Friday, October 2, 2026

ಹಳ್ಳಿಯ ಬದುಕು

ಚಿತ್ರಕ್ಕೆ ಪದ್ಯ / ಉಲ್ಲೇಖ- ೧೨೦


ಪಚ್ಚ ಹಸುರ ಹುಟ್ಟಾಳೆ ಭೂತಾಯಿ.

ಸ್ವಚ್ಛ ಗಾಳಿಯ ಬೀಸಾಳೆ ಹಿತವಾಗಿ.

ಕಂದು ಬಣ್ಣದ ರವಿಕೆಯುಟ್ಟು ಮಿಂಚಾಳೆ.

ನೀಲಾಕಾಶ ನಾಚಿ ನೀರಾಯ್ತು ಮಳೆಯಾಗಿ.


ಹೊಲ ಗದ್ದೆ ಪೈರು ಬೆಳೆ ಕುಣ್ದಾವೆ.

ಮರ ಗಿಡಗಳು ಜೊತೆ ಸೇರಿ ನಲ್ದಾವೆ.

ಹಸು ಕರ ಕುರಿ ಕೋಳಿ ಕೂಗಾವೆ.

ಸುಖ ನಗು ನೆಮ್ದಿಯೂ ವಾಸ ಮಾಡಾವೆ.


ಆಯುರಾರೋಗ್ಯ ಮನ್ಸಂಗೆ ಇಲ್ಲಿಯೇ.

ಸ್ನೇಹ ಸಂಬಂಧಗಳ ಕನ್ನಡಿಯೂ ಇದುವೇ.

ಬದುಕು ಅದ್ಭುತ ಅನ್ಸೋದ್ ಇಲ್ಲಿಯೇ.

ಸಾಕಾದ ಜೀವಕ್ಕೆ ಕೊನೆ ನಿಲ್ದಾಣ ಇದುವೇ.



            ----ಚಿನ್ಮಯಿ

No comments:

Post a Comment