Tuesday, August 27, 2024

ದಶಮುಖ ರಾವಣ V/S ದಶಾವತಾರಿ ಮಹಾವಿಷ್ಣು

ಚಿತ್ರಕ್ಕೆ ಪದ್ಯ / ಉಲ್ಲೇಖ- ೯೦


ಮನುಷ್ಯರೆಲ್ಲರಲ್ಲೂ ಸಹ ಅಡಗಿರುವ ದಶಗುಣಗಳೆಂದರೆ— 

ಅಹಂ, ಕಾಮ, ಕ್ರೋಧ, ಮೋಹ, ಲೋಭ, ಮದ, ಮಾತ್ಸರ್ಯ, ಬುದ್ಧಿ, ಮನಸ್ಸು, ಚಿತ್ತ.

ಇವುಗಳಿಂದಲೇ ರಾವಣನನ್ನು ಸಹ ದಶಕಂಠ, ದಶಮುಖ ಎಂದು ಕರೆಯಲಾಗುವುದು. ರಾವಣನಿಗೆ ಇವುಗಳಲ್ಲೆದರ ಮೇಲೂ ಹಿಡಿತವಿತ್ತು ಆದರೇ ನಿಯಂತ್ರಣವಿರಲಿಲ್ಲ. ಆದ್ದರಿಂದಲೇ ಅವನ ಸರ್ವನಾಶವಾಗಿದ್ದು. ಇದರಲ್ಲಿ ಹೇಗೆ ನಮ್ಮ ಸ್ವಂತ ದಶಗುಣಗಳೇ ನಿಯಂತ್ರಣವಿಲ್ಲದಿದ್ದರೆ ನಮಗೆ ಹಿತಶತ್ರುವಾಗಬಹುದೆಂಬುದನ್ನು ಕಲಿಸುತ್ತದೆ.

ಮಹಾವಿಷ್ಣುವಿನ ದಶಾವತಾರದಿಂದ ಹೇಗೆ ಪ್ರಾಣಿಗಳಿಂದ ನಾವೆಲ್ಲರೂ ಮನುಷ್ಯರಾದೆವು ಹಾಗೂ ಬುದ್ಧಿವಂತಿಕೆಯ ಅಧಿಪತಿಯಾದ ಮೇಲೆ ಅದೇ ದಶಗುಣಗಳ ಹಿಡಿತ ಹಾಗೂ ನಿಯಂತ್ರಣದಿಂದ ಮಹಾಜ್ಞಾನಿ, ಪುರುಷೋತ್ತಮನಾಗಬಹುದೆಂಬುದನ್ನು ಒಂದೊಂದೇ ವಿಭಾಗವಾಗಿ ಅವತಾರಗಳ ರೂಪದಿಂದ ಕಲಿಸುತ್ತದೆ.

ಎರಡೂ ಕಥೆಗಳಿಂದ ಎಲ್ಲಾ ಮನುಷ್ಯರು ಸಹ ದಶಗುಣಗಳ ಮೇಲೆ ಹಿಡಿತದ ಜೊತೆಗೆ ನಿಯಂತ್ರಣವು ಇದ್ದರೇ ಮೇಧಾವಿ ಜೊತೆಗೆ ಪುರುಷೋತ್ತಮರಾಗಿಯೂ ಬದುಕಬಹುದೆಂಬುದನ್ನು ಕಲಿಸುತ್ತದೆ ಅದರದೇ ವಿಶಿಷ್ಟ ರೀತಿಯಲ್ಲಿ, ಆದರೇ ನಾವುಗಳು ಅದನ್ನು ಗ್ರಹಿಸಿ, ಅರ್ಥೈಸಿಕೊಂಡು, ಬದುಕಿ ಬಾಳಬೇಕಷ್ಟೇ...


       ‌         ----ಚಿನ್ಮಯಿ

No comments:

Post a Comment