Thursday, July 18, 2024

ರಾಧೆಶ್ಯಾಮ

ಚಿತ್ರಕ್ಕೆ ಪದ್ಯ- ೮೩


ಓ ಸಖಿಯೇ,

ಕೇಳೆನ್ನ ಸತಿಯೇ,

ನಿನ್ನೆದೆಯಂಗಳದೊಳು ಎನ್ನ ಕೊಳಲ ದನಿಯ ನಿನಾದ.

ಎನ್ನೆದೆಯಂಗಳದಿ ಪ್ರೇಮ ನಾದ ಲಹರಿಗಳು ಪ್ರಮೋದ.

ನೀನೆನ್ನ ರಾಧೆಯು.

ನಾನಿನ್ನ ಶ್ಯಾಮನು.


ಓ ಸಖನೇ,

ಕೇಳೆನ್ನ ಪತಿಯೇ,

ಸಾಕಿನ್ನು ಗೋಪಿಕೆಯರೊಡನೆಯ ರಾಸಲೀಲೆಯು.

ಬೇಕಿನ್ನು ನನ್ನೊಡನೆಯ ತುಂಟ ಪ್ರೇಮ ಲೀಲೆಯು.

ನೀನೆನ್ನ ಕೃಷ್ಣನು.

ನಾನಿನ್ನ ಭಾಮೆಯು.


ಓ ಪ್ರಿಯೆಯೇ,

ಓ ಪ್ರಿಯನೇ,

ನಮ್ಮನಂತ ಪ್ರೇಮಕಥೆಯ ಜಗಕ್ಕೇಳುವ ಬಾ.

ನೃತ್ಯ ಮಂಜರಿಯೊಡನೆ ಕುಣಿದು ನಲಿದಾಡುವ ಬಾ.

ನೀನೆನ್ನ ಲಕ್ಷ್ಮಿಯು.

ನೀನೆನ್ನ ವಿಷ್ಣುವು.


                ----ಚಿನ್ಮಯಿ

No comments:

Post a Comment