Sunday, July 7, 2024

ಅವಳ ಪ್ರೇಮ... ಅವಳ ನೆನಪು...

ಚಿತ್ರಕ್ಕೆ ಪದ್ಯ- ೮೦


ಅವಳ ಪ್ರೇಮ. ಹೃದಯ ಧಾಮ.

ಅವಳ ನೆನಪು. ಮನದ ಹೊಳಪು.


ಅವಳೋ ರೂಪರಾಶಿ. ಅವಳೇ ರೂಪದರ್ಶಿ.

ಸೌಮ್ಯ ಲತೆಗಳೇ ಕೇಶವು. ಎರಡು ದಿವ್ಯಾಸ್ತ್ರಗಳೇ ಹುಬ್ಬು.

ಕೆಂದಾವರೆಯೇ ನಯನಗಳು. ರಮ್ಯ ಕಾಂತಿಯು ನೋಟವು.

ಇಬ್ಬನಿಯೇ ಮೊಗದ ಸಿಗ್ಗು. ನಗುವು ಅರಳೋ ಮೊಗ್ಗು.

ಅಧರ ಕುಸುಮ ಜೇನೆ. ಭ್ರಮರ ಎಂದೂ ನಾನೆ.


ಅವಳೋ ಪ್ರೇಮದರಸಿ. ಅವಳೇ ಹೃದಯವಾಸಿ.

ಕೊರಳ ದನಿ ಕೊಳಲ ಇಂಚರ. ನಡುವ ಬಳುಕು ಅಮೋಘ ಸಾಗರ.

ಬೆರಳಸ್ಪರ್ಷವೇ ಕೆನ್ನೆಗಾವಲು. ಪಾದಗುರುತೇ ಕಾಯಂ ಅಮಲು.

ಹೃದಯ ನಿರ್ಮಲ ದೇವಸ್ಥಾ‌ನ. ಮನಸ್ಸು ಅನಂತ ಚೇತನ.

ಅವಳೆನ್ನ ಬದುಕ ಅಧ್ಯಾಪಕಿಯು‌. ಅವಳನುರಾಗವೇ ಅಧ್ಯಯನವು.


ಅವಳ ಪ್ರೇಮ. ಸುಧೆಯ ಸುಮ.

ಮಧುರ ನೆನಪು. ಅಗಣಿತ ಬೆಳಕು.


          ----ಚಿನ್ಮಯಿ

No comments:

Post a Comment