬೆಳಕು.

ಧೈರ್ಯಕ್ಕೆ ಭಯವೇ ಬೆಳಕು.

ಸಂಶಯಕ್ಕೆ ಕಾಲವೇ ಬೆಳಕು.


ಹೆಮ್ಮರಕ್ಕೆ ಸಸಿಯೇ ಬೆಳಕು.

ಹಿರಿಯರಿಗೆ ಹಸುಳೆಯೇ ಬೆಳಕು.

ಹಿರಿತನಕ್ಕೆ ಕಿರಿತನವೇ ಬೆಳಕು.

ಸಿರಿತನಕ್ಕೆ ಬಡತನವೇ ಬೆಳಕು.


ಭೋರ್ಗರೆಯುವ ಅಲೆಗಳಿಗೆ ತೀರವೇ ಬೆಳಕು.

ಅಹಂಕಾರದ ನಿಯಂತ್ರಣಕ್ಕೆ ಸಂಸ್ಕಾರವೇ ಬೆಳಕು.

ಉರಿಯುವ ಜ್ವಾಲಾಮುಖಿಗೆ ಪಾತಾಳವೇ ಬೆಳಕು.

ಎದೆಯ ಜ್ವಾಲೆಗೆ ಮನಃ ಶಾಂತಿಯೇ ಬೆಳಕು.


ಸಾವಿಗೆ ಹುಟ್ಟೇ ಬೆಳಕು.

ಮರು ಹುಟ್ಟಿಗೆ ಸಾವೇ ಬೆಳಕು.

ಸೋಲಿಗೆ ಗೆಲುವೇ ಬೆಳಕು.

ಮರು ಗೆಲುವಿಗೆ ಸೋಲೇ ಬೆಳಕು.


ಹೆದ್ದಾರಿಗೆ ಬೀದಿ ದೀಪಗಳೇ ಬೆಳಕು.

ಕಾಲ್ದಾರಿಗೆ ರೂಢಿಯೇ ಬೆಳಕು.

ಹಣತೆಗೆ ಎಣ್ಣೆಯೇ ಬೆಳಕು.

ಸಮತೆಗೆ ಮನೋಭಾವವೇ ಬೆಳಕು.


ಪ್ರೇಮಕ್ಕೆ ಆತ್ಮ ಸಮ್ಮಿಲನವೇ ಬೆಳಕು.

ಸಂಸಾರಕ್ಕೆ ನಂಬಿಕೆ-ಗೌರವಗಳೇ ಬೆಳಕು.

ಬಾಳ್ವೆಗೆ ನಗು ಮೊಗವೇ ಬೆಳಕು.

ಬಾಳಿಗೆ ಸಂತೃಪ್ತ ನಗುವೇ ಬೆಳಕು.


ಸ್ನೇಹಕ್ಕೆ ಅಜ್ಞಾತತೆಯೇ ಬೆಳಕು.

ಆತ್ಮೀಯತೆಗೆ ಪರಿಚಯವೇ ಬೆಳಕು.

ದ್ವೇಷಕ್ಕೇ ಸಂಯಮವೇ ಬೆಳಕು.

ಸಂಬಂಧಕ್ಕೆ ಕ್ಷಮೆಯೇ ಬೆಳಕು.


ಸೌಂದರ್ಯಕ್ಕೆ ಕುರೂಪವೇ ಬೆಳಕು.

ಜರಿಯುವಿಕೆಗೆ ಸರಳತೆಯೇ ಬೆಳಕು.

ಮೂಢತೆಗೆ ವಿಜ್ಞಾನವೇ ಬೆಳಕು.

ಬದುಕಿಗೆ ಸುಜ್ಞಾನವೇ ಬೆಳಕು.


ಕಲ್ಲು ಬಂಡೆಗೆ ಉಳಿ ಪೆಟ್ಟೇ ಬೆಳಕು.

ವಿಗ್ರಹಕ್ಕೆ ಅಭಿಷೇಕವೇ ಬೆಳಕು‌.

ಸಾಧಕನಿಗೆ ಗುರಿಯೇ ಬೆಳಕು.

ಸಾಧನೆಗೆ ಕ್ಷಮತೆಯೇ ಬೆಳಕು.


ಉತ್ತರಕ್ಕೆ ದಕ್ಷಿಣವೇ ಬೆಳಕು.

ಪೂರ್ವಕ್ಕೆ ಪಶ್ಚಿಮವೇ ಬೆಳಕು.

ಸರಿ ಉತ್ತರಕ್ಕೆ ಹಲವು ಪ್ರಶ್ನೆಗಳೇ ಬೆಳಕು.

ಮರುಪ್ರಶ್ನೆಗೆ ತಪುತ್ತರವೇ ಬೆಳಕು.


ಇತಿಹಾಸಕ್ಕೆ ಪುರಾಣಗಳೇ ಬೆಳಕು.

ಸತ್ಯಾನ್ವೇಷಣೆಗೆ ಪುರಾವೆಗಳೇ ಬೆಳಕು.

ಜಗದ ಸುಂದರತೆಗೆ ಅಂತರಂಗ ಶುದ್ಧಿಯೇ ಬೆಳಕು.

ಪರಿಪೂರ್ಣ ಬಾಳಿಗೆ ಬದುಕಿದ ರೀತಿಯೇ ಬೆಳಕು.


ಉತ್ತಮ ಸಮಾಜಕ್ಕೆ ವೇದ-ಉಪನಿಷತ್ಗಳೇ ಬೆಳಕು.

ಒಳ ಅರಿವಿಗೆ ಭಗವದ್ಗೀತೆಯೇ ಬೆಳಕು.

ದೇಹದ ಕಾಂತಿಗೆ ಆತ್ಮವೇ ಬೆಳಕು.

ಅಂತಃಕರಣಕ್ಕೆ ಪರಮಾತ್ಮನೇ ಬೆಳಕು.


                    ----ಚಿನ್ಮಯಿ

Tuesday, July 2, 2024

Why is India not yet developed...?

As everyone knows, before the entry of Islamic rulers and European countries into India and before colonisation and atrocities by them, India had a very rich culture, intellect and education. Even India was the wealthiest country in the world.

It's been 77 years since India got independence from Portugese, French and English, but it's still in struggling stages and it's still called a developing nation. The main reasons for these are the mind-set and comfort zone of we the great Indians. Most of us have become narrow minded.

If we realise and overcome this soon, we can become the superpower in the world in the terms of knowledge teaching and sharing, economy etc just like we used to be long long ago.


                         ----Chinmayi